
ಕಾನೂನು ಸುವ್ಯವಸ್ಥೆ ಹದಗೆಡದಂತೆ 24 ಗಂಟೆಯೂ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕರ್ತವ್ಯ ನಿರ್ವಹಿಸೊ ಇಲಾಖೆ ಅಂದ್ರೆ ಅದು ಪೊಲೀಸ್ ಇಲಾಖೆ.. ಜನ ಸಾಮಾನ್ಯರಿಗೆ ನ್ಯಾಯ ಕೊಡಿಸೊ ಸಿಬ್ಬಂದಿಗೆ ಈಗ ವಂಚನೆಯಾಗಿದೆ. ನಿವೇಶನ (Site) ನೀಡುವುದಾಗಿ ಹೇಳಿ ಪೊಲೀಸ್ ಅಧಿಕಾರಿಗಳಿಗೇ (Mandya Police) ವಂಚಿಸಿರೊ (Cheat) ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.
ಖಾಲಿ ನಿವೇಶನದಲ್ಲಿ ಗುಂಪು ಗುಂಪಾಗಿ ನಿಂತ ಜನರ ದಂಡು ಆಕ್ರೋಶಗೊಂಡು ಹಿಡಿ ಹಿಡಿ ಶಾಪ ಹಾಕಿದ್ದಾರೆ. ವ್ಯಕ್ತಿಯೊರ್ವನಿಗೆ ಮುತ್ತಿಕೊಂಡು ತರಾಟೆಗೆ ತೆಗೆದು ಕೊಂಡಿದ್ದಾರೆ. ಹೀಗೆ ಆಕ್ರೋಶದಿಂದ ನ್ಯಾಯಕ್ಕಾಗಿ ಮೊರೆಯಿಟ್ಟ ಅವರು ಬೇರೆ ಯಾರೂ ಅಲ್ಲಾ.. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿರೊ ನಿವೃತ್ತ ಪೊಲೀಸ್ ಅಧಿಕಾರಿಗಳು ಅವರು. ಅದೇ ರೀತಿ ನಿವೃತ್ತ ಅಧಿಕಾರಿಗಳ ಕೈಗೆ ಸಿಕ್ಕಿ ಪೇಚಾಡಿದ ಆ ವ್ಯಕ್ತಿಯ ಹೆಸರು ಚಂದ್ರಶೇಖರ್ ಅಲಿಯಾಸ್ ಅಮರಾವತಿ ಚಂದ್ರಶೇಖರ್. ಈಗ ಅಮರಾವತಿ ಚಂದ್ರಶೇಖರ್ (Amaravathi Chandrashekar) ವಿರುದ್ದ ಗಂಭೀರ ಆರೋಪವೊಂದು (Allegation) ಕೇಳಿ ಬಂದಿದೆ. ನಿವೇಶನ ನೀಡದೆ ವಂಚಿಸಿದ್ದಾರೆಂದು ನಿವೃತ್ತ ಅಧಿಕಾರಿಗಳು ಆರೋಪಿಸುತ್ತಿದ್ದಾರೆ.
ಮಂಡ್ಯದಲ್ಲಿ ಅಂಬರೀಷ್ ಆಪ್ತನೆಂದೇ ಖ್ಯಾತನಾಗಿರುವ ಅಮರಾವತಿ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದ ಮುಖಂಡನೂ ಹೌದು.. ಅಮರಾವತಿ ಡೆವಲಪರ್ಸ್ ಎಂಬ ರಿಯಲ್ ಎಸ್ಟೇಟ್ ಉದ್ಯಮವನ್ನ ನಡೆಸುತ್ತಿದ್ದಾರೆ.. 2009 ರಲ್ಲಿ ನಿರ್ಮಾಣವಾದ ಮಂಡ್ಯ ಪೊಲೀಸ್ ಪತ್ತಿನ ಗೃಹ ನಿರ್ಮಾಣ ಸಹಕಾರ ಸಂಘದವರು ಇದೇ ಅಮರಾವತಿ ಚಂದ್ರಶೇಖರ್ ಬಳಿ ವ್ಯವಹಾಯ ನಡೆಸಿದ್ದರು.. ರೂಪಾಯಿ 4.5 ಲಕ್ಷಕ್ಕೆ 30 x 40 ನಿವೇಶನ ನೀಡುತ್ತೇನೆಂದು 507 ಜನರಿಂದ ಅಮರಾವತಿ ಚಂದ್ರಶೇಖರ್ ಹಣ ಪಡೆದಿದ್ದನಂತೆ.
22.05 ಕೋಟಿ ರೂ ಪ್ರಾಜೆಕ್ಟ್ ಇದಾಗಿದ್ದು, ಈಗಾಗ್ಲೆ 18.88 ಕೋಟಿ ಹಣ ಸಂದಾಯವಾಗಿದೆ. 27 ಎಕರೆ ಏಲಿನೇಶನ್ (Alienation) ಸಹ ಆಗಿದ್ದು, 17 ಎಕರೆ ಜಮೀನನ್ನ ಪೊಲೀಸರ ನಿವೇಶನಕ್ಕೆಂದು ಮೀಸಲಿಡಲಾಗಿದೆ. ಆದ್ರೆ 12 ವರ್ಷ ಕಳೆದ್ರೂ ಹಣ ಕಟ್ಟಿದವರಿಗೆ ಇನ್ನು ನಿವೇಶ ಸಿಕ್ಕಿಲ್ಲ.. ಅಮರಾವತಿ ಚಂದ್ರಶೇಖರನ್ನ ಕೇಳಿದ್ರೆ ಸರಿಯಾದ ಸ್ಪಂದನೆ ಸಿಕ್ತಾಯಿಲ್ಲ.. ಇವತ್ತು ನಾಳೆ ಎಂದೇ 12 ವರ್ಷಗಳಿಂದ ಮುಂದೆ ತಳ್ಳಿಕೊಂಡು ಬಂದಿದ್ದಾರೆ.. ಸಾಲ್ದು ಅಂತ ಪೊಲೀಸರಿಗೆ ನಿಯೋಜನೆಗೊಂಡಿರುವ ಪೊಲೀಸರ ಜಮೀನಿನ ಮೇಲೆಯೂ 5 ಕೋಟಿ ಸಾಲ ಸಹ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಅದೇನೆ ಹೇಳಿ ಹಣ ಪಡೆದು 12 ವರ್ಷಗಳಿಂದ ಯಾಮಾರಿಸಿಕೊಂಡು ಬಂದಿದ್ದು ನಿಜಕ್ಕು ದುರಂತವೇ ಸರಿ… ನ್ಯಾಯ ಕೊಡಿಸೊ ಪೊಲೀಸರಿಗೆ ಈ ರೀತಿ ಯಾಮಾರಿಸಿದ್ರೆ ಜನಸಾಮಾನ್ಯರ ಗತಿ ಏನು? ಸದ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ತರಾಟೆಗೆ ಅಮರಾವತಿ ಚಂದ್ರಶೇಖರ್ ತಬ್ಬಿಬ್ಬಾಗಿದ್ದು, ಮಾರ್ಚ್ ಅಂತ್ಯದೊಳಗೆ ನಿವೇಶನ ನೀಡುವುದಾಗಿ ಒಪ್ಪಿಕೊಂಡಿದ್ದಾರೆ.
ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ