ಡಿಸೆಂಬರ್ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ
Bank Holidays Karnataka December 2023: ಡಿಸೆಂಬರ್ ಮೊದಲೆರಡು ವಾರದಲ್ಲಿ ಆರು ದಿನಗಳು ಬ್ಯಾಂಕ್ ಮುಷ್ಕರ ಇದೆ. ಕರ್ನಾಟಕದಲ್ಲಿ ಡಿಸೆಂಬರ್ 23ರಿಂದ 25ರವರೆಗೆ ಸತತ 3 ದಿನ ರಜೆಗಳಿವೆ. ರಾಜ್ಯದಲ್ಲಿ ಒಟ್ಟು 8 ರಜಾ ದಿನಗಳು ಡಿಸೆಂಬರ್ನಲ್ಲಿವೆ. ಈಶಾನ್ಯ ರಾಜ್ಯಗಳು ಹಾಗೂ ಗೋವಾದಲ್ಲಿ ಡಿಸೆಂಬರ್ ತಿಂಗಳು ಹೆಚ್ಚಿನ ಬ್ಯಾಂಕ್ ರಜಾದಿನಗಳಿವೆ.
ಬೆಂಗಳೂರು, ನವೆಂಬರ್ 22: ನವೆಂಬರ್ ತಿಂಗಳು ಹಬ್ಬದ ಸೀಸನ್ನ ಪ್ರಮುಖ ಘಟ್ಟ. ಸಾಕಷ್ಟು ರಜಾ ದಿನಗಳು ಈ ತಿಂಗಳಲ್ಲಿ ಇವೆ. ಡಿಸೆಂಬರ್ನಲ್ಲಿ ಬಹಳಷ್ಟು ರಜೆಗಳಿವೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 18 ದಿನ ರಜೆಗಳಿವೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ರಜಾದಿನಗಳೂ ಒಳಗೊಂಡಿವೆ. ಇನ್ನು, ಡಿಸೆಂಬರ್ ಮೊದಲೆರಡು ವಾರದಲ್ಲಿ ಆರು ದಿನಗಳು ಬ್ಯಾಂಕ್ ಮುಷ್ಕರ (Bank employees strike) ಇದೆ. ಕರ್ನಾಟಕದಲ್ಲಿ ಡಿಸೆಂಬರ್ 23ರಿಂದ 25ರವರೆಗೆ ಸತತ 3 ದಿನ ರಜೆಗಳಿವೆ. ರಾಜ್ಯದಲ್ಲಿ ಒಟ್ಟು 8 ರಜಾ ದಿನಗಳು ಡಿಸೆಂಬರ್ನಲ್ಲಿವೆ. ಈಶಾನ್ಯ ರಾಜ್ಯಗಳು ಹಾಗೂ ಗೋವಾದಲ್ಲಿ ಡಿಸೆಂಬರ್ ತಿಂಗಳು ಹೆಚ್ಚಿನ ಬ್ಯಾಂಕ್ ರಜಾದಿನಗಳಿವೆ.
ಭಾರತದಾದ್ಯಂತ ಬ್ಯಾಂಕ್ ಮುಷ್ಕರ ದಿನಗಳು
ಡಿಸೆಂಬರ್ 4ರಿಂದ 8ರವರೆಗೆ ಸರ್ಕಾರಿ ಬ್ಯಾಂಕುಗಳು ಹಾಗೂ ಮತ್ತು ಡಿಸೆಂಬರ್ 11ರಂದು ಖಾಸಗಿ ಬ್ಯಾಂಕುಗಳ ಉದ್ಯೋಗಿಗಳು ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರಿ ಬ್ಯಾಂಕುಗಳು ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಬ್ಯಾಂಕುಗಳು ಮುಷ್ಕರ ನಡೆಸಿವೆ. ಎಲ್ಲಾ ಖಾಸಗಿ ಬ್ಯಾಂಕುಗಳ ಉದ್ಯೋಗಿಗಳು ಒಂದೇ ದಿನ ಮುಷ್ಕರ ನಡೆಸಲಿದ್ದಾರೆ. ಯಾವ್ಯಾವ ದಿನ ಯಾವ ಬ್ಯಾಂಕುಗಳಲ್ಲಿ ಮುಷ್ಕರ, ವಿವರ ಈ ಕೆಳಗಿದೆ:
- ಡಿಸೆಂಬರ್ 4: ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಿಂಧ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಡಿಸೆಂಬರ್ 5: ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ
- ಡಿಸೆಂಬರ್ 6: ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
- ಡಿಸೆಂಬರ್ 7: ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್
- ಡಿಸೆಂಬರ್ 8: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ
- ಡಿಸೆಂಬರ್ 11: ಎಲ್ಲಾ ಖಾಸಗಿ ಬ್ಯಾಂಕುಗಳು
ಇದನ್ನೂ ಓದಿ: ಏರ್ ಇಂಡಿಯಾಗೆ ಹತ್ತು ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ, ಯಾಕೆ ಗೊತ್ತಾ?
ಡಿಸೆಂಬರ್ ತಿಂಗಳಲ್ಲಿ ಆರ್ಬಿಐ ಕ್ಯಾಲೆಂಡರ್ ಪ್ರಕಾರ ಬ್ಯಾಂಕ್ ರಜಾ ದಿನಗಳು
- ಡಿಸೆಂಬರ್ 1: ಅರುಣಾಚಲಪ್ರದೇಶ ಮತ್ತು ನಾಗಾಲ್ಯಾಂಡ್ನಲ್ಲಿ ರಾಜ್ಯೋತ್ಸವ ಪ್ರಯುಕ್ತ ಬ್ಯಾಂಕ್ ರಜೆ
- ಡಿಸೆಂಬರ್ 3: ಭಾನುವಾರ
- ಡಿಸೆಂಬರ್ 4: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಉತ್ಸವ ಪ್ರಯುಕ್ತ ಗೋವಾದಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 9: ಎರಡನೇ ಶನಿವಾರ
- ಡಿಸೆಂಬರ್ 10: ಭಾನುವಾರ
- ಡಿಸೆಂಬರ್ 12: ಪಾ ಟೋಗನ್ ನೆಂಗ್ಮಿಂಜ ಸಾಂಗ್ಮ ಪ್ರಯುಕ್ತ ಮೇಘಾಲಯದಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 13: ಲೋಸುಂಗ್, ನ್ಯಾಮ್ಸುಂಗ್ ಪ್ರಯುಕ್ತ ಸಿಕ್ಕಿಂನಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 14: ಲೋಸುಂಗ್, ನ್ಯಾಮ್ಸುಂಗ್ ಪ್ರಯುಕ್ತ ಸಿಕ್ಕಿಂನಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 17: ಭಾನುವಾರ
- ಡಿಸೆಂಬರ್ 18: ಉ ಸೋಸೋ ಥಾಮ್ ಪುಣ್ಯ ತಿಥಿ ಪ್ರಯುಕ್ತ ಮೇಘಾಲಯದಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 19: ಗೋವಾ ವಿಮುಕ್ತಿ ದಿನದ ಪ್ರಯುಕ್ತ ಅಲ್ಲಿನ ಬ್ಯಾಂಕುಗಳಿಗೆ ರಜೆ
- ಡಿಸೆಂಬರ್ 23: ನಾಲ್ಕನೇ ಶನಿವಾರ
- ಡಿಸೆಂಬರ್ 24: ಭಾನುವಾರ
- ಡಿಸೆಂಬರ್ 25: ಕ್ರಿಸ್ಮಸ್
- ಡಿಸೆಂಬರ್ 26: ಕ್ರಿಸ್ಮಸ್ ಪ್ರಯುಕ್ತ ಮಿಜೋರಾಮ್, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 27: ಕ್ರಿಸ್ಮಸ್ ಪ್ರಯುಕ್ತ ನಾಗಾಲ್ಯಾಂಡ್ನಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 30: ಉ ಕಿಯಾಂಗ್ ನಂಗ್ಬಾಹ್ ಪ್ರಯುಕ್ತ ಮೇಘಾಲಯದಲ್ಲಿ ಬ್ಯಾಂಕ್ ರಜೆ
- ಡಿಸೆಂಬರ್ 31: ಭಾನುವಾರ
ಇದನ್ನೂ ಓದಿ: ಕೌಟುಂಬಿಕ ಕಲಹ; ರೇಮಂಡ್ ಮುಖ್ಯಸ್ಥರಿಗೆ ಚೆಕ್ಮೇಟ್ ಹಾಕಿದ್ದರಾ ಅಂಬಾನಿ ಫ್ಯಾಮಿಲಿ?
ಕರ್ನಾಟಕದಲ್ಲಿ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಎಂದು ರಜೆ?
ಕರ್ನಾಟಕದಲ್ಲಿ (Bank Holidays In Karnataka) ಡಿಸೆಂಬರ್ 23ರಿಂದ 25ರವರೆಗೆ ಸತತ 3 ದಿನಗಳ ಕಾಲ ಬ್ಯಾಂಕ್ ರಜೆ ಇದೆ. ಇವೂ ಸೇರಿದಂತೆ ಡಿಸೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ 8 ರಜಾ ದಿನಗಳಿವೆ. ಇದರ ಜೊತೆ ಬ್ಯಾಂಕ್ ಮುಷ್ಕರದಂದು ವಿವಿಧ ಬ್ಯಾಂಕುಗಳು ಬೇರೆ ಬೇರೆ ದಿನ ಬಂದ್ ಆಗಿರಬಹುದು. ಅಥವಾ ಸೇವೆಗಳಲ್ಲಿ ವ್ಯತ್ಯಯವಾಗಬಹುದು.
- ಡಿಸೆಂಬರ್ 3: ಭಾನುವಾರ
- ಡಿಸೆಂಬರ್ 9: ಎರಡನೇ ಶನಿವಾರ
- ಡಿಸೆಂಬರ್ 10: ಭಾನುವಾರ
- ಡಿಸೆಂಬರ್ 17: ಭಾನುವಾರ
- ಡಿಸೆಂಬರ್ 23: ನಾಲ್ಕನೇ ಶನಿವಾರ
- ಡಿಸೆಂಬರ್ 24: ಭಾನುವಾರ
- ಡಿಸೆಂಬರ್ 25: ಕ್ರಿಸ್ಮಸ್
- ಡಿಸೆಂಬರ್ 31: ಭಾನುವಾರ
ಬ್ಯಾಂಕುಗಳು ಬಾಗಿಲು ಮುಚ್ಚಿದರೂ ಹೆಚ್ಚಿನ ಬ್ಯಾಂಕಿಂಗ್ ಸೇವೆಗಳು ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಮಾಡಬಹುದು. ಎಟಿಎಂ ಸೆಂಟರ್ಗಳೂ ತೆರೆದಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Wed, 22 November 23