AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಗಳಲ್ಲಿ ಹಿಂದೂ ಹಬ್ಬಗಳಿಗೆ ಕತ್ತರಿ, ಮುಸ್ಲಿಂ ಹಬ್ಬಗಳ ರಜೆ ವಿಸ್ತರಿಸಿದ ಸರ್ಕಾರ, ಶಿಕ್ಷಕರಿಗೆ ಬೇಸಿಗೆ ರಜೆ ಇಲ್ಲ

ಬಿಹಾರ ಸರ್ಕಾರವು ಶಾಲೆಗಳಲ್ಲಿ ಹಿಂದೂ ಹಬ್ಬಗಳಿಗೆ ಕತ್ತರಿ ಹಾಕಿ, ಮುಸ್ಲಿಂ ಹಬ್ಬಗಳಿಗೆ ರಜೆ ವಿಸ್ತರಣೆ ಮಾಡಿದೆ. ಬಿಹಾರದ ಶಿಕ್ಷಣ ಇಲಾಖೆ ಹೊರಡಿಸಿರುವ ಸಾಲಾ ಕ್ಯಾಲೆಂಡರ್​ನಲ್ಲಿ ರಕ್ಷಾ ಬಂಧನ, ಮಹಾಶಿವರಾತ್ರಿ, ಜನ್ಮಾಷ್ಟಮಿಯ ರಜೆಯನ್ನು ರದ್ದುಪಡಿಸಲಾಗಿದೆ. ಮುಸ್ಲಿಮರ ಹಬ್ಬ ಈದ್​ಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.

ಶಾಲೆಗಳಲ್ಲಿ ಹಿಂದೂ ಹಬ್ಬಗಳಿಗೆ ಕತ್ತರಿ, ಮುಸ್ಲಿಂ ಹಬ್ಬಗಳ ರಜೆ ವಿಸ್ತರಿಸಿದ ಸರ್ಕಾರ, ಶಿಕ್ಷಕರಿಗೆ ಬೇಸಿಗೆ ರಜೆ ಇಲ್ಲ
ವಿದ್ಯಾರ್ಥಿಗಳು
ನಯನಾ ರಾಜೀವ್
|

Updated on:Nov 28, 2023 | 2:51 PM

Share

ಬಿಹಾರ ಸರ್ಕಾರವು ಶಾಲೆಗಳಲ್ಲಿ ಹಿಂದೂ ಹಬ್ಬಗಳಿಗೆ ಕತ್ತರಿ ಹಾಕಿ, ಮುಸ್ಲಿಂ ಹಬ್ಬಗಳಿಗೆ ರಜೆ ವಿಸ್ತರಣೆ ಮಾಡಿದೆ. ಬಿಹಾರದ ಶಿಕ್ಷಣ ಇಲಾಖೆ ಹೊರಡಿಸಿರುವ ಶಾಲಾ ಕ್ಯಾಲೆಂಡರ್​ನಲ್ಲಿ ರಕ್ಷಾ ಬಂಧನ, ಮಹಾಶಿವರಾತ್ರಿ, ಜನ್ಮಾಷ್ಟಮಿಯ ರಜೆಯನ್ನು ರದ್ದುಪಡಿಸಲಾಗಿದೆ. ಮುಸ್ಲಿಮರ ಹಬ್ಬ ಈದ್​ಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ. ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೆ.ಕೆ.ಪಾಠಕ್ ಅವರು ಈ ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಇಲಾಖೆಯು 2024 ರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2024 ರ ಕ್ಯಾಲೆಂಡರ್ ಪ್ರಕಾರ, ಬೇಸಿಗೆ ರಜೆ ವಿದ್ಯಾರ್ಥಿಗಳಿಗೆ ಮಾತ್ರ. ಪ್ರಾಂಶುಪಾಲರು/ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಸರ್ಕಾರಿ ಕ್ಯಾಲೆಂಡರ್ ಪ್ರಕಾರ ಶಾಲೆಗೆ ಬರಲಿದ್ದಾರೆ.

ಇದರೊಂದಿಗೆ ಹಿಂದೂ ಹಬ್ಬ ರಕ್ಷಾಬಂಧನ, ಮಹಾಶಿವರಾತ್ರಿ, ಜನ್ಮಾಷ್ಟಮಿ, ಮಕರ ಸಂಕ್ರಾಂತಿ, ತೀಜ್, ವಿಶ್ವಕರ್ಮ ಪೂಜೆ, ಜುತಿಯಾ ಸೇರಿದಂತೆ ಇತರೆ ಹಬ್ಬಗಳ ರಜೆಯನ್ನು ಇಲಾಖೆ ರದ್ದುಗೊಳಿಸಿದೆ. ಮುಸ್ಲಿಂ ಹಬ್ಬಗಳ ಪೈಕಿ ಈದ್, ಮೊಹರಂ ಮತ್ತು ಬಕ್ರೀದ್ ರಜಾದಿನಗಳನ್ನು ವಿಸ್ತರಿಸಲಾಗಿದೆ.

ಇಲಾಖೆಯಿಂದ ಹಲವು ಸೂಚನೆಗಳನ್ನೂ ನೀಡಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ/ರಾಷ್ಟ್ರೀಕೃತ ಮತ್ತು ಅಲ್ಪಸಂಖ್ಯಾತರ ಅನುದಾನಿತ ಉರ್ದು (ಪ್ರಾಥಮಿಕ, ಮಾಧ್ಯಮಿಕ ಮತ್ತು ಹೈಯರ್ ಸೆಕೆಂಡರಿ) ಶಾಲೆಗಳು/ಮಕ್ತಬ್‌ಗಳು ರಜೆಯ ವೇಳಾಪಟ್ಟಿಯ ಪ್ರಕಾರ ಮುಚ್ಚಲ್ಪಡುತ್ತವೆ ಎಂದು ತಿಳಿಸಲಾಗಿದೆ.

ಮತ್ತಷ್ಟು ಓದಿ: ಶಾಲೆ ರಜೆ ಸಲುವಾಗಿ ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ; ಮೂವರು ಅಸ್ವಸ್ಥ

ಜಿಲ್ಲಾ ಅಧಿಕಾರಿಯು ನಿರ್ದಿಷ್ಟ ಜಿಲ್ಲೆಯಲ್ಲಿ ಯಾವುದೇ ವಿಶೇಷ ಸಂದರ್ಭದಲ್ಲಿ ಯಾವುದೇ ರೀತಿಯ ರಜೆಯನ್ನು ಘೋಷಿಸಲು ಬಯಸಿದರೆ, ಅವರು ಕೇಂದ್ರ ಕಚೇರಿ ಮಟ್ಟದಲ್ಲಿ ಶಿಕ್ಷಣ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಅವಶ್ಯಕ. ಜಿಲ್ಲಾ ಶಿಕ್ಷಣಾಧಿಕಾರಿಗಳು ತಮ್ಮ ಮಟ್ಟದಲ್ಲಿ ಯಾವುದೇ ರಜೆಯನ್ನು ಘೋಷಿಸುವುದಿಲ್ಲ. ಉರ್ದು ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರ ರಜೆಯನ್ನು ನೀಡಲಾಗುತ್ತದೆ.

ಎಲ್ಲಾ ಶಾಲೆಗಳಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಹಾಗೂ ಇತರ ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುವುದು ಎಂದು ತಿಳಿಸಿದೆ. ಹಬ್ಬಗಳ ಆಚರಣೆ ಕುರಿತು ಬಿಹಾರ ಸರ್ಕಾರದ ಕ್ರಮಕ್ಕೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:03 pm, Tue, 28 November 23

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ