ಅರಣ್ಯಾಧಿಕಾರಿ ಬಳಿ ಅರ್ಧ ಕೆಜಿ ಬಂಗಾರ, ಇಂಜಿನಿಯರ್ ಮನೆ ಚಿನ್ನದ ಖಜಾನೆ: ಲೋಕಾ ದಾಳಿ ವೇಳೆ ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು?
ಸೂರ್ಯೋದಯಕ್ಕೂ ಮುನ್ನವೇ ಫೀಲ್ಡ್‌ಗೆ ಇಳಿದಿದ್ದ ಲೋಕಾಯುಕ್ತ ಪೊಲೀಸರು ರಾಜ್ಯದ ಉದ್ದಗಲಕ್ಕೂ 69 ಕಡೆ ದಾಳಿ ಮಾಡಿದರು. ವಿವಿಧ ಇಲಾಖೆಗಳ 17 ಅಧಿಕಾರಿಗಳ ಮನೆ, ಕಚೇರಿಗಳನ್ನು ಪರಿಶೀಲಿಸಿದರು. ಭ್ರಷ್ಟಾಚಾರ ಆರೋಪ ಸಂಬಂಧ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು.
ಬೆಂಗಳೂರು ಅ.30: ಸೋಮವಾರ ಬೆಳ್ಳೆಂಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು (Lokayukta Officers) ರಾಜ್ಯದ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸೂರ್ಯೋದಯಕ್ಕೂ ಮುನ್ನವೇ ಫೀಲ್ಡ್‌ಗೆ ಇಳಿದಿದ್ದ ಲೋಕಾಯುಕ್ತ (Lokayukta) ಪೊಲೀಸರು ರಾಜ್ಯದ ಉದ್ದಗಲಕ್ಕೂ 69 ಕಡೆ ದಾಳಿ ಮಾಡಿದರು. ವಿವಿಧ ಇಲಾಖೆಗಳ 17 ಅಧಿಕಾರಿಗಳ ಮನೆ, ಕಚೇರಿಗಳನ್ನು ಪರಿಶೀಲಿಸಿದರು. ಭ್ರಷ್ಟಾಚಾರ ಆರೋಪ ಸಂಬಂಧ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ತುಮಕೂರು, ಮಂಡ್ಯ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ರಾಯಚೂರು, ಕಲಬುರಗಿ, ಬೆಳಗಾವಿ, ಕೊಪ್ಪಳ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಅಧಿಕಾರಿಗಳ ನಿವಾಸ, ಕಚೇರಿ, ಸಂಬಂಧಿಕರ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಅದೆಷ್ಟು ಹಣ, ಬಂಗಾರ ಪತ್ತೆಮಾಡಿದ್ದಾರೆ ಎಂಬುವುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
- ಎಂ ಪಿ ನಾಗೇಂದ್ರ ನಾಯ್ಕ, ಎಸಿಎಫ್, ಪ್ರಭಾರಿ ಡಿಸಿಎಫ್ ಅರಣ್ಯ ಇಲಾಖೆ, ಚಿತ್ರದುರ್ಗ. ಆರೋಪಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ಶೋಧ ನಡೆದಿದೆ.
ಪತ್ತೆಯಾದ ಆಸ್ತಿ ವಿವರ
ಚರಾಸ್ತಿಗಳ ಅಂದಾಜು ಮೌಲ್ಯ -51,08,826/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,37,64,000/-
ಒಟ್ಟು ಮೌಲ್ಯ-1,88,72,826/-
ಡಿಎಯ ಅಂದಾಜು ಮೌಲ್ಯ 201.02%
- ಶ್ರೀ. ವಿ ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ ಗ್ರೇಡ್-1, ಸಮಾಜ ಕಲ್ಯಾಣ ಕಚೇರಿ, ಚಿತ್ರದುರ್ಗ ಆರೋಪಿಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಶೋಧ ನಡೆದಿದೆ.
ಪತ್ತೆಯಾದ ಆಸ್ತಿ ವಿವರ
ಚರಾಸ್ತಿಗಳ ಅಂದಾಜು ಮೌಲ್ಯ -42,12,077/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,26,41,929/-
ಒಟ್ಟು ಮೌಲ್ಯ-1,68,54,006/-
ಡಿಎಯ ಅಂದಾಜು ಮೌಲ್ಯ 214.60%
- ಎಮ್. ನಾಗೇಂದ್ರಪ್ಪ ಪುತ್ರ ಈರನಾಗಪ್ಪ, ಸಹಾಯಕ ಎಂಜಿನಿಯರ್, PRED ಉಪ ವಿಭಾಗ, ಸಿರಾ ತಾಲೂಕು, ತುಮಕೂರು ಆರೋಪಿಗೆ ಸಂಬಂಧಿಸಿದ ಐದು ಸ್ಥಳಗಳಲ್ಲಿ ಶೋಧ ನಡೆದಿದೆ/
ಪತ್ತೆಯಾದ ಆಸ್ತಿ ವಿವರ
ಚರಾಆಸ್ತಿ ಅಂದಾಜು ಮೌಲ್ಯ -97.18 ಲಕ್ಷ ರೂ.
ಸ್ಥಿರಾಸ್ತಿ ಅಂದಾಜು ಮೌಲ್ಯ-1.64 ಕೋಟಿ ರೂ.
ಒಟ್ಟು ಮೌಲ್ಯ-2.61 ಕೋಟಿ ರೂ.
ಡಿಎಯ ಅಂದಾಜು ಮೌಲ್ಯವು 220.00%
- ಕೆ.ಮಂಜುನಾಥ್, ಕಂದಾಯ ಅಧಿಕಾರಿ, ತಹಶೀಲ್ದಾರ್ ಕಚೇರಿ, ಬಳ್ಳಾರಿ. ಆರೋಪಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ಶೋಧ ನಡೆದಿದೆ.
ಪತ್ತೆಯಾದ ಆಸ್ತಿ ವಿವರ
ಚರಾಆಸ್ತಿ ಅಂದಾಜು ಮೌಲ್ಯ -30.79 ಲಕ್ಷ ರೂ.
ಒಟ್ಟು ಮೌಲ್ಯ-30.79 ಲಕ್ಷಗಳು
ಡಿಎಯ ಅಂದಾಜು ಮೌಲ್ಯ 122.28%
- ಎನ್ ಪಿ ಬಾಲರಾಜು, ಮುಖ್ಯ ಇಂಜಿನಿಯರ್, ಕರ್ನಾಟಕ ಸ್ಲಂ ಬೋರ್ಡ್, ಬೆಂಗಳೂರು. ಆರೋಪಿಗೆ ಸಂಬಂಧಿಸಿದ ನಾಲ್ಕು ಕಡೆ ಶೋಧ ನಡೆದಿದೆ.
ಚಲಿಸಬಲ್ಲ ಸ್ವತ್ತುಗಳ ಅಂದಾಜು ಮೌಲ್ಯ – 10,00,000/-.
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,12,00,000/-
ಒಟ್ಟು ಮೌಲ್ಯ-1.22 ಕೋಟಿ
ಡಿಎಯ ಅಂದಾಜು ಮೌಲ್ಯವು 254.08%
- ತಿಪ್ಪನಗೌಡ ಅನ್ನದಾನಿ, ಕಾರ್ಯನಿರ್ವಾಹಕ ಎಂಜಿನಿಯರ್, ಕೆಬಿಜೆಎನ್ಎಲ್. ಆರೋಪಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಶೋಧ ನಡೆದಿದೆ.
ಚರಾಸ್ತಿ ಅಂದಾಜು ಮೌಲ್ಯ – 92,95,000/-
ಸ್ಥಿರಾಸ್ತಿ ಅಂದಾಜು ಮೌಲ್ಯ-1,21,45,000/-
ಒಟ್ಟು ಮೌಲ್ಯ-2,14,40,000 ಕೋಟಿ ರೂ.
ಡಿಎಯ ಅಂದಾಜು ಮೌಲ್ಯವು 161.7%
- ಬಸವರಾಜ, ವಲಯ ಅರಣ್ಯಾಧಿಕಾರಿ, ಬೀದರ್. ಆರೋಪಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಶೋಧ ನಡೆದಿದೆ.
ಚರಾಸ್ತಿ ಅಂದಾಜು ಮೌಲ್ಯ – 43,00,000/-
ಸ್ಥಿರಾಸ್ತಿ ಅಂದಾಜು ಮೌಲ್ಯ-2.05 ಕೋಟಿಗಳು
ಒಟ್ಟು ಮೌಲ್ಯ-2,48,09,000/-
ಡಿಎಯ ಅಂದಾಜು ಮೌಲ್ಯವು 155.8%
- ಶರಣಪ್ಪ ಪಟ್ಟೇದ್, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಶಕ್ತಿನಗರ, ರಾಯಚೂರು. ಆರೋಪಿಗಳ ಐದು ಸ್ಥಳಗಳಲ್ಲಿ ಶೋಧ ನಡೆದಿದೆ.
ಚರಾಸ್ತಿ ಅಂದಾಜು ಮೌಲ್ಯ – 40,21,000/-
ಸ್ಥಿರಾಸ್ತಿ ಅಂದಾಜು ಮೌಲ್ಯ -1.9 ಕೋಟಿ
ಒಟ್ಟು ಮೌಲ್ಯ-2,30,21,000/-
ಡಿಎಯ ಅಂದಾಜು ಮೌಲ್ಯ 129.6%
- ಎಚ್ ರಾಜೇಶ್, ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಉಡುಪಿ. ಆರೋಪಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ಶೋಧ ನಡೆದಿದೆ.
ಚರಾಸ್ತಿ ಸ್ವತ್ತುಗಳ ಅಂದಾಜು ಮೌಲ್ಯ – 1,10,15,996/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,00,00,000/-
ಒಟ್ಟು ಮೌಲ್ಯ-2,10,15,996/-
ಡಿಎಯ ಅಂದಾಜು ಮೌಲ್ಯವು 143.66%
- ಎನ್ ಪಿ ಬಾಲರಾಜು, ಮುಖ್ಯ ಇಂಜಿನಿಯರ್, ಕರ್ನಾಟಕ ಸ್ಲಂ ಬೋರ್ಡ್, ಬೆಂಗಳೂರು. ಆರೋಪಿಗೆ ಸಂಬಂಧಿಸಿದ ಕಡೆ ಶೋಧ ನಡೆದಿದೆ.
ಚರಾಸ್ತಿ ಸ್ವತ್ತುಗಳ ಅಂದಾಜು ಮೌಲ್ಯ – 10,00,000/-.
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,12,00,000/-
ಒಟ್ಟು ಮೌಲ್ಯ-1.22 ಕೋಟಿ
ಡಿಎಯ ಅಂದಾಜು ಮೌಲ್ಯವು 254.08%
- ಶಶಿಕುಮಾರ್ ಟಿ ಎಂ ಎಸ್/ಒ ಮಾದಯ್ಯ, ಇ.ಇ, ಟೌನ್ ಪ್ಲಾನಿಂಗ್, ಪ್ರಸ್ತುತ ಕೆಐಎಡಿಬಿ, ಬೆಂಗಳೂರು. ಆರೋಪಿಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಶೋಧ ನಡೆದಿದೆ.
ಚರಾಸ್ತಿಗಳ ಅಂದಾಜು ಮೌಲ್ಯ – 65,00,000/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-6 ಕೋಟಿಗಳು
ಒಟ್ಟು ಮೌಲ್ಯ-6.65 ಕೋಟಿ
ಡಿಎಯ ಅಂದಾಜು ಮೌಲ್ಯವು 322.00%
- ತಿಪ್ಪನಗೌಡ ಅನ್ನದಾನಿ, ಕಾರ್ಯನಿರ್ವಾಹಕ ಎಂಜಿನಿಯರ್, ಕೆಬಿಜೆಎನ್ಎಲ್ (ಪೋಸ್ಟಿಂಗ್ ನಿರೀಕ್ಷೆಯಲ್ಲಿ) ಆರೋಪಿಗೆ ಸಂಬಂಧಿ ನಾಲ್ಕು ಸ್ಥಳಗಳಲ್ಲಿ ಶೋಧ ನಡೆದಿದೆ.
ಚರಾಸ್ತಿಗಳ ಅಂದಾಜು ಮೌಲ್ಯ – 92,95,000/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,21,45,000/-
ಒಟ್ಟು ಮೌಲ್ಯ-2,14,40,000 ಕೋಟಿಗಳು
ಡಿಎಯ ಅಂದಾಜು ಮೌಲ್ಯವು 161.7%
- ಪರಮೇಶ್ವರಪ್ಪ ಹನುಮಂತಪ್ಪ ಪೇಲನ್ನವರ್, ಆರ್‌ಎಫ್‌ಒ, ಅರಣ್ಯ, ಜಲನಯನ ಅಧಿಕಾರಿ, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಹಾವೇರಿ. ಆರೋಪಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ಶೋಧ ನಡೆದಿದೆ.
ಚರಾಆಸ್ತಿ ಅಂದಾಜು ಮೌಲ್ಯ – 37,00,000/-
ಸ್ಥಿರಾಸ್ತಿ ಅಂದಾಜು ಮೌಲ್ಯ-1,95,46,000/-
ಒಟ್ಟು ಮೌಲ್ಯ-2,32,46,000/-
ಡಿಎಯ ಅಂದಾಜು ಮೌಲ್ಯವು 170.77%
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ