ಮಂಡ್ಯ: ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಆಣೆಕಟ್ಟಿನಲ್ಲಿ ಬಿರುಕು ಮೂಡಿದೆ ಎಂಬ ಹೇಳಿಕೆಗಳ ಬೆನ್ನಲ್ಲೇ ಸ್ವತಃ ತಾವೇ ಗಣಿಗಾರಿಕೆಯ ಗ್ರೌಂಡ್ ರಿಪೋರ್ಟ್ ಪಡೆಯಲು ಸಂಸದೆ ಸುಮಲತಾ ಅಂಬರೀಶ್ ಮುಂದಾಗಿದ್ದಾರೆ. ನಾಳೆ ಮಂಡ್ಯ ಜಿಲ್ಲೆಗೆ ತೆರಳಲಿರುವ ಸಂಸದೆ ಸುಮಲತಾ ಅಂಬರೀಶ್ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ಕೊಡಲಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಚೆನ್ನಕೆರೆ, ಹಂಗರ ಹಳ್ಳಿ, ಪಾಂಡವಪುರ ತಾಲೂಕಿನ ಬೇಬಿ ಬೆಟ್ಟಕ್ಕೆ ಭೇಟಿ ನೀಡಲು ಅವರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಳೆ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ವಿಚಾರ ಹೊರಬೀಳುತ್ತಿದ್ದಂತೆಯೇ ಮಂಡ್ಯದಲ್ಲಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಗಣಿಗಾರಿಕೆ ಪ್ರದೇಶಕ್ಕೆ ತೆರಳುವ ಮೊದಲು ಕೆಆರ್ಎಸ್ ಆಣೆಕಟ್ಟಿಗೆ ಹೋಗಬೇಕಿತ್ತು ಅನಿಸಲಿಲ್ಲವೇ? 3 ದಿನಗಳಿಂದ ಕಟ್ಟೆ ಭಾಷಣ ಬಿಗಿದು ಈಗ್ಯಾಕೆ ಹೋಗುತ್ತಿದ್ದಾರೆ? ನಿಮ್ಮ ಉದ್ದೇಶ ಏನು ? ಗಣಿಗಾರಿಕೆ ನಂಬಿ ಬದುಕುವವರಿಗೆ ತೊಂದರೆ ಕೊಡುವುದಾ? ಮಂಡ್ಯದಲ್ಲಿ ಅದಿರು,ಚಿನ್ನ ತೆಗಿಯುವುದಿಲ್ಲ. ಜಲ್ಲಿ ಕಲ್ಲು ತೆಗೆಯುತ್ತಾರೆ. ಯಾರಾದರು ಅಕ್ರಮ ಮಾಡುತ್ತಿದ್ದರೆ ಸಕ್ರಮ ಮಾಡಿಕೊಡಿ, ನ್ಯುಸೆನ್ಸ್ ಕ್ರಿಯೆಟ್ ಮಾಡಬೇಡಿ ಎಂದು ಅವರು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಪ್ರಶ್ನೆಗಳ ಮೂಲಕ ಟೀಕಿಸಿದ್ದಾರೆ.
ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಜಲಾಶಯ ಬಿರುಕು ಬಿಟ್ಟಿಲ್ಲವೆಂದು ರಾಜ್ಯ ಸರ್ಕಾರ ಟೆಕ್ನಿಕಲ್ ರಿಪೋರ್ಟ್ ಬಿಡುಗಡೆಮಾಡಿದೆ. ವರದಿ ಬಂದಮೇಲೂ ಬಿರುಕು ಬಿಟ್ಟಿದೆ ಎಂದು ಹೇಳ್ತಿದ್ದಾರೆ. ಒಬ್ಬ ಸಂಸದೆ ಈ ರೀತಿಯ ಉದ್ದೇಶ ಇಟ್ಟಕೊಂಡರೆ ರಾಜ್ಯ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ದೇಶದ ಗೌಪ್ಯತೆ ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕರಿಸದವರು ಡ್ಯಾಂ ದೇಶದ ಆಸ್ತಿ, ಇದು ಬಿರುಕು ಬಿಟ್ಟಿದೆ ಅಂತಾರೆ. ಡ್ಯಾಂ ಬಿರುಕು ಎಂದು ಬಹಿರಂಗವಾಗಿ ಹೇಳೋದೇನಿದೆ? ನಾಗರಿಕರು, ವಿದ್ಯಾವಂತರು ಮಾಡುವ ಕೆಲಸನಾ ಇದು? ಇಂತಹ ಹೇಳಿಕೆಗಳನ್ನೇ ಅಲ್ವಾ ದೇಶದ್ರೋಹ ಅನ್ನೋದು? ಡ್ಯಾಂ ಬಿರುಕು ಬಿಟ್ಟ ವರದಿ ಇದ್ದರೆ ತೆಗೆದುಕೊಂಡು ಬನ್ನಿ. ಸುಮ್ಮನೆ ಯಾಕೆ ಕೆಆರ್ಎಸ್ ಡ್ಯಾಂಗೆ ಅಪಕೀರ್ತಿ ತರುತ್ತೀರಾ? ನೀವು ಗೆದ್ದಿದ್ದು ಡ್ಯಾಂ ಸರಿ ಇಲ್ಲ ಅಂತ ಹೇಳೋದಕ್ಕಾ? ಎಂದು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.
ಸಿಎಂ ಬಿ ಎಸ್ ಯಡಿಯೂರಪ್ಪ ಭೇಟಿಯಾಗಿದ್ದ ಸಂಸದೆ ಸುಮಲತಾ; ಮೈಶುಗರ್ ಕಾರ್ಖಾನೆ, ಅಕ್ರಮ ಗಣಿಗಾರಿಕೆ ವಿಚಾರ ಚರ್ಚೆ
ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಆರ್ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ನೀಡಿದ್ದೇನೆ. ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಕುಮಾರಸ್ವಾಮಿ ಅವರಿಂದ ಸಮರ್ಥಿಸಿಕೊಳ್ಳುವ ಮಾತುಗಳು ಬೇಡ ಎಂದು ತಮ್ಮ ಮತ್ತು ಕುಮಾರಸ್ವಾಮಿ ನಡುವೆ ಆದ ವಾಗ್ವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಮೊದಲು ಕ್ಷಮೆಯಾಚಿಸಬೇಕು. ಆಡಿಯೋ, ವಿಡಿಯೋಗಳಿದ್ದರೆ ಇಂದೇ ಬಿಡುಗಡೆ ಮಾಡಲಿ. ನಾನು ಸವಾಲು ಹಾಕುತ್ತೇನೆ ಇಂದೇ ಬಿಡುಗಡೆ ಮಾಡಲಿ. ಚುನಾವಣೆ ಇನ್ನೂ ದೂರವಿದೆ, ಈಗಲೇ ಬಿಡುಗಡೆ ಮಾಡಿ ಎಂದು ಸಂಸದೆ ಸುಮಲತಾ ಅಂಬರೀಶ್ ನಿನ್ನೆ ತಿರುಗೇಟು ನೀಡಿದ್ದರು.
ಇದನ್ನೂ ಓದಿ:
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಹಿಳೆಯರ ಕ್ಷಮೆ ಯಾಚಿಸುವಂತೆ ಮಂಡ್ಯದಲ್ಲಿ ಪ್ರತಿಭಟನೆ
Opinion: ಮಾತು ಮನೆ ಕೆಡಿಸಿತ್ತು; ಸಿದ್ದು, ಕುಮಾರಸ್ವಾಮಿ ರಾಜಕೀಯ ದಡ್ಡತನ ತೋರಿಸಿದ್ದು ನಿಜ
(Mandya MP Sumalatha Ambarish decided to visit the mining areas around KRS Dam)
Published On - 4:11 pm, Tue, 6 July 21