ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ; ನೇರ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗುರೂಜಿ ಮೃತದೇಹ ಸುಳ್ಳಾಗೆ ಬರುತ್ತಿದ್ದಂತೆ ಅಣ್ಣನ ಮಗ ಸಂತೋಷ್ ಅಂಗಡಿಯಿಂದ ಪಾದಪೂಜೆ ನೆರವೇರುತ್ತದೆ. ಮಹಾಮಂಗಳಾರತಿ, ಪಷ್ಪಾರ್ಚನೆ ಮಾಡಿ ಅಂತಿಮ ವಿಧಾನ ಮುಗಿಸುತ್ತಾರೆ.
ಹುಬ್ಬಳ್ಳಿ (Hubli) ಖಾಸಗಿ ಹೋಟೆಲ್ನಲ್ಲಿ ನಿನ್ನೆ (ಜುಲೈ 5) ಚಂದ್ರಶೇಖರ್ ಗುರೂಜಿಯ (Chandrashekhar Guruji) ಭೀಕರ ಹತ್ಯೆ ನಡೆದಿದೆ. ಗುರೂಜಿಗೆ ಸುಮಾರು 40 ಬಾರಿ ಚಾಕುವಿನಿಂದ ಇರಿದು ಹಂತಕರು ಘೋರವಾಗಿ ಕೊಲೆ ಮಾಡಿದ್ದಾರೆ. ಇಂದು ಹುಬ್ಬಳ್ಳಿಯ ಸುಳ್ಳಾ ರಸ್ತೆಯ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯುತ್ತಿದೆ. ಹನ್ನೊಂದು ಜನ ಸ್ವಾಮೀಜಿಗಳಿಂದ ಪೂಜೆ ನಡೆಯಲಿದೆ. ಗುರೂಜಿ ಮೃತದೇಹ ಸುಳ್ಳಾಗೆ ಬರುತ್ತಿದ್ದಂತೆ ಅಣ್ಣನ ಮಗ ಸಂತೋಷ್ ಅಂಗಡಿಯಿಂದ ಪಾದಪೂಜೆ ನೆರವೇರುತ್ತದೆ. ಮಹಾಮಂಗಳಾರತಿ, ಪಷ್ಪಾರ್ಚನೆ ಮಾಡಿ ಅಂತಿಮ ವಿಧಾನ ಮುಗಿಸುತ್ತಾರೆ. ಈ ಎಲ್ಲಾ ನೇರ ದೃಶ್ಯಾವಳಿಗಾಗಿ ವಿಡಿಯೋ ಮೇಲೆ ಕ್ಲಿಕ್ ಮಾಡಿ.
Latest Videos