- Kannada News Photo gallery Shivajinagar Ramzan food fest 2024 varieties of veg non-veg food attracts food lovers
ಬಗೆ ಬಗೆಯ ಸಮೋಸ, ಮಾಂಸ ಖಾದ್ಯಗಳು, ಹಲೀಮ್, ಶರಬತ್; ಆಹಾರ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ ಶಿವಾಜಿನಗರ
Ramadan Food Fest: ಪ್ರತಿ ವರ್ಷ ರಂಜಾನ್ ಹಬ್ಬ ಬಂದ್ರೆ ಸಾಕು ಸಿಲಿಕಾನ್ ಸಿಟಿಯ ರೆಸೆಲ್ ಮಾರ್ಕೆಟ್ ನಲ್ಲಿ ಫುಡ್ ಫೆಸ್ಟ್ ಆರಂಭವಾಗುತ್ತೆ. ಈ ವರ್ಷವು ರೆಸೆಲ್ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಫುಡ್ ಫೆಸ್ಟ್ ನಡೆಯುತ್ತಿದ್ದು, ಫೆಸ್ಟ್ ನಲ್ಲಿ 50ಕ್ಕೂ ಹೆಚ್ಚು ಬಗೆಯ ವೈರೈಟಿ ವೆರೈಟಿ ಖಾದ್ಯಗಳು ಜನರನ್ನ ಸೆಳೆಯುತ್ತಿವೆ.
Updated on: Mar 25, 2024 | 8:02 AM

ರಂಜಾನ್ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಶಿವಾಜಿನಗರದ ರೆಸೆಲ್ ಮಾರ್ಕೆಟ್, ಚಾಂದನಿ ಚೌಕ್ ಭಾಗದಲ್ಲಿ ಫುಡ್ ಫೆಸ್ಟ್ ಆರಂಭವಾಗಿದ್ದು, ಬಗೆ ಬಗೆಯ ಸಮೋಸಗಳು, ಮಾಂಸದ ಖಾದ್ಯಗಳು ಜನರನ್ನ ಸೆಳೆಯುತ್ತಿವೆ.

ಸಮೋಸ, ಚಿಕನ್ ಖಾದ್ಯಗಳನ್ನ ಸವಿಯುವುದರಲ್ಲಿ ಜನ ಬ್ಯುಸಿ. ವ್ಯಾಪಾರ ಮಾಡಿವುದರಲ್ಲಿ ವ್ಯಾಪರಸ್ಥರು ಬಿಜಿ, ಈ ಫುಡ್ ಫೆಸ್ಟ್ ನಿಂದಾಗಿ ರೆಸೆಲ್ ಮಾರ್ಕೆಟ್ ಸುತ್ತಾಮುತ್ತ ಫುಲ್ ಟ್ರಾಫಿಕ್ ಕಂಡುಬಂತು.

ಪ್ರತಿ ವರ್ಷ ರಂಜಾನ್ ಹಬ್ಬ ಬಂದ್ರೆ ಸಾಕು ಸಿಲಿಕಾನ್ ಸಿಟಿಯ ರೆಸೆಲ್ ಮಾರ್ಕೆಟ್ ನಲ್ಲಿ ಫುಡ್ ಫೆಸ್ಟ್ ಆರಂಭವಾಗುತ್ತೆ. ಈ ವರ್ಷವು ರೆಸೆಲ್ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಫುಡ್ ಫೆಸ್ಟ್ ನಡೆಯುತ್ತಿದ್ದು, ಫೆಸ್ಟ್ ನಲ್ಲಿ 50ಕ್ಕೂ ಹೆಚ್ಚು ಬಗೆಯ ವೈರೈಟಿ ವೆರೈಟಿ ಖಾದ್ಯಗಳು ಜನರನ್ನ ಸೆಳೆಯುತ್ತಿವೆ.

ಅದ್ರಲ್ಲೂ ವೆಜ್ ಸಮೋಸ, ಚಿಕನ್ ಸಮೋಸ, ಮಟನ್ ಸಮೋಸ, ಸೇರಿದಂತೆ ಬಗೆ ಬಗೆಯ ಸಮೋಸಗಳು ಜನರನ್ನ ಕೈಬೀಸಿ ಕರೆಯುತ್ತಿವೆ. ಇಲ್ಲಿ ಬೆಜ್ ಸಮೋಸ ಒಂದಕ್ಕೆ 12 ರೂ. ಚಿಕನ್ ಸಮೋಸ ಒಂದಕ್ಕೆ 15 ರೂ. ಚಿಕನ್ ಶಾಮಿ 3 pieces 100 ರೂ. ಮಟನ್ ಹಾಲಿಮ್ ಕೆಜಿಗೆ 400 ರೂ.

ಸಿಂಗಾರಪುರಿ ಚಿಕನ್ 70 ರೂ. ಲೆಮೆನ್ ಚಿಕನ್ 70 ರೂ. ಚಿಕನ್ ಲಾಲಿ ಪಪ್ 4 pieces 100ರೂ, ಚಿಕನ್ ಕುಲ್ಫಿ 70 ರೂ. ಚಿಕನ್ ಸಾಸ್ ಲೀಚ್ 70 ರೂ. ಕಲ್ಮಿ ಕಬಾಬ್ 60 ರೂ. ಹಾರ್ಯಾಲಿ ಚಿಕನ್ 220 ರೂ. ಶೋಲೆ ಚಿಕನ್ 220ರೂ.

ರಂಜಾನ್ ಹಬ್ಬ ಬಂದ್ರೆ ಕೇವಲ ಮುಸ್ಲಿಮರಿಗೆ ಮಾತ್ರ ಹಬ್ಬ ಆಗಿರೋದಿಲ್ಲ. ಹಿಂಧೂಗಳು ಈ ಸಂದರ್ಭದಲ್ಲಿ ರಂಜಾನ್ ಫುಡ್ ಫೆಸ್ಟ್ ಗೆ ಬಂದು ವೈರೈಟಿ ಖಾದ್ಯಗಳನ್ನ ಸವಿತಾರೆ. ನಾವು ಕೂಡ ಪ್ಯಾಮಿಲಿ ಸಮೇತ ಬಂದಿದ್ವಿ. ತುಂಬ ಖುಷಿಯಾಗುತ್ತಿದೆ ಅಂತ ಖಾದ್ಯ ಪ್ರಿಯರು ಹೇಳಿದ್ರು.

ರಂಜಾನ್ ಸಮಯದಲ್ಲಿ ಮುಸ್ಲಿಂ ಬಾಂಧವರು ಉಪವಾಸ ಇರ್ತಾರೆ. ಉಪವಾಸ ಬಿಟ್ಟ ನಂತರ ಬಗೆ ಬಗೆಯ ಖಾದ್ಯಗಳನ್ನ ಸವಿತಾರೆ. ಈ ಕಾರಣಕ್ಕಾಗಿಯೇ ವಿಶೇಷ ಪುಡ್ ಫೆಸ್ಟ್ ಗಳನ್ನ ಮಾಡಲಾಗುತ್ತೆ. ಈ ಫೆಸ್ಟ್ 15 ದಿನಗಳ ಕಾಲ ನಡೆಯಲಿದ್ದು, ಸಿಲಿಕಾನ್ ಮಂದಿ ಎಂಜಾಯ್ ಮಾಡಬಹುದಾಗಿದೆ.



















