ವಿಡಿಯೋ ಗೇಮ್ ಭ್ರಮೆಯಲ್ಲಿ.. ದಂಪತಿಗೆ ಚಾಕು ಚುಚ್ಚಿ ಚುಚ್ಚಿ ಕೊಂದೇ ಬಿಟ್ಟ!
ವಿಡಿಯೋ ಗೇಮ್ ಆಡ್ತಾ ಆಡ್ತಾ ಅದರ ಗುಂಗಲ್ಲೇ ಇದ್ದ ಭೂಪನೊಬ್ಬ.. ಟಾಕೀಸ್ಗೆ ಸಿನಿಮಾ ನೋಡಲು ಹೋದ ವೇಳೆ ದಂಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ. ಅಂದ ಹಾಗೆ, ಈ ವಿಚಿತ್ರ ಘಟನೆ ನೆದರ್ಲ್ಯಾಂಡ್ನಲ್ಲಿ ನಡೆದಿದೆ. ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೋರ್ಟ್ ಮುಂದೆ ಹಾಜರು ಪಡಿಸಿದರು. ಇದೇ ವೇಳೆ ಕೃತ್ಯ ಎಸಗಲು ಕಾರಣವೇನು ಎಂದು ಪ್ರಶ್ನಿಸಿದಾಗ ಆ 34 ವರ್ಷದ ಭೂಪ ಕೊಟ್ಟ ಉತ್ತರವೇನು ಗೊತ್ತಾ? ಫೋರ್ಟ್ನೈಟ್ ವಿಡಿಯೋ ಗೇಮ್ ಆಡ್ತಿದ್ದಾಗ.. ಏನಾಯಿತು ಅಂದ್ರೆ.. ನಾನು ಫೋರ್ಟ್ನೈಟ್ […]
ವಿಡಿಯೋ ಗೇಮ್ ಆಡ್ತಾ ಆಡ್ತಾ ಅದರ ಗುಂಗಲ್ಲೇ ಇದ್ದ ಭೂಪನೊಬ್ಬ.. ಟಾಕೀಸ್ಗೆ ಸಿನಿಮಾ ನೋಡಲು ಹೋದ ವೇಳೆ ದಂಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ. ಅಂದ ಹಾಗೆ, ಈ ವಿಚಿತ್ರ ಘಟನೆ ನೆದರ್ಲ್ಯಾಂಡ್ನಲ್ಲಿ ನಡೆದಿದೆ.
ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೋರ್ಟ್ ಮುಂದೆ ಹಾಜರು ಪಡಿಸಿದರು. ಇದೇ ವೇಳೆ ಕೃತ್ಯ ಎಸಗಲು ಕಾರಣವೇನು ಎಂದು ಪ್ರಶ್ನಿಸಿದಾಗ ಆ 34 ವರ್ಷದ ಭೂಪ ಕೊಟ್ಟ ಉತ್ತರವೇನು ಗೊತ್ತಾ?
ಫೋರ್ಟ್ನೈಟ್ ವಿಡಿಯೋ ಗೇಮ್ ಆಡ್ತಿದ್ದಾಗ.. ಏನಾಯಿತು ಅಂದ್ರೆ.. ನಾನು ಫೋರ್ಟ್ನೈಟ್ ಅನ್ನೋ ವಿಡಿಯೋ ಗೇಮ್ ಆಡುತ್ತೇನೆ. ನನಗೆ ಆ ಗೇಮ್ ಅಂದರೆ ಬಹಳ ಇಷ್ಟ. ಹಾಗಾಗಿ, ಟಾಕೀಸ್ನಲ್ಲಿ ಸಿನಿಮಾ ನೋಡುತ್ತಿದ್ದ ವೇಳೆ ಕೆಲವು ದೈತ್ಯ ಶಕ್ತಿಗಳು ನನ್ನ ಮಗಳನ್ನು ಹೊತ್ತೊಯ್ಯಲು ಬಂದಿದ್ದಾರೆ ಅನ್ನೋ ಭ್ರಮೆ ಆಯ್ತು. ಹಾಗಾಗಿ, ಆ ಭ್ರಮೆಯಲ್ಲಿ ನಾನು ಈ ಕೃತ್ಯ ಎಸಗಿಬಿಟ್ಟೆ ಎಂದು ನಿರ್ಲಿಪ್ತನಾಗಿ ಆತ ಹೇಳಿದ್ದಾನೆ!
Published On - 12:08 pm, Sat, 3 October 20