ಸಾಕು ಪ್ರಾಣಿಗಳೊಂದಿಗೆ ನಾಮಪತ್ರ ಸಲ್ಲಿಸಲು ಬಂದ ಭೂಪ; ಚಿನ್ನದ ನಾಡಲ್ಲಿ ಎಲ್ಲರ ಗಮನ ಸೆಳೆದ ಗಿಡ್ಡಪ್ಪ

| Updated By: KUSHAL V

Updated on: Dec 12, 2020 | 7:05 AM

ಈ ಅಭ್ಯರ್ಥಿ ಕಾವಿಧಾರಿಯಾಗಿ ಕೈಯಲ್ಲಿ ಕಮಂಡಲ, ತಂಬೂರಿ ಹಿಡಿದುಕೊಂಡು, ಕತ್ತಿಗೆ ಹಾರ ಹಾಕಿಕೊಂಡಿದ್ದರು. ಒಂದು ಕಡೆ ತಮಟೆ ವಾದ್ಯ, ಮತ್ತೊಂದೆಡೆ ನೃತ್ಯ ಮಾಡುತ್ತಾ ಬಂದಿದ್ದಾರೆ. ಅವರ ಜೊತೆಗೆ ಸಾಕು ಪ್ರಾಣಿ ಕತ್ತೆ, ಕುರಿ, ಮೇಕೆ, ಎಮ್ಮೆ ಸೇರಿಂದತೆ ಹಲವು ಪ್ರಾಣಿಗಳು ಇವರ ಜೊತೆ ಬಂದಿದ್ದು ವಿಶೇಷವಾಗಿತ್ತು.

ಸಾಕು ಪ್ರಾಣಿಗಳೊಂದಿಗೆ ನಾಮಪತ್ರ ಸಲ್ಲಿಸಲು ಬಂದ ಭೂಪ; ಚಿನ್ನದ ನಾಡಲ್ಲಿ ಎಲ್ಲರ ಗಮನ ಸೆಳೆದ ಗಿಡ್ಡಪ್ಪ
ನಾಮಪತ್ರ ಸಲ್ಲಿಸಲು ವಿಭಿನ್ನವಾಗಿ ಆಗಮಿಸಿದ ಗಿಡ್ಡಪ್ಪ
Follow us on

ಕೋಲಾರ: ಗ್ರಾಮ ಪಂಚಾಯಿತಿ ಚುನಾವಣೆ ಅಖಾಡ ಸಿದ್ಧವಾಗಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ತನ್ನ ಬೆಂಬಲಿಗರನ್ನು ಕರೆದುಕೊಂಡು ಬರೋದು ಸರ್ವೇಸಾಮಾನ್ಯ. ಆದರೆ, ಜಿಲ್ಲೆಯಲ್ಲಿ ಅಭ್ಯರ್ಥಿಯೋರ್ವ ವಿಭಿನ್ನವಾಗಿ ನಾಮಪತ್ರ ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈ ಅಭ್ಯರ್ಥಿ ಕಾವಿಧಾರಿಯಾಗಿ ಕೈಯಲ್ಲಿ ಕಮಂಡಲ, ತಂಬೂರಿ ಹಿಡಿದುಕೊಂಡು, ಕತ್ತಿಗೆ ಹಾರ ಹಾಕಿಕೊಂಡಿದ್ದರು. ಒಂದು ಕಡೆ ತಮಟೆ ವಾದ್ಯ, ಮತ್ತೊಂದೆಡೆ ನೃತ್ಯ ಮಾಡುತ್ತಾ ಬಂದಿದ್ದಾರೆ. ಅವರ ಜೊತೆಗೆ ಸಾಕು ಪ್ರಾಣಿ ಕತ್ತೆ, ಕುರಿ, ಮೇಕೆ, ಎಮ್ಮೆ ಸೇರಿಂದತೆ ಹಲವು ಪ್ರಾಣಿಗಳು ಇವರ ಜೊತೆ ಬಂದಿದ್ದು ವಿಶೇಷವಾಗಿತ್ತು.

ಇಂಥದ್ದೊಂದು ವಿಭಿನ್ನ ಸನ್ನಿವೇಶ ಕಂಡು ಬಂದಿದ್ದು ಜಿಲ್ಲೆಯ ಮಾಲೂರು ತಾಲ್ಲೂಕಿನ ಕುಡಿಯನೂರು ಗ್ರಾಮದಲ್ಲಿ. ಪಂಚಾಯಿತಿ ಸದಸ್ಯ ಗಿಡ್ಡಪ್ಪ ಹೀಗೆ ಭಿನ್ನವಾಗಿ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದವರು. ಈ ಫೋಟೋ ಹಾಗೂ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಅವರು ಈ ರೀತಿ ಭಿನ್ನವಾಗಿ ನಾಮಪತ್ರ ಸಲ್ಲಿಕೆ ಮಾಡಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Published On - 6:44 am, Sat, 12 December 20