AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಎಲೆಕ್ಷನ್​ನಲ್ಲಿ 7 ಕೋಟಿ ಹಣ ಹಂಚಿಕೆ ಆಡಿಯೋ: ಜೆಡಿಎಸ್​ನಿಂದ ದೂರು, ಕೈ ಶಾಸಕ ಹೇಳಿದ್ದಿಷ್ಟು

ಲೋಕಸಭಾ ಚುನಾವಣೆ ವೇಳೆಯಲ್ಲಿ ಹಣ ಹಂಚಿಕೆ ಬಗ್ಗೆ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರದ್ದು ಎನ್ನಲಾದ ಆಡಿಯೊ ವೈರಲ್ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಜೆಡಿಎಸ್ ನಾಯಕರಿಂದ ಎಸ್ಪಿ ಕಛೇರಿಗೆ ದೂರು ನೀಡಲಾಗಿದೆ. ಕೇಸ್ ದಾಖಲಿಸಿ ತನಿಖೆ ನಡೆಸಲು ಒತ್ತಾಯಿಸಲಾಗಿದೆ.

ಲೋಕಸಭಾ ಎಲೆಕ್ಷನ್​ನಲ್ಲಿ 7 ಕೋಟಿ ಹಣ ಹಂಚಿಕೆ ಆಡಿಯೋ: ಜೆಡಿಎಸ್​ನಿಂದ ದೂರು, ಕೈ ಶಾಸಕ ಹೇಳಿದ್ದಿಷ್ಟು
ಲೋಕಸಭಾ ಎಲೆಕ್ಷನ್​ನಲ್ಲಿ 7 ಕೋಟಿ ಹಣ ಹಂಚಿಕೆ ಆಡಿಯೋ: ಜೆಡಿಎಸ್​ನಿಂದ ದೂರು, ಕೈ ಶಾಸಕ ಹೇಳಿದ್ದಿಷ್ಟು
ಮಂಜುನಾಥ ಕೆಬಿ
| Edited By: |

Updated on: Oct 18, 2024 | 4:49 PM

Share

ಹಾಸನ, ಅಕ್ಟೋಬರ್​ 18: ಲೋಕಸಭಾ ಚುನಾವಣೆ ವೇಳೆಯಲ್ಲಿ ಹಣ ಹಂಚಿಕೆ ಬಗ್ಗೆ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (shivalinge gowda) ಅವರದ್ದು ಎನ್ನಲಾದ ಆಡಿಯೊ ವೈರಲ್​ ಬಗ್ಗೆ ಎಸ್ಪಿ ಕಛೇರಿಗೆ ಜೆಡಿಎಸ್​ ನಾಯಕರು ದೂರು ನೀಡಿದ್ದಾರೆ. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಾಜಿ ಶಾಸಕ ಲಿಂಗೇಶ್ ನೇತೃತ್ವದಲ್ಲಿ ದೂರು ನೀಡಿದ್ದು, ಹಿಂಬರಹ ಪಡೆದುಕೊಂಡಿದ್ದಾರೆ. ಶಾಸಕ ಶಿವಲಿಂಗೇಗೌಡ ವಿರುದ್ದ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮೊದಲು ದೂರು ಸ್ವೀಕರಿಸಲು ಪೊಲೀಸರು ನಿಕಾಕರಣೆ ಹಿನ್ನೆಲೆಯಲ್ಲಿ ಬಳಿಕ ಎಸ್ಪಿ ಕಛೇರಿಗೆ ದೂರು ನೀಡಲಾಗಿದೆ. ಸುಮಾರು 17 ನಿಮಿಷ ಇರುವ ಆಡಿಯೊ ಅಂಶಗಳನ್ನು ಪ್ರಸ್ತಾಪಿಸಿ ದೂರು ನೀಡಲಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ವೇಳೆ ಹಾಸನದಲ್ಲಿ ಕೋಟಿ ಕೋಟಿ ಹಣ ಹಂಚಿಕೆ: ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೊ ವೈರಲ್

ಏಳು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮತದಾರರಿಗೆ ಹಂಚಿಕೆ ಮಾಡಿದ ಬಗ್ಗೆ ಆಡಿಯೊ ವೈರಲ್ ಆಗಿದೆ. ಶಾಸಕ ಶಿವಲಿಂಗೇಗೌಡ ಅವರದ್ದು ಎನ್ನಲಾದ ಆಡಿಯೊದಲ್ಲಿ ಹಾಸನದ ಕಾಂಗ್ರೆಸ್​ ನಾಯಕರಾದ ಗೋಪಾಲಸ್ಚಾಮಿ, ಬಿ ಶಿವರಾಂ ಮತ್ತು ಸಿಎಂ, ಡಿಸಿಎಂ ಹೆಸರು ಪ್ರಸ್ತಾಪ ಆಗಿದೆ. ಹಂಚಿಕೆ ಆಗಿರುವ ಹಣ ಹವಾಲಾ ಹಣ ಆಗಿರುವ ಅನುಮಾನ ಇದೆ. ಹವಾಲಾ ಹಣ ಕಾನೂನು ಬಾಹಿರವಾಗಿದ್ದು ಈ ಬಗ್ಗೆ ತನಿಖೆ ಆಗಬೇಕು. ಕೇಸ್ ದಾಖಲಿಸಿ ತನಿಖೆ ನಡೆಸಲು ಒತ್ತಾಯಿಸಲಾಗಿದೆ.

ನಾನು ಮಾತನಾಡಿದ್ದನ್ನ ತಿರುಚಲಾಗಿದೆ: ಅದು ನಕಲಿ ಆಡಿಯೊ ಎಂದ ಶಾಸಕ ಶಿವಲಿಂಗೇಗೌಡ

ಪ್ರಕರಣದ ಬಗ್ಗೆ ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯಿಸಿದ್ದು, ಆ ಆಡಿಯೊ ನಕಲಿ ಆಡಿಯೊ. ನನ್ನ ವಿರುದ್ಧ ಏನೋ ಸಂಚು ನಡೆಯುತ್ತಿರುವ ಅನುಮಾನವಿದೆ. ಮಿಮಿಕ್ರಿ ಆಡಿಯೊ ಸೃಷ್ಟಿ ಮಾಡಿ ಸಂಚು ಮಾಡಲಾಗಿದೆ. ನಮ್ಮ ಮನೆಗೆ ನಿತ್ಯ ನೂರಾರು ಜನರು ಬರುತ್ತಾರೆ. ನಾನು ಮಾತನಾಡಿದ್ದನ್ನ ತಿರುಚಲಾಗಿದೆ. ಖಂಡಿತಾ ಅದು ನನ್ನ ಮಾತುಗಳಲ್ಲ ಎಂದು ಹೇಳಿದ್ದಾರೆ.

ಚುನಾವಣೆ ನಡೆದು ಐದು ತಿಂಗಳು ಕಳೆದಿದೆ. ಆಗ ಮಾತನಾಡಿದ್ದು ಎಂದು ಈಗ ಆಡಿಯೊ ಬಿಟ್ಟಿದ್ದಾರೆ. ಕಟ್ ಅಂಡ್ ಪೇಸ್ಟ್ ಮಾಡಿ ಈ ರೀತಿಯ ಆಡಿಯೊ ಸೃಷ್ಟಿ ಮಾಡಲಾಗಿದೆ. ಈ ಹಿಂದೆ ಕೂಡ ಇಂತಹ ಆಡಿಯೊ ಎಡಿಟ್ ಮಾಡಿ ಹರಿಯ ಬಿಡಲಾಗಿತ್ತು. ಕೆಲವರು ಇದನ್ನು ಪ್ರವೃತ್ತಿ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಈ ರೀತಿ ಮಾಡುವವರ ಬಗ್ಗೆ ಎಚ್ಚರ ವಹಿಸುತ್ತೇವೆ. ಈ ಬಗ್ಗೆ ನಮ್ಮ ವಕೀಲರನ್ನು ಸಂಪರ್ಕ ಮಾಡಿ ದೂರು ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇನೆ. ಹಣ ಹಂಚಿಕೆ ಬಗ್ಗೆ ಪ್ರಸ್ತಾಪವೇ ಇಲ್ಲ. ಅದೊಂದು ನಕಲಿ ಆಡಿಯೊ, ಏನು ಬೇಕಾದರೂ ತನಿಖೆ ಆಗಲಿ ಸಿದ್ಧನಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತೆ ಮುನ್ನಲೆಗೆ ಪಂಚಮಸಾಲಿ 2ಎ ಮೀಸಲಾತಿ ಕಿಚ್ಚು: ಸಿಎಂ ಜೊತೆ ಸಮುದಾಯದ ಮುಖಂಡರ ಸಭೆ

ಜೆಡಿಎಸ್​ನಿಂದ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ್ದು, ದೂರು ಕೊಡಲಿ ಬಿಡಿ, ಅದಕ್ಕೂ ನನಗೂ ಸಂಬಂಧ ಇಲ್ಲ. ಎಲ್ಲಾ ಆಡಿಯೊಗಳನ್ನು ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ನಾನು ಮಾತಾಡಿರುವ ಕೆಲ ಅಂಶಗಳಲ್ಲಿ ಲೋಕಾರೂಡಿ ಮಾತನಾಡಿದ್ದೇನೆ. ಆದರೆ ಅದರ ನಡುವೆ ಕೆಲ ಮಾತು ಸೇರಿಸಿ ಕುತಂತ್ರ ಮಾಡಲಾಗಿದೆ. ನನ್ನ ಶಕ್ತಿ ಕುಂದಿಸಲು ಹೀಗೆ ಮಾಡಲಾಗುತ್ತಿದೆ. ರಾಜಕೀಯವಾಗಿ ಮೇಲೆ ಬರದಂತೆ ತಡೆಯಲು ಈ ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ನಾನೇ ಸತ್ಯ ಶೋಧನೆ ಮಾಡಬೇಕಾಗಿದೆ. ಸಚಿವ ಆಗೋದು ಬಿಡೋದು ನನ್ನ ಹಣೆಬರಹ ಇದ್ದಂತೆ ಆಗುತ್ತೆ. ಮೊದಲ ಬಾರಿಗೆ ನನ್ನ ಹೆಸರು ಬಂದಿತ್ತು ಕಡೆಗೆ ತಪ್ಪಿಹೋಯಿತು. ಈಗಲೂ ಸಚಿವ ಆಗಬಹುದು ಎಂದು ತಡೆಯಲು ಕುತಂತ್ರದಿಂದ ಹೀಗೆ ಮಾಡುತ್ತಿರಬಹುದ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್