ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಅಫ್ಘಾನಿಸ್ತಾನದ ಕ್ರಿಕೆಟರ್ ನಜೀಬುಲ್ಲಾ
ರಸ್ತೆ ದಾಟುವಾಗ ವೇಗದಿಂದ ಬರುತ್ತಿದ್ದ ಕಾರೊದು ಢಿಕ್ಕಿ ಹೊಡೆದ ಪರಿಣಾಮ ತೀವ್ರ ಸ್ವರೂಪದ ಗಾಯಗಳೊಂದಿಗೆ ಆಸ್ಪತ್ರೆ ಸೇರಿರುವ ಅಫ್ಘಾನಿಸ್ತಾನದ ಆರಂಭ ಆಟಗಾರ ನಜೀಬುಲ್ಲಾ ತರಕಾಯಿ ಅವರ ಸ್ಥಿತಿ ಚಿಂತಾಜನಕವಾಗಿದೆಯೆಂದು ಅಫ್ಘಾನಿಸ್ತಾನದ ಕ್ರಿಕೆಟ್ ಸಂಸ್ಥೆಯ ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಜೀಮ್ ಜರ್ ಅಬ್ದುಲ್ರಹಿಮಾಜಿ ಹೇಳಿದ್ದಾರೆ. ನಜೀಬ್ ಶನಿವಾರದಂದು ಪೂರ್ವ ನನ್ಗರ್ಹರ್ನ ಮಾರ್ಕೆಟ್ ಬಳಿ ರಸ್ತೆ ದಾಟುವಾಗ ಅಪಘಾತ ಸಂಭವಿಸಿದ್ದು ಅವರನ್ನು ಕೂಡಲೇ ಆಸ್ಪತ್ರೆಯೊಂದಕ್ಕೆ ಶಿಫ್ಟ್ ಮಾಡಲಾಗಿದೆಯೆಂದು ಅಬ್ದುಲ್ರಹಿಮಾಜಿ ಹೇಳಿದ್ದಾರೆ. ‘‘ನಜೀಬ್ ಶುಕ್ರವಾರದಂದು ರಸ್ತೆ ಅಪಘಾತಕ್ಕೀಡಾಗಿದ್ದು ಅವರಿಗೆ ಐಸಿಯುನಲ್ಲಿ […]
ರಸ್ತೆ ದಾಟುವಾಗ ವೇಗದಿಂದ ಬರುತ್ತಿದ್ದ ಕಾರೊದು ಢಿಕ್ಕಿ ಹೊಡೆದ ಪರಿಣಾಮ ತೀವ್ರ ಸ್ವರೂಪದ ಗಾಯಗಳೊಂದಿಗೆ ಆಸ್ಪತ್ರೆ ಸೇರಿರುವ ಅಫ್ಘಾನಿಸ್ತಾನದ ಆರಂಭ ಆಟಗಾರ ನಜೀಬುಲ್ಲಾ ತರಕಾಯಿ ಅವರ ಸ್ಥಿತಿ ಚಿಂತಾಜನಕವಾಗಿದೆಯೆಂದು ಅಫ್ಘಾನಿಸ್ತಾನದ ಕ್ರಿಕೆಟ್ ಸಂಸ್ಥೆಯ ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಜೀಮ್ ಜರ್ ಅಬ್ದುಲ್ರಹಿಮಾಜಿ ಹೇಳಿದ್ದಾರೆ.
ನಜೀಬ್ ಶನಿವಾರದಂದು ಪೂರ್ವ ನನ್ಗರ್ಹರ್ನ ಮಾರ್ಕೆಟ್ ಬಳಿ ರಸ್ತೆ ದಾಟುವಾಗ ಅಪಘಾತ ಸಂಭವಿಸಿದ್ದು ಅವರನ್ನು ಕೂಡಲೇ ಆಸ್ಪತ್ರೆಯೊಂದಕ್ಕೆ ಶಿಫ್ಟ್ ಮಾಡಲಾಗಿದೆಯೆಂದು ಅಬ್ದುಲ್ರಹಿಮಾಜಿ ಹೇಳಿದ್ದಾರೆ.
‘‘ನಜೀಬ್ ಶುಕ್ರವಾರದಂದು ರಸ್ತೆ ಅಪಘಾತಕ್ಕೀಡಾಗಿದ್ದು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಬಹಳ ಗಂಭೀರವಾಗಿದೆ. ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಮುಂದೇನು ಕಾದಿದೆಯೋ ಹೇಳಲಾರೆವು ಅನ್ನುತ್ತಿದ್ದಾರೆ,’’ ಅಬ್ದುಲ್ರಹಿಮಾಜಿ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಡೆದಿರುವ ಮತ್ತೊಂದು ಅಪಘಾತದಲ್ಲಿ, ಕಾರಿನಲ್ಲಿಟ್ಟಿದ್ದ ಬಾಂಬ್ ಸ್ಫೋಟಗೊಂಡು, ಅಂಪೈರ್ ಬಿಸ್ಮಿಲ್ಲಾ ಜನ್ ಶಿನ್ವರಿ ಅವರು ಬದುಕುಳಿದಿದ್ದು, ಅವರ ಕುಟುಂಬದ 7 ಸದಸ್ಯರು ಸಾವಿಗೀಡಾಗಿದ್ದಾರೆ.