ವಿಜಯಪುರ: ಹೊಸ ವರ್ಷಾಚರಣೆ ಪಾರ್ಟಿ ವೇಳೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ರತ್ನಾಪುರ ಬಳಿಯ A1 ಡಾಬಾದಲ್ಲಿ ನಡೆದಿದೆ. 57 ವರ್ಷದ ಮಹಾದೇವ ಕವಲಗಿ ಎಂಬಾತನ ಕತ್ತುಕೊಯ್ದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.
ಸಂತೋಷ್, ದಶರಥ, ಪಾಂಡುರಂಗ ಎಂಬುವವರಿಂದ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಮಹದೇವ ಜೊತೆ ಊಟಕ್ಕೆ ಕುಳಿತಿದ್ದ ವೇಳೆ ಮೂವರು ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಅಂದ ಹಾಗೆ, ಕೊಲೆಗೀಡಾದ ಮಹದೇವ ಹಾಗೂ ಸಂತೋಷ್ ತಂದೆಯ ಮಧ್ಯೆ ಈ ಹಿಂದೆ ಡಾಬಾದಲ್ಲಿ ಬಿಲ್ ನೀಡುವ ವಿಚಾರವಾಗಿ ಜಗಳ ಆಗಿತ್ತೆಂದು ಮಾಹಿತಿ ಲಭ್ಯವಾಗಿದೆ. ಅದೇ ದ್ವೇಷದ ಹಿನ್ನೆಲೆ ಮೂವರು ಯುವಕರು ಮಹಾದೇವನ ಕತ್ತುಕೊಯ್ದು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಸಂತೋಷ್, ಆತನ ಸ್ನೇಹಿತರು ಪರಾರಿಯಾಗಿದ್ದಾರೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹೊಸ ವರ್ಷದಂದು.. ಚೀನಾವನ್ನು ಹಿಂದಿಕ್ಕಿದ ಭಾರತ! ಯಾವುದರಲ್ಲಿ ಗೊತ್ತಾ?
Published On - 5:52 pm, Fri, 1 January 21