AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನ ಕಾಲು ಮುರಿತ; ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ ಸುರೇಶ್ ಗೌಡ

ಕಾರು ಚಾಲಕ ಮತ್ತು ಮಾಜಿ ಶಾಸಕ ತನ್ನ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಗಾಯಾಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ರೈತನಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ನಾಗಮಂಗಲ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನ ಕಾಲು ಮುರಿತ; ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ ಸುರೇಶ್ ಗೌಡ
ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನ ಕಾಲು ಮುರಿತ
TV9 Web
| Edited By: ಆಯೇಷಾ ಬಾನು|

Updated on: Jun 26, 2022 | 8:39 PM

Share

ಮಂಡ್ಯ: ಬಿಜೆಪಿ ಮಾಜಿ ಶಾಸಕನ ಕಾರು ಡಿಕ್ಕಿಯಾಗಿ ರೈತನ ಕಾಲು ಮುರಿದಿರುವ ಘಟಮೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತೊಳಲಿ ಗ್ರಾಮದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡಗೆ ಸೇರಿದ ಕಾರು ಮೈಸೂರಿಂದ ತುಮಕೂರು ಕಡೆ ತೆರಳುತ್ತಿತ್ತು. ಈ ವೇಳೆ ಜಮೀನಿನಿಂದ ಜಾನುವಾರುಗಳಿಗೆ ಮೇವು ಸಾಗಿಸುತ್ತಿದ್ದ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ರೈತನಿಗೆ ಕಾರು ಡಿಕ್ಕಿಯಾಗಿದೆ. ಈ ಪರಿಣಾಮ ತೊಳಲಿ ಗ್ರಾಮದ ರೈತ ಸುರೇಶ್ನ ಕಾಲು ಮೂಳೆ ಮುರಿದಿದೆ.

ಸದ್ಯ ಕಾರು ಚಾಲಕ ಮತ್ತು ಮಾಜಿ ಶಾಸಕ ತನ್ನ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಗಾಯಾಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ರೈತನಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ನಾಗಮಂಗಲ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Viral Photo: 60 ಸೆಕೆಂಡ್​​ನಲ್ಲಿ ಚಿತ್ರದಲ್ಲಿರುವ ನೀರಾನೆಯನ್ನು ಪತ್ತೆಹಚ್ಚಿ, ನೀವೆಷ್ಟು ಶಾರ್ಪಿ ಇದಿರಾ ಎಂದು ತಿಳಿಯಿರಿ…

ತೋಟನಹಳ್ಳಿ ಬಳಿ ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಸಾವು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತೋಟನಹಳ್ಳಿ ಬಳಿಯ ಕೃಷಿ ಹೊಂಡದಲ್ಲಿ ಮುಳಗಿ ಬೆಂಗಳೂರಿನ HSR ಲೇಔಟ್ ನಿವಾಸಿ ಸುಶೀಕುಮಾರ್‌(30) ಮತ್ತು ಬೆಂಗಳೂರಿನ ರಾಘವೇಂದ್ರ ನಗರ ನಿವಾಸಿ ಹರೀಶ್‌(20) ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಮೃತ ಸುಶೀಕುಮಾರ್ ಅಜ್ಜಿ ಮನೆಗೆ ಸ್ನೇಹಿತರೆಲ್ಲ ಸೇರಿ ಐವರು ಬಂದಿದ್ದರು. ತೋಟನಹಳ್ಳಿ ಬಳಿಯ ಹೊಂಡಕ್ಕೆ ಈಜಲು ಹೋಗಿದ್ದಾಗ ಮೊದಲು ಕೃಷಿ ಹೊಂಡದಲ್ಲಿ ಸುಶೀಕುಮಾರ್‌ ನೀರುಪಾಲಾಗಿದ್ದಾನೆ. ಸುಶೀಕುಮಾರ್ ರಕ್ಷಣೆಗೆ ಹೋದ ಹರೀಶ್ ಸಹ ನೀರುಪಾಲಾಗಿದ್ದಾನೆ. ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕರ ಕಾರು ಅಪಘಾತ..!

Follow Us
TV9 Web
TV9 Web

TV9 Kannada

Read More
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ