ಬೆಂಗಳೂರಿನಲ್ಲಿ ಡಿಹೆಚ್​ಒ, ಚಿತ್ರದುರ್ಗದಲ್ಲಿ ಪಿಸಿ ಲೋಕಾಯುಕ್ತ ಬಲೆಗೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 29, 2022 | 10:14 PM

ಬೆಂಗಳೂರು ನಗರದ ಡಿಹೆಚ್​ಒ ನಿರಂಜನ್ ಹೊಸ ಆಸ್ಪತ್ರೆಗೆ ಪರವಾನಗಿ ನೀಡಲು 1.25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಮುಂಗಡವಾಗಿ 40 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರಿನಲ್ಲಿ ಡಿಹೆಚ್​ಒ, ಚಿತ್ರದುರ್ಗದಲ್ಲಿ ಪಿಸಿ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಕಚೇರಿ
Follow us on

ಬೆಂಗಳೂರು: ಬೆಂಗಳೂರು ನಗರದ ಡಿಹೆಚ್​ಒ (District Health Officer) ನಿರಂಜನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೊಸ ಆಸ್ಪತ್ರೆಗೆ ಪರವಾನಗಿ ನೀಡಲು 1.25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಮುಂಗಡವಾಗಿ 40 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದೀಗ ಡಿಹೆಚ್​ಒ ಡಾ.ನಿರಂಜನ್ ವಶಕ್ಕೆ ಪಡೆದು ಅಧಿಕಾರಿಗಳಿಂದ ತನಿಖೆ ನಡೆಸುತ್ತಿದ್ದಾರೆ.

ಜವನಗೊಂಡನಹಳ್ಳಿ ಠಾಣೆ ಪಿಸಿ ಹರೀಶ್ ಮೇಲೆ ಲೋಕಾಯುಕ್ತ ದಾಳಿ

ಚಿತ್ರದುರ್ಗ: ಜವನಗೊಂಡನಹಳ್ಳಿ ಠಾಣೆ ಪಿಸಿ ಹರೀಶ್ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಕಳೆದು ಹೋಗಿದ್ದ ಮೊಬೈಲ್ ಹುಡುಕಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಕಾನ್ಸ್​​ಟೇಬಲ್ ಹರೀಶ್ 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗಿದೆ. ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿಯ ಚಾಮರಾಜ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇದನ್ನು ಓದಿ: ಲೋಕಾಯುಕ್ತ ದಾಳಿ ವೇಳೆ ಅಕ್ರಮ ಆಸ್ತಿ ಪತ್ತೆ: BBMP ಮೌಲ್ಯಮಾಪಕನಿಗೆ 40 ಲಕ್ಷ ದಂಡ, 4 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಪಿಸಿ ಹರೀಶ್ಈಗಾಗಲೇ 3 ಸಾವಿರ ರೂ. ಲಂಚ ಪಡೆದಿದ್ದು, ಮತ್ತೆ 2 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ DySP ಜಿ.ಮಂಜುನಾಥ್ ನೇತೃತ್ವದಲ್ಲಿ ದಾಳಿ ನೆಡಸಲಾಗಿದೆ.