ಚಾಮರಾಜನಗರ, ನವೆಂಬರ್ 15: ರಾಜ್ಯ ಪ್ರವಾಸಿತಾಣಗಳ ಪೈಕಿ ಮಲೆ ಮಹದೇಶ್ವರ ಬೆಟ್ಟ (Male Mahadeshwara Betta) ಕೂಡ ಒಂದು. ಮಾದಪ್ಪನ ಸನ್ನಿಧಾನಕ್ಕೆ ಆಗಮಿಸುವ ಭಕ್ತವೃಂದದಿಂದ ಎದುರಾಗುತ್ತಿರುವ ತ್ಯಾಜ್ಯವನ್ನ ಸಮರ್ಪಕವಾಗಿ ನಿರ್ವಹಿಸಲು ಪ್ರಾಧಿಕಾರ ಮುಂದಾಗಿದ್ದು ಗ್ರೀನ್ ಟುಮಾರೋ ಎಂಎಂ ಹಿಲ್ಸ್ಗೆ ಚಾಲನೆ ನೀಡಲಾಗಿದೆ.
ಮಲೆ ಮಹದೇಶ್ವರ ಬೆಟ್ಟ ರಾಜ್ಯದ ಪ್ರಮುಖ ಪೂಜ್ಯ ಪ್ರೇಕ್ಷಣೀಯ ಸ್ಥಳಗಳ ಪೈಕಿಯೊಂದು. ವಿಶೇಷ ಜಾತ್ರಾ ಮಹೋತ್ಸವ ಸೇರಿದಂತೆ ಅಮವಾಸ್ಯೆ ದಿನಗಳಂದು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ಬರುವಂತ ಭಕ್ತರು ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಅನೇಕ ತ್ಯಾಜ್ಯಗಳನ್ನ ಅಲ್ಲಲ್ಲಿ ಎಸೆಯುತ್ತಾರೆ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಗಿಫ್ಟ್; ಚಾಮರಾಜನಗರದ ನಾಗಮಲೆಗೆ ಉಚಿತ ಪ್ರವೇಶಕ್ಕೆ ಅನುಮತಿ
ಈ ಕಸವನ್ನ ಸಮರ್ಪಕವಾಗಿ ನಿರ್ವಹಣೆ ಮಾಡಲು ಈಗ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮುಂದಾಗಿದ್ದು ಗ್ರೀನ್ ಟುಮಾರೋ ಎಂಎಂ ಹಿಲ್ಸ್ ಎಂಬ ಶೀರ್ಷಿಕೆಯಲ್ಲಿ ಹೊಸ ಯೋಜನೆಗೆ ಮುಂದಾಗಿದ್ದು ಈಗ ಪ್ರಾಧಿಕಾರದ ಜತೆ ಈಗ ಮೈಸೂರಿನ ಮೈ ಕಾಪ್ಸ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಕಾರ್ಯ ನಿರ್ವಹಿಸಲಿದೆ.
ಇನ್ನು ಈ ಗ್ರೀನ್ ಟುಮಾರೊ ಎಂಎಂ ಹಿಲ್ಸ್ನ ಕಾರ್ಯ ವೈಖರಿ ಏನೆಂದರೆ ತ್ಯಾಜ್ಯ ಮುಕ್ತ ಮಹದೇಶ್ವರ ಬೆಟ್ಟ ಎಂಬ ಶೀರ್ಷಿಕೆಯಡಿ ಮಲೆ ಮಹದೇಶ್ವರ ಬೆಟ್ಟವನ್ನ ಕಸ ಮುಕ್ತ ಬೆಟ್ಟವನ್ನಾಗಿಸೋದು. ಕಸ ಹಾಗೂ ತ್ಯಾಜ್ಯ ವಿಲೇವಾರಿಯನ್ನ ಸಮರ್ಪಕವಾಗಿ ಮಾಡೋದು. ಮಲೆ ಮಹದೇಶ್ವರ ಬೆಟ್ಟ ಸುತ್ತಾ ಕಾಡಿದ್ದು ಈ ತ್ಯಾಜ್ಯದಿಂದ ಪ್ರಕೃತಿಯ ಸೌಂದರ್ಯ ಹಾಳು ಮಾಡದೆ ಹಸಿರನ್ನಾಗಿ ಇರಿಸುವುದರ ಜತೆಗೆ ಕಾಡು ಪ್ರಾಣಿಗಳಿಗೆ ತ್ಯಾಜ್ಯದಿಂದ ಹಾನಿಯಾಗದಂತೆ ನೋಡಿಕೊಳ್ಳುವುದಾಗಿದೆ.
ಇದನ್ನೂ ಓದಿ: ಹೀಗೂ ಒಂದು ಹಬ್ಬವಿದೆ ನೋಡಿ: ಇಲ್ಲಿ ಸೆಗಣಿಯಲ್ಲಿ ಹೊರಳಾಡಿ, ಅದರಿಂದಲೇ ಹೊಡೆದಾಡಿಕೊಳ್ಳುತ್ತಾರೆ ಜನ!
ಶೇಖರಣೆಯಾದ ತಾಯಾಜ್ಯವನ್ನ ಹೊಸ ತಂತ್ರಜ್ಞಾನದ ಮೂಲಕ ತಾಯಾಜ್ಯವನ್ನ ಬೇರೆಡೆ ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಪ್ಲಾಸ್ಟಿಕ್ ಬಾಟಲ್ ಹಾಗೂ ವೇಸ್ಟ್ ಪೇಪರ್ಗಳನ್ನ ಸಂಗ್ರಹಿಸಿ ರಿ ಸೈಕಲ್ ಮಾಡುವುದು ಸಹ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ರಘು ಹೇಳಿದ್ದಾರೆ. ಪ್ರಕೃತಿಗೆ ಧಕ್ಕೆ ತರದೆ ಕಸ ಹಾಗೂ ತ್ಯಾಜ್ಯದಿಂದ ಮುಕ್ತಿ ನೀಡಲು ಪ್ರಾಧಿಕಾರ ಮುಂದಾಗಿದ್ದು ಈ ಯೋಜನೆ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.