ತುಮಕೂರು: ಕ್ಯಾಬ್​​ನಲ್ಲೇ ಭೀಕರವಾಗಿ ಇರಿದು ಬೆಂಗಳೂರು ಮೂಲದ ವ್ಯಕ್ತಿಯ ಹತ್ಯೆ

ಕಾರಿನ ಡ್ರೈವಿಂಗ್ ಸೀಟಿನಲ್ಲೇ ಮೃತನ ಶವ ಪತ್ತೆಯಾಗಿದೆ. ದುಶ್ಕರ್ಮಿಗಳು ನಿಸ್ಸಾರ್ ಅಹಮದ್ ಅವರ ಎದೆ, ತಲೆ, ಕುತ್ತಿಗೆ ಭಾಗಕ್ಕೆ‌‌ ಇರಿದು ಹತ್ಯೆ ಮಾಡಿದ್ದಾರೆ.

ತುಮಕೂರು: ಕ್ಯಾಬ್​​ನಲ್ಲೇ ಭೀಕರವಾಗಿ ಇರಿದು ಬೆಂಗಳೂರು ಮೂಲದ ವ್ಯಕ್ತಿಯ ಹತ್ಯೆ
ಕಾರಿನಲ್ಲಿಯೇ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ

Updated on: Jan 30, 2021 | 11:21 AM

ತುಮಕೂರು: ಯಾರೋ ದುಷ್ಕರ್ಮಿಗಳು ವ್ಯಕ್ತಿಯನ್ನು ಹತ್ಯೆ ಮಾಡಿ ಶವವನ್ನು ಕಾರಿನಲ್ಲಿಯೇ ಬಿಟ್ಟು ಹೋಗಿರುವ ಘಟನೆ ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು ಮೂಲದ ನಿಸ್ಸಾರ್ ಅಹಮದ್ (40) ಹತ್ಯೆಗೀಡಾದ ವ್ಯಕ್ತಿ. ಕಾರಿನ ಡ್ರೈವಿಂಗ್ ಸೀಟಿನಲ್ಲೇ ಮೃತನ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ನಿಸ್ಸಾರ್ ಅಹಮದ್ ಎದೆ, ತಲೆ, ಕುತ್ತಿಗೆ ಭಾಗಕ್ಕೆ‌‌ ಇರಿದು ಹತ್ಯೆ ಮಾಡಿದ್ದಾರೆ.

ದುಷ್ಕರ್ಮಿಗಳು ತಡರಾತ್ರಿ‌‌ ಈ ಕೃತ್ಯ ಎಸಗಿ, ರಸ್ತೆ ಬದಿಯಲ್ಲೇ ಕಾರನ್ನು ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹಳೇ ಲವರ್​ ಜೊತೆ ಫೊನ್​ನಲ್ಲಿ ಮಾತಾಡಿದ್ದಕ್ಕೆ ಜಗಳ: ಗಂಡನ ಮೇಲಿನ ಕೋಪಕ್ಕೆ ಮಗನನ್ನು ಕೊಂದ ತಾಯಿ

Published On - 11:16 am, Sat, 30 January 21