ಸಿದ್ದರಾಮಯ್ಯನವರ ಬಗ್ಗೆ ಹೇಳಿದ್ದು ರಾಜಕೀಯ ತಿರುವು ಪಡೆದುಕೊಂಡಿದೆ: ಪ್ರತಾಪ್ ಸಿಂಹ
ರಾಜಕೀಯ ಬದುಕು ಆರಂಭಿಸಿದಂದಿನಿಂದ ಇದುವರೆಗೆ ತಾನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡೇ ಬಂದಿದ್ದೇನೆ, ಕೆಆರ್ಎಸ್ ರಸ್ತೆಯ ಮೂಲ ಹೆಸರು ಪ್ರಿನ್ಸೆಸ್ ಕೃಷ್ಣಜ್ಜಮ್ಮಣ್ಣಿ ರಸ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ, ಮೈಸೂರಿನ ಎಲ್ಲ ರಸ್ತೆಗಳು ಮತ್ತು ಸರ್ಕಲ್ ಗಳು ಸಾಮಾನ್ಯವಾಗಿ ರೂಢೀಗತ ಹೆಸರುಗಳಲ್ಲೇ ಕರೆಯಲ್ಪಡುತ್ತವೆ ಎಂದು ಪ್ರತಾಪ್ ಸಿಂಹ ಹೇಳಿದರು.
ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಆಡಿದ ಮಾತುಗಳು ರಾಜಕೀಯ ತಿರುವು ಪಡೆದುಕೊಂಡಿವೆ. ತಾವಾಡಿದ ಮಾತುಗಳ ಬಗ್ಗೆ ಖುದ್ದು ಪ್ರತಾಪ್ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಮೈಸೂರು ನಗರದಲ್ಲಿ ಕಾರ್ಪೋರೇಷನ್ ಅಸ್ತಿತ್ವಕ್ಕೆ ಬಂದ ಬಳಿಕ ಕೆಆರ್ ಎಸ್ ರಸ್ತೆಗೆ ಯಾವುದೇ ನಿರ್ದಿಷ್ಟವಾದ ಹೆಸರಿಲ್ಲ, ಆ ರಸ್ತೆಯಲ್ಲಿರುವ ಆಸ್ಪತ್ರೆಗಳ ನಿರ್ಮಾಣಕ್ಕೆ ಸಿದ್ದರಾಮಯ್ಯ ಹಣ ಸಹಾಯ ಮಾಡಿರುವವುದರಿಂದ ಅದಕ್ಕೆ ಸಿದ್ದರಾಮಯ್ಯ ಆರೋಗ್ಯ ಪಥ ಅಂತ ಹೆಸರಿಟ್ಟುಕೊಂಡರೆ ಅದರಲ್ಲಿ ತಪ್ಪೆನು ಬಂತು ಎಂದಷ್ಟೇ ತಾನು ಹೇಳಿದ್ದು ಎನ್ನುವ ಪ್ರತಾಪ್ ತಮಗೆ ಕಾಂಗ್ರೆಸ್ ಸೇರುವ ಉದ್ದೇಶವಿಲ್ಲ ಅಂತ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಸೂರಿನ ಪ್ರಮುಖ ರಸ್ತೆಗೆ ಸಿದ್ದರಾಮಯ್ಯ ಹೆಸರು, ಶುರುವಾಯ್ತು ಪರ-ವಿರೋಧ ಚರ್ಚೆ: ಪ್ರತಾಪ್ ಸಿಂಹ ಬೆಂಬಲ
Latest Videos