230ನೇ ಟಿಪ್ಪು ಸುಲ್ತಾನ್ ಉರುಸ್ ಆಚರಣೆ: ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ

| Updated By: Rakesh Nayak Manchi

Updated on: Jun 28, 2022 | 12:38 PM

ಟಿಪ್ಪುವಕ್ಫ್ ಬೋರ್ಡ್ ವತಿಯಿಂದ ಇಂದು ಸಂಜೆ 230ನೇ ಟಿಪ್ಪು ಸುಲ್ತಾನ್ ಉರುಸ್ ಆರಚಣೆ ನಡೆಯಲಿದ್ದು, ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೃಹತ್ ಮೆರವಣಿಗೆ ನಡೆಯಲಿದೆ. ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಸೇರಿದಂತೆ ಅನೇಕರು ಭಾಗಿಯಾಗುವ ಸಾಧ್ಯತೆ ಇದೆ.

230ನೇ ಟಿಪ್ಪು ಸುಲ್ತಾನ್ ಉರುಸ್ ಆಚರಣೆ: ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ
230ನೇ ಟಿಪ್ಪು ಸುಲ್ತಾನ್ ಉರುಸ್
Follow us on

ಮಂಡ್ಯ: ಟಿಪ್ಪುವಕ್ಫ್ ಬೋರ್ಡ್ ವತಿಯಿಂದ ಇಂದು ಸಂಜೆ ಆರು ಗಂಟೆಗೆ ಗಂಜಾಂನ ಗುಂಬಜ್​ನಲ್ಲಿ 230ನೇ ಟಿಪ್ಪು ಸುಲ್ತಾನ್ ಉರುಸ್ (230th Tippu Sulthan Urus) ಆಚರಣೆ ಆಯೋಜಿಸಲಾಗಿದೆ. ಸಾವಿರಾರು ಜನರು ಸೇರುವ ಈ ಉರುಸ್ ಆಚರಣೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ (Sumalatha Ambarish) ಸೇರಿದಂತೆ ಕೆಲವು ರಾಜಕೀಯ ನಾಯಕರು ಭಾಗಿಯಾಗುವ ಸಾಧ್ಯತೆ ಇದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗುಂಬಜ್​ನಲ್ಲಿ ನಡೆಯುವ ಉರುಸ್ ಆಚರಣೆ ಹಿನ್ನೆಲೆ ಮಧ್ಯಾಹ್ನ 3.30ಕ್ಕೆ ಪವಿತ್ರ ಗಂಧದ ಬೃಹತ್ ಮೆರವಣಿಗೆ ನಡೆಯಲಿದೆ. ಜಾಮಿಯಾ ಮಸೀದಿಯಿಂದ ಗುಂಬಜ್​ವರೆಗೆ ನಡೆಯುವ ಈ ಮೆರವಣಿಯಲ್ಲಿ ಮಂಡ್ಯ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಜನರು ಭಾಗಿಯಾಗುವ ನಿರೀಕ್ಷೆ ಹೊಂದಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್​​: ಉರುಸ್ ಆಚರಣೆ ನೆಪದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಸಲ್ಮಾನರ ಮೆಗಾ ಪ್ಲಾನ್

ಗುಂಬಜ್ ಆವರಣದಲ್ಲಿ ಸಂಜೆ 6 ಗಂಟೆಗೆ ಆರಂಭಗೊಳ್ಳಲಿರುವ ಬಹಿರಂಗ ಸಭೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದೆ ಸುಮಲತಾ, ಶಾಸಕ ರವೀಂದ್ರ ಶ್ರೀಕಂಠಯ್ಯ, ತನ್ವೀರ್ ಸೇಠ್ ಮುಂತಾದವರು ಭಾಗಿಯಾಗುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಾಮಿಯ ಮಸೀದಿ, ಗುಂಬಜ್ ಸೇರಿದಂತೆ ಶ್ರೀರಂಗಪಟ್ಟಣ, ಗಂಜಾಂನಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, DAR, KSRP ತುಕಡಿ, ಸಿವಿಲ್ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

230ನೇ ಉರುಸ್ ಆಚರಣೆ ಹಿನ್ನೆಲೆ ಜಿಲ್ಲೆಯಲ್ಲಿ ಜೂನ್ 27, 28, 29ರಂದು ಮೂರು ದಿನ ಉರುಸ್ ಆಚರಿಸಲಾಗುತ್ತಿದ್ದು, ಹಿಂದೂಗಳು ಒಗ್ಗಟ್ಟು ಪ್ರದರ್ಶಿಸಿದಂತೆ ಮುಸ್ಲಿಮರು ಕೂಡ ಉರುಸ್ ಆಚರಣೆ ನೆಪದಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನ ಕಾಲು ಮುರಿತ; ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ ಸುರೇಶ್ ಗೌಡ