Karnataka Govt Holidays 2024: 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ ನೋಡಿ

| Updated By: Ganapathi Sharma

Updated on: Dec 22, 2023 | 3:03 PM

ಸಾರ್ವತ್ರಿಕ ರಜೆ 2024: 2024ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡಲಿವೆ. ಮುಸ್ಲಿಂ ಸಮುದಾಯದ ಹಬ್ಬಗಳು ನಿಗದಿತ ದಿನಾಂಕದಂದು ಬಾರದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ಆಪ್ಷನಲ್ ಹಾಲಿಡೇ ಪಡೆಯಲು ಅವಕಾಶವಿದೆ. ರಜಾ ದಿನಗಳ ವಿವರ ಇಲ್ಲಿದೆ.

Karnataka Govt Holidays 2024: 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ ನೋಡಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ನ.28: ಮುಂಬರುವ ವರ್ಷ 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು (Public Holidays) ಕರ್ನಾಟಕ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ರಜೆ ಇರಲಿವೆ. ಇವುಗಳು ಸೇರಿದಂತೆ ಸರ್ಕಾರದ ಕ್ಯಾಲೆಂಡರ್ ಪ್ರಕಾರ ಘೊಷಿಸಲಾಗಿರುವ ಸಾರ್ವತ್ರಿಕ ರಜಾ (Government Holidays) ದಿನಗಳ ಪಟ್ಟಿ ಇಲ್ಲಿ ನೀಡಲಾಗಿದೆ.

ಜನವರಿ 15, ಸೋಮವಾರ: ಉತ್ತರಾಯಣ ಪುಣ್ಯಕಾಲ, ಮಕರ ಸಕ್ರಾಂತಿ

ಜನವರಿ 26, ಶುಕ್ರವಾರ: ಗಣರಾಜ್ಯೋತ್ಸವ

ಮಾರ್ಚ್ 8, ಶುಕ್ರವಾರ: ಮಹಾ ಶಿವರಾತ್ರಿ

ಮಾರ್ಚ್ 29, ಶುಕ್ರವಾರ: ಗುಡ್​ ಫ್ರೈಡೆ

ಏಪ್ರಿಲ್ 9, ಮಂಗಳವಾರ: ಯುಗಾದಿ ಹಬ್ಬ

ಏಪ್ರಿಲ್ 11, ಗುರುವಾರ: ಖುತುಬ್ ಎ ರಂಜಾನ್

ಮೇ 1, ಬುಧವಾರ: ಕಾರ್ಮಿಕರ ದಿನಾಚರಣೆ

ಮೇ 10, ಶುಕ್ರವಾರ: ಬಸವ ಜಯಂತಿ, ಅಕ್ಷಯ ತೃತೀಯ

ಜೂನ್ 17, ಸೋಮವಾರ: ಬಕ್ರೀದ್

ಜುಲೈ 17, ಬುಧವಾರ: ಮೊಹರಂ ಕಡೇ ದಿನ

ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನಚಾರಣೆ

ಸೆಪ್ಟೆಂಬರ್ 7, ಶನಿವಾರ: ವರಸಿದ್ಧಿ ವಿನಾಯಕ ವೃತ

ಸೆಪ್ಟೆಂಬರ್ 16, ಸೋಮವಾರ: ಈದ್ ಮಿಲಾದ್

ಅಕ್ಟೋಬರ್ 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮವಾಸ್ಯೆ

ಅಕ್ಟೋಬರ್ 11, ಶುಕ್ರವಾರ: ಮಹಾನವಮಿ, ಆಯುಧಪೂಜೆ

ಅಕ್ಟೋಬರ್ 17, ಗುರುವಾರ: ಮಹರ್ಷಿ ವಾಲ್ಮೀಕಿ ಜಯಂತಿ

ಅಕ್ಟೋಬರ್ 31, ಗುರುವಾರ: ನರಕ ಚತುರ್ದಶಿ

ನವೆಂಬರ್ 1, ಶುಕ್ರವಾರ: ಕನ್ನಡ ರಾಜ್ಯೋತ್ಸವ

ನವೆಂಬರ್ 2, ಶನಿವಾರ: ಬಲಿಪಾಡ್ಯಮಿ, ದೀಪವಾಳಿ

ನವೆಂಬರ್ 18. ಸೋಮವಾರ: ಕನಕದಾಸ ಜಯಂತಿ

ಡಿಸೆಂಬರ್ 25, ಬುಧವಾರ: ಕ್ರಿಸ್​ಮಸ್

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬಡುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ (ಏಪ್ರಿಲ್ 14) ಮತ್ತು ಮಹಾವೀರ ಜಯಂತಿ (ಏಪ್ರಿಲ್ 21) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (ಅಕ್ಟೋಬರ್ 12) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತದೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಕಾ ಮುಖ್ಯಸ್ಥರು ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದಂದು ಬಾರದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ನೌಕರರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನದಂದು ರಜೆ ಮಂಜೂರು (ಆಪ್ಷನಲ್ ಹಾಲಿಡೇ) ಮಾಡಬಹುದು. ಸೆಪ್ಟೆಂಬರ್ 3 ಮಂಗಳವಾರ ಕೈಲ್ ಮೂಹೂರ್ತ, ಅಕ್ಟೋಬರ್ 17 ಗುರುವಾರ ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 14 ಶನಿವಾರ ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Tue, 28 November 23