ಭ್ರೂಣ ಹತ್ಯೆ ಮಾಡಿಸಿ ಪ್ರಿಯಕರ ಪರಾರಿ: ರಾಮನಗರ ಪೊಲೀಸರ ವಿರುದ್ಧ ಮೋದಿ ಮೊರೆ ಹೋದ ಮಹಿಳೆ

ಭ್ರೂಣ ಹತ್ಯೆ ಮಾಡಿಸಿ ಪರಾರಿಯಾದ ಪ್ರಿಯಕರ ಮತ್ತು ರಾಮನಗರ ಪೊಲೀಸರ ವಿರುದ್ಧ ಮಹಿಳೆ ಪ್ರಧಾನಿ ನರೇಂದ್ರ ಮೊದಿ ಪತ್ರ ಬರೆದಿರುವಂತಹ ಘಟನೆ ರಾಮನಗರದಲ್ಲಿ ನಡೆದಿದೆ. ಪೊಲೀಸರು, ಪ್ರಿಯಕರನಿಂದ ವಂಚನೆಗೊಳಗಾಗಿರುವ ನನಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದು, ಒಂದು ವೇಳೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭ್ರೂಣ ಹತ್ಯೆ ಮಾಡಿಸಿ ಪ್ರಿಯಕರ ಪರಾರಿ: ರಾಮನಗರ ಪೊಲೀಸರ ವಿರುದ್ಧ ಮೋದಿ ಮೊರೆ ಹೋದ ಮಹಿಳೆ
ಭ್ರೂಣ ಹತ್ಯೆ ಮಾಡಿಸಿ ಪ್ರಿಯಕರ ಪರಾರಿ: ರಾಮನಗರ ಪೊಲೀಸರ ವಿರುದ್ಧ ಮೋದಿ ಮೊರೆ ಹೋದ ಮಹಿಳೆ
Edited By:

Updated on: Jul 31, 2024 | 4:23 PM

ರಾಮನಗರ, ಜುಲೈ 31: ಭ್ರೂಣ ಹತ್ಯೆಮಾಡಿಸಿದ ಪ್ರಿಯಕರ ಹಾಗೂ ಆತನ ವಿರುದ್ಧ ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಓರ್ವ ಮಹಿಳೆ (Woman) ಪತ್ರ ಬರೆದಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯಕರ ಮತ್ತು ಪೊಲೀಸರಿಂದ ಅನ್ಯಾಯಕ್ಕೊಳಗಾಗಿದ್ದೇನೆ ಎಂದು ಜಿಲ್ಲೆಯ ಮಾಗಡಿ ಮೂಲದ ಮಹಿಳೆಯಿಂದ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ಎಸ್​ಪಿ ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಎಚ್ಚರಿಕೆ ಕೂಡ ನೀಡಿದ್ದಾರೆ.

ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಎಂದ ಮಹಿಳೆ

ಭ್ರೂಣ ಹತ್ಯೆಮಾಡಿಸಿದ್ದ ಪ್ರಿಯಕರ ದಯಾನಂದ (24) ವಿರುದ್ಧ ಮಹಿಳೆ ದೂರು ನೀಡಿದರು ರಾಮನಗರ ಮಹಿಳಾ ಠಾಣೆ ಪೊಲೀಸರು ತೆಗೆದುಕೊಂಡಿಲ್ಲ. ಹೀಗಾಗಿ ಈ ಮಧ್ಯೆ ದಯಾನಂದನ ಗೆಳೆಯ ತಾನು ದೂರು ಕೊಡಿಸುವುದಾಗಿ ಹೇಳಿ ನನ್ನಿಂದ (ಸಂತ್ರಸ್ತೆ ಮಹಿಳೆ) 1.40 ಲಕ್ಷ ರೂ. ಲಂಚ ಪಡೆದಿದ್ದಾನೆ. ಆದರೆ 1.40 ಲಕ್ಷ ರೂ. ಲಂಚ ನೀಡಿದ್ರೂ ಸಿಪಿಐ ಕ್ರಮಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಕಳೆದ 4 ತಿಂಗಳಿಂದ ಪೊಲೀಸ್ ಠಾಣೆಗೆ ಅಲೆದು ಬೇಸತ್ತುಹೋಗಿದ್ದೇನೆ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ರಾಮನಗರ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣ: ಆರೋಪಿಗಳಿಗೆ ಪೊಲೀಸ್​ ಗುಂಡೇಟು

5 ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಇಷ್ಟವಿಲ್ಲದ ಕಾರಣಕ್ಕೆ ಮದುವೆ ಮುರಿದುಬಿದ್ದು ಪತಿಯಿಂದ ದೂರವಾಗಿದ್ದರು. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಹಿಳೆಗೆ ದಯಾನಂದ್ ಪರಿಚಯವಾಗಿದ್ದಾರೆ. ಲವ್​ ಮಾಡುತ್ತಿರುವುದಾಗಿ ಮತ್ತು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ ದಯಾನಂದ್ ಮಹಿಳೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ.

ಇದನ್ನೂ ಓದಿ: ರಾಮನಗರ: ಸಂಬಂಧಿಯಿಂದಲೇ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ! ಆರೋಪಿ ಬಂಧನ

ಮಹಿಳೆ ಗರ್ಭಿಣಿಯಾಗಿರುವುದನ್ನು ತಿಳಿದ ಪ್ರಿಯಕರ ದಯಾನಂದ ಬಲವಂತವಾಗಿ ಗರ್ಭಪಾತ ಮಾಡಿಸಿ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ನನಗಾದ ಅನ್ಯಾಯಕಿಂತ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ  ಶಿಕ್ಷೆ ಆಗಲೇಬೇಕು ಹೀಗಾಗಿ ಆತನ ವಿರುದ್ಧ ಭ್ರೂಣಹತ್ಯೆ ಕೇಸ್ ದಾಖಲಿಸಿ ಕ್ರಮಕ್ಕೆ ಮಹಿಳೆ ಆಗ್ರಹಿಸಿದ್ದಾರೆ. ಪೊಲೀಸರು, ಪ್ರಿಯಕರನಿಂದ ವಂಚನೆಗೊಳಗಾಗಿರುವ ನನಗೆ ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:14 pm, Wed, 31 July 24