ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು

|

Updated on: Mar 25, 2024 | 8:00 AM

ಜನವರಿಯಲ್ಲಿ ಬಿಡುಗಡೆಯಾದ ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಾರ, ರಾಜ್ಯದಲ್ಲಿ ಒಟ್ಟು 5,37,85,815 ಮತದಾರರಿದ್ದಾರೆ. ಇದರಲ್ಲಿ 2,69,33,750 ಪುರುಷ, 2,68,47,145 ಮಹಿಳಾ ಮತ್ತು 4,920 ಇತರೆ ಮತದಾರರಿದ್ದಾರೆ. 858 ಯುವ ಮಹಿಳಾ ಮತದಾರಿದ್ದಾರೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು
ಮತದಾರರು
Follow us on

ಬೆಂಗಳೂರು, ಮಾರ್ಚ್​ 25: ಲೋಕಸಭೆ ಚುನಾವಣೆಗೆ (Lok Sabha Election) ದಿನಾಂಕ ಘೋಷಣೆಯಾಗಿದೆ. ದೇಶದಲ್ಲಿ ಒಟ್ಟು ಏಳು ಹಂತದಲ್ಲಿ ಮನತಾದನ (Voting) ನಡೆಯಲಿದೆ. ಕರ್ನಾಟಕದಲ್ಲಿ (Karnataka Voting) ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್​ 26 ರಂದು ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹಾಗೂ ಮೇ 7 ರಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆದರೆ, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ (Women Voters) ನಿರ್ಣಾಯಕರಾಗಿದ್ದಾರೆ.

ಜನವರಿಯಲ್ಲಿ ಬಿಡುಗಡೆಯಾದ ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಾರ, ರಾಜ್ಯದಲ್ಲಿ ಒಟ್ಟು 5,37,85,815 ಮತದಾರರಿದ್ದಾರೆ. ಇದರಲ್ಲಿ 2,69,33,750 ಪುರುಷ, 2,68,47,145 ಮಹಿಳಾ ಮತ್ತು 4,920 ಇತರೆ ಮತದಾರರಿದ್ದಾರೆ. ಪ್ರತಿ 1000 ಪುರುಷ ಮತದಾರರಿಗೆ 999 ಮಹಿಳಾ ಮತದಾರರಿದ್ದಾರೆ. 858 ಯುವ ಮಹಿಳಾ ಮತದಾರಿದ್ದಾರೆ. ಲಿಂಗಾನುಪಾತ ಏರಿಕೆಯಾಗುತ್ತಿದೆ. 2029 ರ ನಂತರದ ಚುನಾವಣೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಲಿದೆ.

ಪುರುಷರಿಗಿಂತ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ 17 ಕ್ಷೇತ್ರಗಳ ಪೈಕಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರತಿ 1000 ಪುರುಷ ಮತದಾರರಿಗೆ 1,062 ಮಹಿಳಾ ಮತದಾರರು ಇರುವ ಮೂಲಕ ಅಗ್ರಸ್ಥಾನದಲ್ಲಿದೆ. ದಕ್ಷಿಣ ಕನ್ನಡದಲ್ಲಿ (1,049), ಮೈಸೂರಿನಲ್ಲಿ (1,037), ಶಿವಮೊಗ್ಗ (1,030) ಮತ್ತು ಮಂಡ್ಯ (1,029) ಮಹಿಳಾ ಮತದಾರರಿದ್ದಾರೆ. ಉಳಿದಂತೆ ಬೆಳಗಾವಿ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಹಾಸನ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ಕೋಲಾರ, ತುಮಕೂರು ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಮಹಿಳಾ ಮತದಾರರಿದ್ದಾರೆ.

ಇದನ್ನೂ ಓದಿ: Lok Sabha Election 2024: ಬೆಳಗಾವಿ ಜಿಲ್ಲೆಯಲ್ಲಿ 1259 ಶತಾಯುಷಿ ಮತದಾರರು

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಕಡಿಮೆ ಮಹಿಳಾ ಮತದಾರರಿದ್ದಾರೆ. ಪ್ರತಿ 1,000 ಪುರುಷರಿಗೆ ಬೆಂಗಳೂರು ಸೆಂಟ್ರಲ್​ನಲ್ಲಿ (938), ಬೆಂಗಳೂರು ದಕ್ಷಿಣ (939), ಬೆಂಗಳೂರು ಉತ್ತರ (947) ಮತ್ತು ಬೆಂಗಳೂರು ಗ್ರಾಮಾಂತರವು 966 ಮಹಿಳಾ ಮತದಾರರಿದ್ದಾರೆ.

50 ಸಾವಿರ ಅರ್ಜಿಗಳು

ಮತದಾನದ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ಮಾರ್ಚ್​ 31 ಕೊನೆಯ ದಿನಾಂಕವಾಗಿದ್ದು, ಈಗಾಗಲೆ 50 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಸಿರುವವರು ಮುಂದಿನ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ