ಮಂಡ್ಯ: ಜಮೀನು ವಿವಾದ, ದಂಪತಿಗೆ ಕಾರಿನಿಂದ ಗುದ್ದಿದ ದುಷ್ಕರ್ಮಿಗಳು, ಪತ್ನಿ ಸಾವು, ಪತಿಗೆ ಗಂಭೀರ ಗಾಯ

| Updated By: Rakesh Nayak Manchi

Updated on: Jan 03, 2023 | 9:10 AM

ರಾಮಕೃಷ್ಣಯ್ಯ ದಂಪತಿ ಟ್ರ್ಯಾಕ್ಟರ್​​ನಲ್ಲಿ ಉಳುಮೆ ಮಾಡಿಸುತ್ತಿದ್ದಾಗ ಕಾರಿನಿಂದ ಗುದ್ದಿ ಹತ್ಯೆಗೆ ಯತ್ನ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಘಟನೆಯಲ್ಲಿ ರಾಮಕೃಷ್ಣಯ್ಯ ಗಂಭೀರವಾಗಿ ಗಾಯಗೊಂಡಿದ್ದು, ಇವರ ಪತ್ನಿ ಸಾವನ್ನಪ್ಪಿದ್ದಾರೆ.

ಮಂಡ್ಯ: ಜಮೀನು ವಿವಾದ, ದಂಪತಿಗೆ ಕಾರಿನಿಂದ ಗುದ್ದಿದ ದುಷ್ಕರ್ಮಿಗಳು, ಪತ್ನಿ ಸಾವು, ಪತಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಜಮೀನು ವಿವಾದ ಸಂಬಂಧ ದುಷ್ಕರ್ಮಿಗಳು ದಂಪತಿಗೆ ಕಾರಿನಿಂದ ಗುದ್ದಿ ಹತ್ಯೆಗೆ (Murder Attempt) ಯತ್ನಿಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಗಾಣಸಂದ್ರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಜಯಲಕ್ಷ್ಮಿ (45) ಎಂಬವರು ಸಾವನ್ನಪ್ಪಿದ್ದು, ಇವರ ಪತಿ ರಾಮಕೃಷ್ಣಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ಟ್ರ್ಯಾಕ್ಟರ್​​ನಲ್ಲಿ ಉಳುಮೆ ಮಾಡಿಸುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ತ ಎಸಗಿದ್ದಾರೆ. ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಗೌಡಯ್ಯ, ಅನಿಲ್, ಗೌಡಯ್ಯನ ಪತ್ನಿ ಖಾಕಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಅಮೆರಿಕ: ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣವೊಂದರಲ್ಲಿ ಯಜಮಾನನ ಕೊಲೆ, ಇಬ್ಬರು ಹೆಣ್ಣಮಕ್ಕಳ ಮೇಲೂ ಚಾಕು ಪ್ರಹಾರ

ಗೌಡಯ್ಯ ಮತ್ತು ರಾಮಕೃಷ್ಣಯ್ಯ ಕುಟುಂಬದ ನಡುವೆ ಜಮೀನು ವಿವಾದವಿತ್ತು. ರಾಮಕೃಷ್ಣಯ್ಯ ಮತ್ತು ಇವರ ಪತ್ನಿ ಜಯಲಕ್ಷ್ಮಿ ನಿನ್ನೆ ಸಂಜೆ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸುತ್ತಿದ್ದ ದುಷ್ಕರ್ಮಿಗಳು ಕಾರು ಡಿಕ್ಕಿ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ದಂಪತಿಯನ್ನು ಎಸಿ ಗಿರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಜಯಲಕ್ಷ್ಮಿ ಕೊನೆಯುಸಿರೆಳೆದರು. ರಾಮಕೃಷ್ಣಯ್ಯ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ವಿಜಯನಗರದಲ್ಲಿ ಕಸಾಯಿಖಾನೆಗೆ ಸಾಗಿಸುತ್ತದ್ದ ಕರುಗಳನ್ನು ರಕ್ಷಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು

ವಿಜಯನಗರ: ಕಸಾಯಿಖಾನೆ (Slaughterhouse)ಗೆ ಸಾಗಿಸುತ್ತಿದ್ದ ಕರುಗಳನ್ನು ಮರಿಯಮ್ಮನಹಳ್ಳಿಯ ಶ್ರೀರಾಮ ಸೇನೆ ಕಾರ್ಯಕರ್ತರು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ. ಹೊಸಪೇಟೆ (Hosapete)ಯ ಕಸಾಯಿಖಾನೆಗೆ ಟಾಟಾ ಏಸ್​ನಲ್ಲಿ 16 ಕರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಶ್ರೀರಾಮಸೇನೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ವಾಹನವನ್ನು (Calves rescued by Srirama sene) ತಡೆದಿದ್ದಾರೆ. ಅದರಂತೆ ಕರುಗಳನ್ನು ಸಾಗಿಸುತ್ತಿದ್ದ ಸಂತೋಷ ಹಾಗೂ ಈಶಪ್ಪ ಎಂಬವರನ್ನು ಶ್ರೀರಾಮಸೇನೆ ಯುವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಡು ಕರುಗಳು ಎನ್ನುವ ಕಾರಣಕ್ಕಾಗಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:10 am, Tue, 3 January 23