ಮಂಡ್ಯದಲ್ಲಿ ಕಲುಷಿತ ನೀರು ಸೇವಿಸಿ 20 ಜನರು ಅಸ್ವಸ್ಥ
ಚರಂಡಿ ನೀರು ಮಿಶ್ರಣಗೊಂಡಿದ್ದ ನೀರನ್ನು ಸೇವಿಸಿದ ಅಗ್ರಹಾರ ಗ್ರಾಮದ 20 ಜನರಿಗೆ ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ.
ಮಂಡ್ಯ: ಕಲುಷಿತ ನೀರು ಸೇವಿಸಿ ಸುಮಾರು 20 ಜನರು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದ್ದು,ದೊಡ್ಡೆಬಾಲ ಗ್ರಾಮಪಂಚಾಯತಿ ಬೇಜವಬ್ದಾರಿಯಿಂದಲೇ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ.
ಚರಂಡಿ ನೀರು ಮಿಶ್ರಣಗೊಂಡಿದ್ದ ನೀರನ್ನು ಸೇವಿಸಿದ ಅಗ್ರಹಾರ ಗ್ರಾಮದ 20 ಜನರಿಗೆ ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ. ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರು ಮಿಶ್ರಣವಾಗಿದೆ. ನೀರು ಕಲುಷಿತವಾಗಿದೆ ಎಂದು ತಿಳಿಯುತ್ತಿದ್ದಂತೆ ನೀರನ್ನು ಕುಡಿಯಬಾರದೆಂದು ತಾಲೂಕು ಪಂಚಾಯತಿ ಆಡಳಿತ ಗ್ರಾಮಸ್ಥರಿಗೆ ತಿಳಿಸಿದೆ. ಚರಂಡಿ ಮಿಶ್ರಣ ನೀರನ್ನು ಸೇವಿಸಿದ ಜನರಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಯಿಯ ಹಿಂಬಾಲಿಸಿದ ಪುತ್ರ.. ತಾಯಿ ಅಂತ್ಯ ಸಂಸ್ಕಾರವಾಗುತ್ತಿದ್ದಂತೆ ಪುತ್ರನೂ ಸಾವಿಗೀಡಾದ