ದರೋಡೆಗೆ ಬಂದವರು ಬೈಕ್ ಬಿಟ್ಟು ಓಡಿದರು; ಖದೀಮರ ಹಿಮ್ಮೆಟ್ಟಿಸಿದ ಸ್ಥಳೀಯರು

| Updated By: ganapathi bhat

Updated on: Apr 06, 2022 | 8:04 PM

ಒಂಟಿ‌ ಮನೆಯನ್ನು ಗುರಿಯಾಗಿಸಿದ್ದ ದರೋಡೆಕೋರರ ಗುಂಪು, ಮಂಡ್ಯ ಜಿಲ್ಲೆ ಬಿಳಿದಗಲು ಗ್ರಾಮದ ಪುಟ್ಟಸ್ವಾಮಿ ಎಂಬವರ ಮನೆ ಮೇಲೆ ದಾಳಿ ನಡೆಸಿದೆ.

ದರೋಡೆಗೆ ಬಂದವರು ಬೈಕ್ ಬಿಟ್ಟು ಓಡಿದರು; ಖದೀಮರ ಹಿಮ್ಮೆಟ್ಟಿಸಿದ ಸ್ಥಳೀಯರು
ದರೋಡೆ ವಿಫಲ ಯತ್ನ ಸಿಸಿಟಿವಿಯಲ್ಲಿ ಸೆರೆ
Follow us on

ಮಂಡ್ಯ: ಒಂಟಿ ಮನೆಯಲ್ಲಿ ದರೋಡೆಗೆ ನಡೆಸಿದ ಯತ್ನ ವಿಫಲವಾದ ಘಟನೆ ಮಂಡ್ಯ ತಾಲೂಕಿನ ಬಿಳಿದಗಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟಸ್ವಾಮಿ ಎಂಬವರ ಮನೆಯಲ್ಲಿ ಖದೀಮರು ದರೋಡೆಗೆ ಯತ್ನಿಸಿದ್ದಾರೆ. ಮನೆ ಬಾಗಿಲು ಮುರಿದು ಕಳ್ಳತನಕ್ಕೆ ಮುಂದಾಗಿದ್ದರು. ಈ ವೇಳೆ ಪುಟ್ಟಸ್ವಾಮಿ ಹಾಗೂ ಕೆಲಸದವರು ಹೊರ ಬಂದ ಹಿನ್ನೆಲೆ ದರೋಡೆ ಯತ್ನ ವಿಫಲವಾಗಿದೆ.

ಒಂಟಿ‌ ಮನೆಯನ್ನು ಗುರಿಯಾಗಿಸಿದ್ದ ದರೋಡೆಕೋರರ ಗುಂಪು, ಬಿಳಿದಗಲು ಗ್ರಾಮದ ಮನೆ ಮೇಲೆ ದಾಳಿ ನಡೆಸಿದೆ. ಆ ವೇಳೆ ಪುಟ್ಟಸ್ವಾಮಿ ಮತ್ತು ಕೆಲಸದವರು ಮನೆ ಹೊರಗೆ ಬಂದಿದ್ದಾರೆ. ಖದೀಮರ ಕೃತ್ಯ ಕಂಡವರ ಮೇಲೆ, ಕಲ್ಲು ಎಸೆದು ಹಲ್ಲೆ ನಡೆಸಲು ದರೋಡೆಕೋರರು ಮುಂದಾಗಿದ್ದಾರೆ. ಈ ವೇಳೆ, ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ದರೋಡೆಕೋರರು ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಮನೆ ಬಳಿ ಇದ್ದ ಖದೀಮರ ಚಲನವಲನ ಮನೆಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಪುಟ್ಟಸ್ವಾಮಿ ಅವರ ಮನೆ

ಮಂಡ್ಯ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಪ್ರೌಢಶಾಲಾ ಶಿಕ್ಷಕ ಅರೆಸ್ಟ್

ಮಂಡ್ಯದಲ್ಲಿ ಕಲುಷಿತ ನೀರು ಸೇವಿಸಿ 20 ಜನರು ಅಸ್ವಸ್ಥ

Published On - 8:01 pm, Mon, 8 February 21