18 ವರ್ಷಗಳ ಅಜ್ಞಾತವಾಸದ ಬಳಿಕ ತಾಯಿ ಚಾಮುಂಡಿಗೆ ಮುಕ್ತಿ; ಜಾತಿ ಸಂಘರ್ಷದಿಂದ ನಿಂತಿದ್ದ ಪೂಜೆ ಪುನಸ್ಕಾರಗಳು ಆರಂಭ

| Updated By: ಆಯೇಷಾ ಬಾನು

Updated on: Jul 06, 2022 | 3:30 PM

ಕಳೆದ 18 ವರ್ಷದ ಹಿಂದೆ ಗ್ರಾಮದಲ್ಲಾದ ಇಬ್ಬರು ವ್ಯಕ್ತಿಗಳ ವೈಯಕ್ತಿಕ ದ್ವೇಷ ಜಾತಿ ವಿವಾದವಾಗಿ ಬದಲಾಯ್ತು. ದಲಿತರು ಹಾಗೂ ಸವರ್ಣೀಯರ ನಡುವಿನ ಗುದ್ದಾಟದಿಂದ ಈ ದೇವಾಲಯಕ್ಕೆ ಬೀಗ ಹಾಕಲಾಗಿತ್ತು.

18 ವರ್ಷಗಳ ಅಜ್ಞಾತವಾಸದ ಬಳಿಕ ತಾಯಿ ಚಾಮುಂಡಿಗೆ ಮುಕ್ತಿ; ಜಾತಿ ಸಂಘರ್ಷದಿಂದ ನಿಂತಿದ್ದ ಪೂಜೆ ಪುನಸ್ಕಾರಗಳು ಆರಂಭ
ಚಾಮುಂಡೇಶ್ವರಿ ದೇವಾಲಯ
Follow us on

ಮಂಡ್ಯ: 18 ವರ್ಷಗಳ ಅಜ್ಞಾತವಾಸದ ಬಳಿಕ ತಾಯಿ ಚಾಮುಂಡಿಗೆ ಮುಕ್ತಿ ಸಿಕ್ಕಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ(Chamundeshwari Temple) 2004ರಲ್ಲಿ ಗ್ರಾಮಸ್ದರು ಬಾಗಿಲು ಹಾಕಿದ್ದರು. ಅಲ್ಲಿದ್ದ ತಾಯಿಗೆ ಪೂಜೆ ಪುನಸ್ಕಾರಗಳು ನಿಂತಿದ್ದವು. ದಲಿತರು ಸವರ್ಣಿಯರ ಸಂಘರ್ಷಕ್ಕೆ ಸಿಲುಕಿ ದೇವಾಲಯಕ್ಕೆ ಬೀಗ ಹಾಕಲಾಗಿತ್ತು. ಸದ್ಯ ಇಂದು ಗ್ರಾಮಸ್ಥರ ಜೊತೆ ಶಾಂತಿ ಸಭೆ ನಡೆಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಎರೆಡೂ ಸಮುದಾಯದವರ ಜೊತೆ ಮಾತನಾಡಿ ಮನವೊಲಿಸಿದ್ದಾರೆ. ಜಿಲ್ಲಾಡಳಿತ ದೇವಾಲಯದ ಬೀಗ ತೆರೆದಿದೆ. ಸಿಹಿ ಹಂಚಿ ಶಾಂತಿ ಸಭೆ ಬಳಿಕ ದೇವಾಲಯ ಓಪನ್ ಮಾಡಲಾಗಿದೆ.

ಶಿವನ ದೇವಾಲಯ

350 ರಿಂದ 400 ವರ್ಷ ಇತಿಹಾಸವಿರುವ ಚಾಮುಂಡೇಶ್ವರಿ ದೇವಾಲಯ ಇದಾಗಿದ್ದು ಹೊಯ್ಸಳರ ವಾಸ್ತುಶಿಲ್ಪವನ್ನ ಹೊಂದಿದೆ. ಮುಜರಾಯಿ ಇಲಾಖೆಗೆ ಸೇರಿರುವ ದೇವಾಲಯವನ್ನ ಜಕ್ಕನಹಳ್ಳಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತ ಬಂದಿದ್ರು. ಕಳೆದ 18 ವರ್ಷದ ಹಿಂದೆ ಗ್ರಾಮದಲ್ಲಾದ ಇಬ್ಬರು ವ್ಯಕ್ತಿಗಳ ವೈಯಕ್ತಿಕ ದ್ವೇಷ ಜಾತಿ ವಿವಾದವಾಗಿ ಬದಲಾಯ್ತು. ದಲಿತರು ಹಾಗೂ ಸವರ್ಣೀಯರ ನಡುವಿನ ಗುದ್ದಾಟದಿಂದ ಈ ದೇವಾಲಯಕ್ಕೆ ಬೀಗ ಹಾಕಲಾಗಿತ್ತು. ಯಾವುದೇ ಹಬ್ಬ ಹರಿದಿನವನ್ನ ಆಚರಣೆ ಮಾಡುತ್ತಿರಲಿಲ್ಲ. ಈ ಹಿನ್ನಲೆ ಸಮಸ್ಯೆಯನ್ನ ಬಗೆಹರಿಸಲು ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಇಂದು ಶಾಂ‌ತಿ ಸಭೆ ನಡೆಸುವ ಮೂಲಕ ದೇವಾಲಯದ ಬೀಗ ತೆರಯಲಾಯ್ತು. 18 ವರ್ಷದ ಅಜ್ಞಾತವಾಸಕ್ಕೆ ಕೊನೆಗೂ ತೆರೆ ಬಿದ್ದಿದೆ. ತಾಯಿ ಚಾಮುಂಡಿ ಹಾಗೂ ಶಿವಲಿಂಗದ ದರ್ಶನ ಪಡೆದ ಗ್ರಾಮಸ್ಥರು ಪುನೀತರಾಗಿದ್ದಾರೆ. ಈಗ ಎಲ್ಲಾ ಸಮುದಾಯದ ಜನರಿಗೆ ದೇವಾಲಯದಲ್ಲಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಇದನ್ನೂ ಓದಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ; ನೇರ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ