ಹೊಸ ವರ್ಷಾಚರಣೆ ಕೆಆರ್ಎಸ್ ಬಳಿ ಮಾಡುವ ಪ್ಲ್ಯಾನ್ ಇದ್ದರೆ ಹುಷಾರ್, ನಿಷೇಧಾಜ್ಞೆ ಜಾರಿಯಲ್ಲಿರಲಿದೆ!
ಹೊಸ ವರ್ಷವನ್ನು ಆಚರಿಸಲು ಮದ್ಯಸೇವನೆ ಮಾಡುವ ಬದಲು ನಾನಾ ವಿಧಗಳ ಮೂಲಕ ನೂತನ ವರ್ಷವನ್ನು ಬರಮಾಡಿಕೊಳ್ಳಬಹುದು. ರಾಜ್ಯದ ಹಲವಾರು ಹಳ್ಳಿಗಳ ದೇವಸ್ಥಾನಗಳಲ್ಲಿ ಭಜನೆ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ, ಕೆಲವು ಕಡೆ ಹೊನಲು ಬೆಳಕಿನ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಮದ್ಯಸೇವನೆ ಮಾಡುವವರು ಬೇರೆಯವರಿಗೆ ತಮ್ಮಿಂದ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕು.
ಮಂಡ್ಯ: ಹೊಸ ವರ್ಷಾಚರಣೆ ಎಲ್ಲರಿಗೂ ಸಂಭ್ರಮದ ಸಂದರ್ಭವೇ, ಆದರೆ ಸಂಭ್ರಮಾಚರಣೆ ನೆಪದಲ್ಲಿ ಕೆಲವರು ಎಲ್ಲೆ ಮೀರೋದುಂಟು. ಅದಕ್ಕೆ ಕಡಿವಾಣ ಹಾಕಲು ಮಂಡ್ಯ ಜಿಲ್ಲಾ ಪೊಲೀಸ್ ವ್ಯವಸ್ಥೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಣಿಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳುವ ಪ್ರಕಾರ, ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಮತ್ತು ಹಿನ್ನೀರಿನ ಪ್ರದೇಶ ಹಾಗೂ ಮಳವಳ್ಳಿ ತಾಲೂಕಿನ ಮುತ್ತಟ್ಟಿ ಅರಣ್ಯ ಹಾಗೂ ಇತರ ಪ್ರವಾಸಿ ಪ್ರದೇಶಗಳಲ್ಲಿ 31-12-2024 ಮತ್ತು 01-01-2025 ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ ಮತ್ತು ಮೋಜು ಮಸ್ತಿ ನೆಪದಲ್ಲಿ ಮದ್ಯ, ಮಾದಕ ವಸ್ತುಗಳ ಸೇವನೆ ಹಾಗೂ ಬೇರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: New Year 2025: ಮೈಸೂರಿನ ಅರಮನೆ ಬಳಿ ಹೊಸ ವರ್ಷಾಚರಣೆ ರದ್ದು, ಕಾರಣ?
Published on: Dec 30, 2024 11:39 AM
Latest Videos