ಮಾದಪ್ಪನ ಭಕ್ತರಿಗೆ ಅರಣ್ಯ ಇಲಾಖೆ ಗುಡ್ ನ್ಯೂಸ್: ನಾಗಮಲೆ ಚಾರಣ ನಿಷೇಧ ತೆರವು

ನಾಗಮಲೆ ಭಕ್ತರ ಪಾಲಿನ ಒಂದು ಧಾರ್ಮಿಕ ಕ್ಷೇತ್ರವೂ ಹೌದು, ಒಂದು ರೀತಿಯಲ್ಲಿ ಚಾರಣ ಪ್ರದೇಶವೂ ಹೌದು. ಕಳೆದ ಆರು ತಿಂಗಳಿಂದ ನಾಗಮಲೆಗೆ ಚಾರಣಕ್ಕೆ ಬ್ರೇಕ ಹಾಕಲಾಗಿತ್ತು. ಆದರೆ ಇದೀಗ ಅರಣ್ಯ ಇಲಾಖೆ ನಾಗಮಲೆ ಚಾರಣಕ್ಕೆ ವಿಧಿಸಿದ್ದ ನಿಷೇಧ ತೆರವುಗೊಳಿಸಿದೆ. ಆ ಮೂಲಕ ಮಾದಪ್ಪನ ಭಕ್ತರಿಗೆ ಸಿಹಿ ಸುದ್ಧಿ ಸಿಕ್ಕಿದೆ.

ಮಾದಪ್ಪನ ಭಕ್ತರಿಗೆ ಅರಣ್ಯ ಇಲಾಖೆ ಗುಡ್ ನ್ಯೂಸ್: ನಾಗಮಲೆ ಚಾರಣ ನಿಷೇಧ ತೆರವು
ಮಾದಪ್ಪನ ಭಕ್ತರಿಗೆ ಅರಣ್ಯ ಇಲಾಖೆ ಗುಡ್ ನ್ಯೂಸ್: ನಾಗಮಲೆ ಚಾರಣ ನಿಷೇಧ ತೆರವು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 18, 2024 | 4:04 PM

ಚಾಮರಾಜನಗರ, ಅಕ್ಟೋಬರ್ 18: ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟ ನಾಗಮಲೆ (Nagamale) ಚಾರಣಕ್ಕೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಆ ಮೂಲಕ ಮಲೆ ಮಾದೇಶ್ವರನ ಭಕ್ತರಿಗೆ ಅರಣ್ಯ ಇಲಾಖೆಯಿಂದ ಗುಡ್ ನ್ಯೂಸ್ ನೀಡಲಾಗಿದೆ. ಕಾಡು ಪ್ರಾಣಿಗಳು ದಾಳಿ ಹಿನ್ನೆಲೆ ಭಕ್ತರು ಚಾರಣಕ್ಕೆ ಹೋಗದಂತೆ 6 ತಿಂಗಳ ಹಿಂದೆಯೇ ಅರಣ್ಯ ಇಲಾಖೆ ನಿರ್ಬಂಧ ಹೇರಿತ್ತು.

ನಾಗಮಲೆ ಮಲೆ ಮಹದೇಶ್ವರ ಬೆಟ್ಟದಿಂದ 14 ಕಿ.ಮೀ. ದೂರದಲ್ಲಿದೆ. 14 ಕಿಲೋ ಮೀಟರ್ ಬರಿಗಾಲಿನಲ್ಲೇ ನಾಗಮಲೆಗೆ ಭಕ್ತರು ತೆರಳುತ್ತಿದ್ದರು. ಆದರೆ ದಾರಿ ಮಧ್ಯೆ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟಿದ್ದರಿಂದ ಅರಣ್ಯ ಇಲಾಖೆ ಚಾರಣಕ್ಕೆ ನಿರ್ಬಂಧ ಹೇರಿ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು.

ಪ್ರತಿದಿನ 200 ಮಂದಿ ನಾಗಮಲೆಗೆ ಚಾರಣಕ್ಕೆ ಅವಕಾಶ

ಸದ್ಯ ನಾಗಮಲೆ ಚಾರಣಕ್ಕೆ ಇಲಾಖೆ ಅವಕಾಶ ನೀಡಿದೆ. ಆದರೆ ಆನ್​ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಂಡು ತೆರಳಲು ಅವಕಾಶ ನೀಡಲಾಗಿದೆ. ಪ್ರತಿದಿನ 200 ಮಂದಿ ನಾಗಮಲೆಗೆ ಚಾರಣಕ್ಕೆ ಹೋಗಲು ಅವಕಾಶವಿದ್ದು, ಪ್ರತಿಯೊಬ್ಬರಿಗೆ 200 ರೂಪಾಯಿ ಶುಲ್ಕವನ್ನು ಅರಣ್ಯ ಇಲಾಖೆ ವಿಧಿಸಿದೆ.

ಇದನ್ನೂ ಓದಿ: ಸದ್ಯಕ್ಕೆ ಚಾರಣಿಗರಿಗೆ ಕುಮಾರಪರ್ವತ ಬಂದ್​; ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆ

ನಾಗಮಲೆಗೆ ಚಾರಣಕ್ಕೆ ಹೋಗುವ ಭಕ್ತಾಧಿಗಳು www.aranya.gov.kar ಸೈಟ್​ನಲ್ಲಿ ನೊಂದಾಯಿಸಿಕೊಂಡಿರಬೇಕು. ಅಥವಾ ಹೆಚ್ಚಿನ ಮಾಹಿತಿಗಾಗಿ ಮಹದೇಶ್ವರ ಬೆಟ್ಟ ವನ್ಯಜೀವಿ ವಲಯ ಅರಣ್ಯಾಧಿಕಾರಿ: 9481995510, ಡಿಆರ್​ಎಫ್: 9481995527, ಪಾಲಾರ್ ಆರ್​​ಎಫ್: 9481995512, ಡಿಆರ್​ಎಫ್​ಒ: 9481995531, ಗಸ್ತು ಅರಣ್ಯಪಾಲಕ ಇಂಡಿಗನತ್ತ: 9481995597 ಅವರನ್ನು ಸಂಪರ್ಕ ಮಾಡುವಂತೆ ತಿಳಿಸಲಾಗಿದೆ.

ನಾಗಮಲೆ ಭಕ್ತರ ಪಾಲಿನ ಒಂದು ಧಾರ್ಮಿಕ ಕ್ಷೇತ್ರವೂ ಹೌದು, ಒಂದು ರೀತಿಯಲ್ಲಿ ಚಾರಣ ಪ್ರದೇಶವೂ ಹೌದು. ಮಹದೇಶ್ವರ ಬೆಟ್ಟದಿಂದ 15 ಕಿಲೋಮೀಟರ್ ದೂರ ಇರುವ ನಾಗಮಲೆಗೆ ಕಾಲ್ನಡಿಗೆಯಲ್ಲೇ ಬೆಟ್ಟವನ್ನು ಹತ್ತಿ, ಇಳಿದು ಹೋಗಬೇಕಾಗುತ್ತದೆ.

ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ: ಮಾದಪ್ಪನ ದರ್ಶನಕ್ಕೆ ಹರಿದು ಬಂದ ಲಕ್ಷಾಂತರ ಭಕ್ತಗಣ!

ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ನಾಗಮಲೆಗೂ ಹೋಗುವುದು ವಾಡಿಕೆ. ದೇವರ ದರ್ಶನ ಪಡೆಯಲು ಭಕ್ತರು ನಾಗಮಲೆಗೆ ತೆರಳುತ್ತಾರೆಯೇ ಹೊರತು ಯಾರೂ ಸಹ ಟ್ರಕ್ಕಿಂಗ್ ಹೆಸರಿನಲ್ಲಿ ಹೋಗುವುದಿಲ್ಲ. ಆದರೆ, ಅರಣ್ಯ ಇಲಾಖೆ ಇಲ್ಲಿ ಚಾರಣ ನಿಷೇಧಿಸಿದ್ದರಿಂದ ನಾಗಮಲೆಯಲ್ಲಿ ನೆಲೆಸಿರುವ ಮಹದೇಶ್ವರನ ದರ್ಶನಕ್ಕೆ ಬ್ರೇಕ್ ಬಿದ್ದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:51 pm, Fri, 18 October 24

ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ