ಮಂಗಳೂರು: ಹಾಸ್ಟೆಲ್ ಊಟ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ
ಹಾಸ್ಟೆಲ್ ಊಟ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಮಂಗಳೂರು ಹೊರವಲಯದ ವಲಚ್ಚಿಲ್ ಬಳಿಯ ಶ್ರೀನಿವಾಸ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ರಾತ್ರಿ ಊಟ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಊಟದಲ್ಲಿ ಹುಳ ಬಿದ್ದು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಶಂಕೆ ವ್ಯಕ್ತವಾಗಿದೆ. ಕಾಲೇಜಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು, ಫೆ.08: ಹಾಸ್ಟೆಲ್ ಊಟ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ (Food Poison). ಮಂಗಳೂರು ಹೊರವಲಯದ ವಲಚ್ಚಿಲ್ ಬಳಿಯ ಶ್ರೀನಿವಾಸ ಕಾಲೇಜಿನ ನೂರಾರು ವಿದ್ಯಾರ್ಥಿಗಳು (Student) ಹಾಸ್ಟೆಲ್ನಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ. ಮಂಗಳೂರು ಮತ್ತು ತುಂಬೆಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಊಟದಲ್ಲಿ ಹುಳ ಬಿದ್ದು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಶಂಕೆ ವ್ಯಕ್ತವಾಗಿದೆ. ಕಾಲೇಜಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಆಕಸ್ಮಿಕ ಬೆಂಕಿ ಸೋಪಾ ಸೆಟ್ ತಯಾರಿಕಾ ಘಟಕ ಭಸ್ಮ
ಸೋಪಾ ಸೆಟ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ರಾಯಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗ್ತಿದೆ. ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಹತ್ತಿ ಸೇರಿದಂತೆ ಮತ್ತಿತರೆ ವಸ್ತುಗಳು ಭಸ್ಮವಾಗಿವೆ. ವಿಷ್ಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧ: ಓಡಿ ಹೋದ ವಿವಾಹಿತ ಜೋಡಿ, ಗಂಡನ ಮನೆಯವರಿಂದ ಅಟ್ಟಹಾಸ, ಮನೆ ಪೀಸ್ಪೀಸ್
ಆಕಸ್ಮಿಕ ಬೆಂಕಿಗೆ ಜೋಳದ ತೆನೆ ಬಣವೆಗಳು ಭಸ್ಮ
ಆಕಸ್ಮಿಕ ಬೆಂಕಿಗೆ ಜೋಳದ ತೆನೆ ಬಣವೆಗಳು ಸುಟ್ಟು ಕರಕಲಾಗಿವೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಹರಿಣಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಲ್ಲಪ್ಪ ಸೋಮನಕಟ್ಟಿ ಎಂಬ ರೈತನ ಎರಡು ಜೋಳದ ಬಣವೆಗಳು ಬೆಂಕಿ ಕೆನ್ನಾಲಗೆಯಲ್ಲಿ ಧಗಧಗಿಸಿವೆ. ಇದ್ರಿಂದ 5 ಲಕ್ಷದಷ್ಟು ಜೋಳ ನಾಶವಾಗಿದ್ದು, ಸೂಕ್ತ ಪರಿಹಾರಕ್ಕೆ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಸಮೀಪ ಅಗ್ನಿ ದುರಂತ
ಬೆಂಗಳೂರಿನ ಹೊರ ವಲಯದಲ್ಲಿರೋ ಪರಪ್ಪನ ಅಗ್ರಹಾರ ಜೈಲಿನ ಪಕ್ಕದ ಖಾಲಿ ಜಾಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಬಿಸಿ ತಾಕಿ ಹೈಟೆನ್ಷನ್ ವೈರ್ ಶಾರ್ಟ್ ಸರ್ಕ್ಯೂಟ್ನಿಂದ ಸ್ಫೋಟಗೊಂಡಿದ್ವು.. ಭಾರಿ ಸ್ಫೋಟದ ಶಬ್ಧ ಕೇಳಿ ಕಾರಾಗೃಹದ ಕೈದಿಗಳು ಬೆಚ್ಚಿ ಬಿದ್ದಿದ್ರು.. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ ಜೈಲಿನ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:20 am, Thu, 8 February 24