‘ಲಕ್ಷ್ಮೀ’ ಬ್ಯಾಂಕ್​ ಮಹಾದೋಖಾ, ಹಿರಿಯ ಜೀವಗಳು ಕಂಗಾಲು!

|

Updated on: Nov 23, 2019 | 12:04 PM

ದಾವಣಗೆರೆ: ಲಕ್ಷ್ಮೀ ಕೋ ಆಪರೇಟಿವ್​​​ ಬ್ಯಾಂಕ್ ಹೆಸರಲ್ಲಿ ಕಾಂಚಾಣವನ್ನ ಇಟ್ಕೊಂಡಿರೋ ಈ ಬ್ಯಾಂಕ್​​​​ನಿಂದ ಹಿರಿಯ ಜೀವಗಳೆಲ್ಲ ಕಂಗಾಲಾಗಿವೆ. ಲಾಯರ್​ ರಸ್ತೆಯಲ್ಲಿರೋ ಈ ಬ್ಯಾಂಕ್​​ಗೆ ಹಣ ಕಟ್ಟಿ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಯಾಕಂದ್ರೆ, ಕಟ್ಟಿರೋ ಠೇವಣಿಗೆ ವರ್ಷದಿಂದ ಬಡ್ಡಿಕೊಟ್ಟಿಲ್ವಂತೆ. ಅಲ್ಲದೆ, ಬ್ಯಾಂಕ್​ ಹೆಸ್ರಲ್ಲಿ ಕೊಡ್ತಿರೋ ಚೆಕ್​​ ಬೌನ್ಸ್​​ ಆಗ್ತಿದೆ. ಹೀಗಾಗಿ, ಸುಮಾರು 20 ಕೋಟಿ ಹಣವನ್ನ ಠೇವಣಿ ದಾರರಿಗೆ ನೀಡಬೇಕಾಗಿದ್ದು, ಹಣ ವಾಪಸ್​ ನೀಡುವಂತೆ ಆಗ್ರಹಿಸಿ ಜನರೆಲ್ಲ ಪ್ರತಿಭಟನೆ ಕೂತಿದ್ದಾರೆ. ಬ್ಯಾಂಕ್​ನಲ್ಲಿ ಅವ್ಯವಹಾರ ಆರೋಪ:  ವೈದ್ಯ ಎಸ್​​.ಆರ್​.ಹೆಗಡೆ […]

‘ಲಕ್ಷ್ಮೀ’ ಬ್ಯಾಂಕ್​ ಮಹಾದೋಖಾ, ಹಿರಿಯ ಜೀವಗಳು ಕಂಗಾಲು!
Follow us on

ದಾವಣಗೆರೆ: ಲಕ್ಷ್ಮೀ ಕೋ ಆಪರೇಟಿವ್​​​ ಬ್ಯಾಂಕ್ ಹೆಸರಲ್ಲಿ ಕಾಂಚಾಣವನ್ನ ಇಟ್ಕೊಂಡಿರೋ ಈ ಬ್ಯಾಂಕ್​​​​ನಿಂದ ಹಿರಿಯ ಜೀವಗಳೆಲ್ಲ ಕಂಗಾಲಾಗಿವೆ. ಲಾಯರ್​ ರಸ್ತೆಯಲ್ಲಿರೋ ಈ ಬ್ಯಾಂಕ್​​ಗೆ ಹಣ ಕಟ್ಟಿ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಯಾಕಂದ್ರೆ, ಕಟ್ಟಿರೋ ಠೇವಣಿಗೆ ವರ್ಷದಿಂದ ಬಡ್ಡಿಕೊಟ್ಟಿಲ್ವಂತೆ. ಅಲ್ಲದೆ, ಬ್ಯಾಂಕ್​ ಹೆಸ್ರಲ್ಲಿ ಕೊಡ್ತಿರೋ ಚೆಕ್​​ ಬೌನ್ಸ್​​ ಆಗ್ತಿದೆ. ಹೀಗಾಗಿ, ಸುಮಾರು 20 ಕೋಟಿ ಹಣವನ್ನ ಠೇವಣಿ ದಾರರಿಗೆ ನೀಡಬೇಕಾಗಿದ್ದು, ಹಣ ವಾಪಸ್​ ನೀಡುವಂತೆ ಆಗ್ರಹಿಸಿ ಜನರೆಲ್ಲ ಪ್ರತಿಭಟನೆ ಕೂತಿದ್ದಾರೆ.

ಬ್ಯಾಂಕ್​ನಲ್ಲಿ ಅವ್ಯವಹಾರ ಆರೋಪ: 
ವೈದ್ಯ ಎಸ್​​.ಆರ್​.ಹೆಗಡೆ ಅವ್ರು, ಬ್ಯಾಂಕ್​​​ ಅಧ್ಯಕ್ಷರಾಗಿದ್ದಾಗ ಅವ್ಯವಹಾರ ನಡೆದಿರೋ ಆರೋಪವಿದೆ. ಬ್ಯಾಂಕ್​​​​​​ನ ನಷ್ಟದ ವಿಷ್ಯ ಗೊತ್ತಾಗೇ, ಅವ್ರ ನಂತರ ಅಧ್ಯಕ್ಷರಾದ ಮೋಹನ್​ ದೀಕ್ಷಿತ್​​ 20 ದಿನದ ಹಿಂದೆ ಅವ್ರು ರಾಜಿನಾಮೆ ಕೊಟ್ರು. ಇನ್ನು, 20 ಮಂದಿ ಪ್ರಭಾವಿಗಳು ಬ್ಯಾಂಕ್​​ನಿಂದ ಕೋಟ್ಯಂತರ ರೂ. ಸಾಲ ಪಡೆದಿದ್ದು, ಆ ಹಣವನ್ನ ರಿಯಲ್​ ಎಸ್ಟೇಟ್​​​ನಲ್ಲಿ ತೊಡಗಿಸಿದ್ದಾರೆ. ಆದ್ರೀಗ ಸೈಟ್​ಗಳ ದರ ಕುಸಿದಿದ್ದು, ಬಂಡವಾಳ ವಾಪಸ್​​ ಬರುತ್ತಿಲ್ಲ.

ಇದಕ್ಕೆಲ್ಲ ಕಾರಣವಾದ ವ್ಯವಸ್ಥಾಪಕ ಸತೀಶ್​ ಅವ್ರು ಬ್ಯಾಂಕ್​ಗೆ ಬರುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದ್ದು, ಸಹಕಾರ ಇಲಾಖೆ ತನಿಖೆಗೆ ಆದೇಶ ನೀಡಿದೆ. ಕೈಯಲ್ಲಿ ಇದ್ದ ಹಣವನ್ನ ಠೇವಣಿ ಕಟ್ಟಿದ ಜನರೆಲ್ಲ ಈಗ ಬರಿಗೈ ಆಗಿದ್ದಾರೆ. ಬೀದಿಯಲ್ಲಿ ನಿಂತಿರೋ ಈ ಹಿರಿಯ ಜೀವಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ.

Published On - 8:15 am, Sat, 23 November 19