ಬಸ್ ಸಂಚಾರ ಸ್ಥಗಿತ: ಮನೆಯಿಂದ ಹೊರಬರುವ ಮೊದಲು ಯೋಚಿಸಿ
ಸಾರಿಗೆ ನಿಗಮಗಳ ನೌಕರರು ತಮ್ಮ ಸಮಸ್ಯೆ ಏನು ಎಂಬುದನ್ನು ಮನವರಿಕೆ ಮಾಡಿ ಮಾಡಿಕೊಟ್ಟರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜತೆ ಚರ್ಚೆ ಮಾಡುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದ್ದರು. ಆದರೆ, ಈಗ ಮಾತುಕತೆ ವಿಫಲವಾಗಿದೆ.

ಬೆಂಗಳೂರು: ಸಾರಿಗೆ ನಿಗಮಗಳ ನೌಕರರು ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದಾಗಿ ಸರ್ಕಾರದ ಎದುರು ಬಿಗಿ ಪಟ್ಟು ಹಿಡಿದಿದ್ದಾರೆ. ಏನೇ ಸಮಸ್ಯೆ ಇದ್ದರೂ ಬಂದು ಚರ್ಚಿಸಿ ಬಗೆಹರಿಸಿಕೊಳ್ಳಿ. ಅದನ್ನು ಬಿಟ್ಟು ಪ್ರತಿಭಟನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿರುವ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದ ನೌಕರರು ಪ್ರತಿಭಟನೆ ಮುಂದುವರಿಸಲಿದ್ದಾರೆ. ಹೀಗಾಗಿ, ಶನಿವಾರವೂ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗೆ ಇಳಿಯುತ್ತಿಲ್ಲ.
ಸಾರಿಗೆ ನಿಗಮಗಳ ನೌಕರರು ತಮ್ಮ ಸಮಸ್ಯೆ ಏನು ಎಂಬುದನ್ನು ಮನವರಿಕೆ ಮಾಡಿ ಮಾಡಿಕೊಟ್ಟರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಚರ್ಚೆ ಮಾಡುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದ್ದರು. ಆದರೆ, ಈಗ ಮಾತುಕತೆ ವಿಫಲವಾಗಿದೆ.
ನೌಕರರ ಸಂಘಟನೆಯಲ್ಲೀಗ ಎರಡು ಬಣಗಳಾಗಿವೆ. ಇಂದು ಸಚಿವ ಲಕ್ಷ್ಮಣ ಸವದಿ ಒಂದು ಬಣದ ಜೊತೆಗೆ ಮಾತುಕತೆ ನಡೆಸಿದರು. ಆದರೆ, ಎರಡೂ ಬಣಗಳಿಗೆ ಆಹ್ವಾನ ನೀಡಬೇಕಿತ್ತು ಎಂಬುದು ನೌಕರರ ಆಗ್ರಹವಾಗಿದೆ. ಈ ಎಲ್ಲ ಕಾರಣಕ್ಕೆ ಇಂದು ಕೂಡ ಮಾತುಕತೆ ಸಫಲವಾಗಿಲ್ಲ. ಹೀಗಾಗಿ, ನಾಳೆಯೂ ಬಸ್ ವ್ಯವಸ್ಥೆ ಇರುವುದಿಲ್ಲ.
ಲಕ್ಷ್ಮಣ ಸವದಿಯದ್ದೇ ತಪ್ಪಾ? ಸಾರಿಗೆ ನಿಗಮಗಳ ನೌಕರರು ಗುರುವಾರದಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಲಕ್ಷ್ಮಣ ಸವದಿ ಸೇರಿ ಯಾವುದೇ ಸಚಿವರು ಅವರ ಬಳಿ ತೆರಳಿ ಕಷ್ಟ ಆಲಿಸಿಲ್ಲ. ಇದಕ್ಕೆ ಸಿಟ್ಟಾದ ಸಿಬ್ಬಂದಿ, ಇಂದು (ಡಿ.11) ಬಸ್ ಚಾಲನೆ ಮಾಡದೆ ಮುಷ್ಕರ ನಡೆಸುತ್ತಿದ್ದಾರೆ. ಲಕ್ಷ್ಮಣ ಸವದಿ ಮೊದಲೇ ಎಚ್ಚೆತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಹೆಚ್ಚು ಹಣ ಕೀಳುತ್ತಿದ್ದಾರೆ ಆಟೋದವರು: ಬಿಎಂಟಿಸಿ ಬಸ್ಗಳು ಇಲ್ಲದ ಕಾರಣ ಸಾರ್ವಜನಿಕರಿಗೆ ಆಟೋ ಹಾಗೂ ಕ್ಯಾಬ್ಗಳಲ್ಲಿ ತೆರಳೋದು ಅನಿವಾರ್ಯ ಆಗಿದೆ. ಈ ಸಂದರ್ಭದಲ್ಲಿ ಆಟೋದವರು ಹೆಚ್ಚು ಹಣ ಕೀಳುತ್ತಿರುವ ಸಾಕಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿವೆ. ಸಾರ್ವಜನಿಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಾ ಹೆಚ್ಚು ಹಣ ಕೊಟ್ಟೇ ಪ್ರಯಾಣ ಮಾಡುವ ಪರಿಸ್ಥಿತಿ ಬಂದೊದಗಿದೆ.
Explainer | ಆಂಧ್ರ ಸಾರಿಗೆ ನಿಗಮ ಸಿಬ್ಬಂದಿ ಈಗ ರಾಜ್ಯ ಸರ್ಕಾರಿ ನೌಕರರು: ಏನಿದು ‘ಆಂಧ್ರ ಮಾಡೆಲ್‘?
ಚರ್ಚಿಸೋಣ ಬನ್ನಿ, ಮುಷ್ಕರ ಕೈಬಿಡಿ: ಸಾರಿಗೆ ನೌಕರರಿಗೆ ಸಚಿವ ಸವದಿ ಮನವಿ