ಮಂಡ್ಯ ರಂಗಸ್ಥಳದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ಕಲಾವಿದ ನಂಜಯ್ಯ
ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕ ಪ್ರದರ್ಶನದಲ್ಲಿ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ ವೇದಿಕೆಯ ಮೇಲೆಯೇ ಉಸಿರುಚೆಲ್ಲಿದ್ದಾರೆ.

ಮಂಡ್ಯ: ರಂಗಸ್ಥಳದಲ್ಲೇ ಕುಸಿದುಬಿದ್ದು ಕಲಾವಿದ ನಂಜಯ್ಯ(46)ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಸವನಗುಡಿಯಲ್ಲಿ ನಡೆದ ನಾಟಕದ ವೇಳೆ ಘಟನೆ ನಡೆದಿದೆ. ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕ ಪ್ರದರ್ಶನದಲ್ಲಿ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ ವೇದಿಕೆಯ ಮೇಲೆಯೇ ಉಸಿರುಚೆಲ್ಲಿದ್ದಾರೆ. ಘಟನೆ ಬಳಿಕ ಸಹಕಲಾವಿದರು ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಿದರು.
ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು ಸೇರಿಕೊಂಡು ಪೌರಾಣಿಕ ನಾಟಕ ಆಯೋಜಿಸಿದ್ದರು. ಡ್ರಾಮಾಸೀನ್ಸ್ ಸೆಟ್ನಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದಲ್ಲಿ ಸೈಂಧವ ಮತ್ತು ಸಾರ್ಥಕಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿ ನಟನೆ ಮಾಡುವ ವೇಳೆ ವೇದಿಕೆಯಲ್ಲೇ ಹೃದಯಾಘಾತ ಸಂಭವಿಸಿ ಕಲಾವಿದ ನಂಜಯ್ಯ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ: ಯುವಕನಿಂದ ಅಪ್ರಾಪ್ತ ಬಾಲಕನ ಅಪಹರಣ: ಕಾರಣ ಕೇಳಿ ದಂಗಾದ ಪೊಲೀಸರು
ಕಲಾವಿದ ನಂಜಯ್ಯ ಕುಸಿದು ಬೀಳುತ್ತಿದ್ದಂತೆ ಕೂಡಲೇ ಅಲ್ಲಿದ್ದ ಜನರು ಮಳವಳ್ಳಿ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಕಲಾವಿದ ವೇದಿಕೆಯಲ್ಲೇ ಮೃತಪಟ್ಟಿರುವುದಾಗಿ ಖಚಿತ ಪಡಿಸಿದ್ದಾರೆ. ಇದೀಗ ಕಲಾವಿದ ನಂಜಯ್ಯ ಅವರಿಗೆ ವೇದಿಕೆಯಲ್ಲಿ ಹೃದಯಾಘಾತವಾಗಿ ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗುತ್ತಿದೆ. ಪತಿಯ ಸಾವಿನ ಕೊನೆ ಕ್ಷಣವನ್ನು ಕಂಡ ಪತ್ನಿ, ಮಗಳು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ




