ಸದ್ಯಕ್ಕೆ ಚಾರಣಿಗರಿಗೆ ಕುಮಾರಪರ್ವತ ಬಂದ್​; ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆ

ಈ ಪರ್ವತ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಿತಾರಣ್ಯಗಳಾಗಿವೆ. ಇಂತಹ ಕಡೆ ಜನ ಸಂಚರಿಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕೆಲವರು ಅಲ್ಲಿಯೇ ಟೆಂಟ್‌ ಹಾಕಿ ಉಳಿಯುತ್ತಿರುವುದು ಅಲ್ಲಿರುವ ಸಾವಿರಾರು ಅಪರೂಪದ ಜೀವ ಸಂಕುಲಕ್ಕೆ ಇದು ಮಾರಕವಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಪರಿಸರಕ್ಕೆ ಮಾರಕವಾಗದಂತೆ ನಿರ್ಧಾರ ಕೈಗೊಳ್ಳಲಿದೆ.

ಸದ್ಯಕ್ಕೆ ಚಾರಣಿಗರಿಗೆ ಕುಮಾರಪರ್ವತ ಬಂದ್​; ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆ
ಕುಮಾರಪರ್ವತ ಚಾರಣಿಗರಿಗೆ ಬಂದ್​; ಆದೇಶ ಉಲ್ಲಂಘಿಸಿದ್ರೆ ಕಠಿಣ ಕ್ರಮ
Follow us
| Updated By: ಸಾಧು ಶ್ರೀನಾಥ್​

Updated on:Feb 08, 2024 | 2:22 PM

ಲಾಂಗ್ ವೀಕೆಂಡ್ ಬಂತಂದ್ರೆ ಸಾಕು ಪ್ಯಾಟೆ ಮಂದಿ ಟ್ರೆಕ್ಕಿಂಗ್ ಹೋಗೊದಕ್ಕೆ (Trekking Restricted) ಸಿದ್ದರಾಗಿ ಬಿಡ್ತಾರೆ. ಅದರಲ್ಲೂ ಈಗೀಗ ಸಂರಕ್ಷಿತಾರಣ್ಯಗಳು ಪ್ರವಾಸಿತಾಣಗಳಾಗಿ ಬದಲಾಗಿ ಬಿಡುತ್ತಿದೆ. ಈ ಬೆಳವಣಿಗೆ ಪ್ರಕೃತಿಯ ಮೇಲೆ ಘೋರ ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಚಾರಣ ಪ್ರದೇಶ ಕುಮಾರ ಪರ್ವತಕ್ಕೆ ಚಾರಣಿಗರ (Kumara Parvatha Trekking) ಎಂಟ್ರಿಗೆ ನಿಷೇಧ ವಿಧಿಸಲಾಗಿದೆ. ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ.

ಒಂದೆಡೆ ಹಸಿರು, ಇನ್ನೊಂದಡೆ ಮುಳಿ ಹುಲ್ಲಿನಿಂದ ಕೂಡಿದ ನುಣುಪಾದ ಶಿಖರ. ಬಂಡೆಗಳ ಕಡಿದಾದ ಪ್ರದೇಶದಲ್ಲಿ ಹೆಜ್ಜೆ ಹಾಕುವ ಚಾರಣಿಗರು. ಇದು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿ ಭಾಗದಲ್ಲಿರುವ ಕುಮಾರ ಪರ್ವತ ಪ್ರದೇಶ. ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯೊಳಗೆ ಬರುವ ಈ ಕುಮಾರ ಪರ್ವತ ಹತ್ತೋದಕ್ಕೆ ಸಾಕಷ್ಟು ಜನ ಚಾರಣಿಗರು ಬರ್ತಾರೆ.

ಲಾಂಗ್‌ ವೀಕೆಂಡ್‌ಗಳಲ್ಲಿ ಸುಮಾರು 400 ರಿಂದ 500 ಮಂದಿ ಭೇಟಿ ನೀಡುತ್ತಿದ್ದ ಈ ಪರ್ವತಕ್ಕೆ ವಾರಗಳ ಹಿಂದೆ ಸುಬ್ರಹ್ಮಣ್ಯದ ಮೂಲಕ ಸಾವಿರಾರು ಮಂದಿ ದಾಂಗುಡಿಯಿಟ್ಟಿದ್ದರು. ಇದರಿಂದ ಟಿಕೆಟ್‌ ಕೌಂಟರ್‌ನಲ್ಲಿ ನೂಕು ನುಗ್ಗಲು ಉಂಟಾದ ವೀಡಿಯೋ ವೈರಲ್‌ ಆಗಿತ್ತು. ಇದನ್ನು ನೋಡಿ ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದರು. ಈ ವಿಚಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಗಮನಕ್ಕೆ ಬಂದು ರಾಜ್ಯದ ಎಲ್ಲಾ ಟ್ರಕ್ಕಿಂಗ್‌ ಪಾಯಿಂಟ್‌ಗಳಲ್ಲಿಯೂ ಎಸ್‌ಒಪಿ ರೂಪಿಸುವ ಅಗತ್ಯವಿದ್ದು, ಅಲ್ಲಿಯವರೆಗೂ ಅನ್‌ಲೈನ್‌ ಬುಕ್ಕಿಂಗ್‌ ಇಲ್ಲದ ತಾಣಗಳಲ್ಲಿ ಟ್ರಕ್ಕಿಂಗ್‌ ನಿರ್ಬಂಧಿಸುವಂತೆ ಸೂಚಿಸಿದ್ದರು. ಅದರಂತೆ ಇದೀಗ ಕುಮಾರ ಪರ್ವತ ಪ್ರವೇಶ ಸ್ಥಳದಲ್ಲೂ ಅರಣ್ಯ ಇಲಾಖೆ ಪ್ರವಾಸಿಗರ ಎಂಟ್ರಿಗೆ ನಿರ್ಬಂಧ ವಿಧಿಸಿರುವ ಬ್ಯಾನರ್ ಅಳವಡಿಸಿದೆ.

ಇದನ್ನೂ ಓದಿ: ಕುಮಾರ ಪರ್ವತದ ತಪ್ಪಲಿನಲ್ಲಿ ನಡೆಯುತ್ತೆ ಕುಕ್ಕೆ ಸುಬ್ರಹ್ಮಣ್ಯ ದೇವರ ಪಾದುಕೆ ಪೂಜೆ, ಇದರ ಹಿಂದಿದೆ ಪುರಾಣ ಕಥೆ

ಕುಮಾರ ಪರ್ವತ ಸಮುದ್ರ ಮಟ್ಟದಿಂದ ಸುಮಾರು 5,615 ಅಡಿ ಎತ್ತರದಲ್ಲಿದೆ. ದಕ್ಷಿಣ ಕನ್ನಡ, ಕೊಡಗು, ಹಾಸನ ಈ ಮೂರು ಜಿಲ್ಲೆಯ ಕಡೆಗಳಿಂದಲೂ ಇಲ್ಲಿಗೆ ಚಾರಣ ಕೈಗೊಳ್ಳಬಹುದು. ಆದ್ರೆ ಹೆಚ್ಚಿನ ಮಂದಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಬದಿಯಿಂದ ಚಾರಣ ಆರಂಭಿಸುತ್ತಾರೆ. ಸುಬ್ರಹ್ಮಣ್ಯದಿಂದ ಕುಮಾರಪರ್ವಕ್ಕೆ ಟ್ರೆಕ್ಕಿಂಗ್ ಮಾಡಲು ಇರುವ ನಡಿಗೆಯ ದೂರ 12 ಕಿ.ಮೀ. ಸದ್ಯ ಕುಮಾರ ಪರ್ವತ ಟ್ರೆಕ್ಕಿಂಗ್ ಆರಂಭಿಸುತ್ತಿದ್ದ ಜಾಗಕ್ಕೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ( Eshwara Khandre ) ಅವರೇ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಲ್ಲಿ ಅರಣ್ಯ, ಹುಲ್ಲುಗಾವಲು ಸಂಪೂರ್ಣವಾಗಿ ಒಣಗಿರುವುದರಿಂದ ಈ ಅವಧಿಯಲ್ಲಿ ವನ್ಯಧಾಮದೊಳಗೆ ಸಾರ್ವಜನಿಕರು ಪ್ರವೇಶಿಸಿ ಚಟುವಟಿಕೆ ನಡೆಸಿದರೆ ವನ್ಯಧಾಮಕ್ಕೆ ಬೆಂಕಿ ಬೀಳುವ ಸಾಧ್ಯತೆ ಮತ್ತು ಚಾರಣಿಗರಿಗೂ ಅಪಾಯ ಇದೆ ಎಂಬ ಕಾರಣಕ್ಕಾಗಿ ಪ್ರವಾಸಿಗರಿಗೆ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. ಮುಂದೆ ದಿನವೊಂದಕ್ಕೆ ಎಷ್ಟು ಮಂದಿಗೆ ಟ್ರೆಕ್ಕಿಂಗ್ ಅವಕಾಶ ನೀಡಬಹುದು, ಏನೇನು ಕ್ರಮ ವಹಿಸಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ಆನ್‌ಲೈನ್ ಮೂಲಕವೇ ಟಿಕೇಟ್ ನೀಡುವ ವ್ಯವಸ್ಥೆ ಮಾಡಲಾಗುತ್ತೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Thu, 8 February 24

ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ