ಮಂಡ್ಯ, ಸೆ.14: ಜಿಲ್ಲೆಯ ಕೆ.ಆರ್. ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಸಕ್ಕರೆ ನಗರಿ ಮಂಡ್ಯದಲ್ಲಿ ಹೈಟೆಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಚಾಕೇನಹಳ್ಳಿಯ ರವಿಕುಮಾರ್ (42), ಮಂಡ್ಯದ ಸೂನಗಹಳ್ಳಿಯ ಮಂಜುನಾಥ್(36), ವಿಷ್ಣು (31), ಹೇಮಂತ್ ಕುಮಾರ್ (30) ಬಂಧಿತ ಆರೋಪಿಗಳು. ಇವರಿಂದ 35 ಲಕ್ಷ ರೂ ಮೌಲ್ಯದ 150 ಗ್ರಾಂ ತೂಕದ ಚಿನ್ನ, 20 ಕೆಜಿಯಷ್ಟು ಬೆಳ್ಳಿ ಸಾಮಾನು,1 ಟಾಟಾ ಎಸಿ ವಾಹನ, 1 ಎರಿಟಿಕಾ ಕಾರು, 1 ಬೈಕ್, ಲ್ಯಾಪ್ ಟ್ಯಾಪ್, 8 ಹಸುಗಳು, 1 ಸಿಲೆಂಡಿರ್, ವಾಟರ್ ಟ್ಯಾಂಕ್, ಗ್ಯಾಸ್ ಕಟರ್ ಹಾಗೂ 40 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.
ಈ ಬಂಧಿತ ಆರೋಪಿಗಳು ಆಗಸ್ಟ್ 17ರಂದು ಕೆಆರ್ ಪೇಟೆಯ ಜ್ಯುವೆಲರಿ ಶಾಪ್ನಲ್ಲಿ ಕಳ್ಳತನ ಮಾಡಿದ್ದರು. ಶಾಪ್ನ ಹಿಂಬಾಗಿಲ ಗೋಡೆ ಕೊರೆದು ಬೆಳ್ಳಿಯ ವಸ್ತುಗಳನ್ನು ದೋಚಿದ್ದರು. ಅಲ್ಲದೆ, ಮಂಡ್ಯ ಹಾಗೂ ರಾಮನಗರ ಜಿಲ್ಲೆಯಲ್ಲಿ ಹಸುಗಳನ್ನು ಕಳ್ಳತನ ಮಾಡಿ, ಆರೋಪಿ ರವಿಕುಮಾರ್ ತನ್ನದೇ ಫಾರ್ಂ ನಲ್ಲಿ ಹಸುಗಳನ್ನು ಸಾಕುತ್ತಿದ್ದ. ವಿಶೇಷವೆಂದರೇ ಕದ್ದ ಹಸುಗಳ ಮೇವಿಗಾಗಿ, ಪಶುವಿನ ಆಹಾರವನ್ನು ಸಹಾ ಕಳ್ಳತನ ಮಾಡುತ್ತಿದ್ದರು. ಹೀಗೆ ಹಲವು ಕಡೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಹೌದು, ಪ್ರಕರಣದ ಪ್ರಮುಖ ಆರೋಪಿ ಚಾಕೇನಹಳ್ಳಿ ರವಿಕುಮಾರ್, ಗ್ರಾಮಪಂಚಾಯತಿ ಚುನಾವಣೆಯಲ್ಲಿ ಸ್ವರ್ಧೆ ಮಾಡಿ ಸೋತಿದ್ದ ಇತ ಕಳೆದ ಮೂರು ವರ್ಷಗಳಿಂದ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಇದುವರೆಗೂ 18 ಪ್ರಕರಣಗಳಲ್ಲಿ ರವಿಕುಮಾರ್ ಭಾಗಿಯಾಗಿದ್ದ. ಇನ್ನು ರವಿಕುಮಾರ್ಗೆ ಪ್ರಕರಣದ ಎ2 ಆರೋಪಿಯಾದ ಸೂನಗನಹಳ್ಳಿ ಮಂಜುನಾಥ್ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೂಡ. ಇವರಿಬ್ಬರಿಗೆ ವಿಷ್ಣು, ಹೇಮಂತ್ ಕುಮಾರ್ ಸಹಾಯ ಮಾಡುತ್ತಿದ್ದರು.
ಇದುವರೆಗೂ ಕೆ.ಆರ್.ಪೇಟೆ ಠಾಣಾ ವ್ಯಾಪ್ತಿಯಲ್ಲಿ 4, ಮಂಡ್ಯ ಠಾಣಾ ವ್ಯಾಪ್ತಿಯಲ್ಲಿ 2, ಚನ್ನರಾಯಪಟ್ಟಣ, ಮೈಸೂರಿನ ಉದಯಗಿರಿ, ಬನ್ನೂರು, ಚನ್ನಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲ ಒಂದೊಂದು ಪ್ರಕರಣ ಸೇರಿ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇನ್ನು ಮೈಸೂರಿನಲ್ಲಿಯೇ ಅಶೋಕ್ ಲೈಲೆಂಡ್ ಲಾರಿಯನ್ನು ಕೂಡ ಅಬೇಸ್ ಮಾಡಿದ್ರು. ಆರೋಪಿಗಳ ಬಂಧನದಿಂದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟಾರೆ ಹಲವು ಜಿಲ್ಲೆಗಳಲ್ಲಿ ಜನರ ನಿದ್ರೆಗೆಡಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Thu, 14 September 23