ಅಪ್ಪ-ಅಮ್ಮನಿಂದಲೇ ಇನ್ನಿಲ್ಲದ ಕಿರುಕುಳ; ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡ ಮಗ, ಡೆತ್​ನೋಟ್​​ನಲ್ಲಿ ಬಯಲಾಯ್ತು ಸತ್ಯ

| Updated By: Lakshmi Hegde

Updated on: Sep 09, 2021 | 11:41 AM

ರಾಜು ಮತ್ತು ದೇವಮಣಿ ದಂಪತಿ ಒಂದು ಚೆಂದನೆಯ ಮನೆಯಲ್ಲಿ ಇದ್ದರು. ಆದರೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮಗ-ಸೊಸೆಯನ್ನು ಕೊಟ್ಟಿಗೆಯಲ್ಲಿ ಇಟ್ಟಿದ್ದರು. ಹಾಗೇ, ಆಸ್ತಿಯನ್ನೂ ಕೊಟ್ಟಿರಲಿಲ್ಲ.

ಅಪ್ಪ-ಅಮ್ಮನಿಂದಲೇ ಇನ್ನಿಲ್ಲದ ಕಿರುಕುಳ; ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡ ಮಗ, ಡೆತ್​ನೋಟ್​​ನಲ್ಲಿ ಬಯಲಾಯ್ತು ಸತ್ಯ
ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಗಿರೀಶ್​
Follow us on

ಮಂಡ್ಯ: ಹೆತ್ತವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಡೆತ್​ ನೋಟ್​  (Death Note) ಬರೆದಿಟ್ಟ ಮಗ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿಯಲ್ಲಿ ನಡೆದಿದೆ. 32 ವರ್ಷದ ಗಿರೀಶ್​ ಆತ್ಮಹತ್ಯೆ ಮಾಡಿಕೊಂಡವರು.  ‘ನನ್ನ ಸಾವಿಗೆ ಅಪ್ಪ ರಾಜು..ಅಮ್ಮ ದೇವಮಣಿಯೇ ಕಾರಣ’ ಎಂದು ಸ್ಪಷ್ಟವಾಗಿ ಡೆತ್​ ನೋಟ್​ ಬರೆದಿದ್ದಾರೆ. ಹಾಗೇ, ತಮಗೆ ತಂದೆ-ತಾಯಿ ಹೇಗೆ ಕಿರುಕುಳ ನೀಡಿದ್ದರು ಎಂಬುದನ್ನೂ ಡೆತ್​ ನೋಟ್​ನಲ್ಲಿ ವಿವರಿಸಿದ್ದಾರೆ. 

ಗಿರೀಶ್​ ತಂದೆ  ಸರ್ಕಾರಿ ಶಾಲೆ ನಿವೃತ್ತ ಶಿಕ್ಷಕರಾಗಿದ್ದಾರೆ. ಹಾಗೇ ತಾಯಿ ದೇವಮಣಿ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿ. ಗಿರೀಶ್​ಗೆ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ರಾಜು ಮತ್ತು ದೇವಮಣಿ ಇಬ್ಬರೂ ಮಗನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಪದೇಪದೆ ಮಗ-ಸೊಸೆಯನ್ನು ಹಂಗಿಸುತ್ತಿದ್ದರು ಎಂದು ಹೇಳಲಾಗಿದೆ.  ಇದೆಲ್ಲ ಗಿರೀಶ್ ಬರೆದಿಟ್ಟಿರುವ ಡೆತ್​ನೋಟ್​​ನಲ್ಲೇ ಉಲ್ಲೇಖವಾಗಿದೆ.

ರಾಜು ಮತ್ತು ದೇವಮಣಿ ದಂಪತಿ ಒಂದು ಚೆಂದನೆಯ ಮನೆಯಲ್ಲಿ ಇದ್ದರು. ಆದರೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮಗ-ಸೊಸೆಯನ್ನು ಕೊಟ್ಟಿಗೆಯಲ್ಲಿ ಇಟ್ಟಿದ್ದರು. ಹಾಗೇ, ಆಸ್ತಿಯನ್ನೂ ಕೊಟ್ಟಿರಲಿಲ್ಲ. ಗಿರೀಶ್​ ಬಳಿ ಜೀವನೋಪಾಯಕ್ಕೆ ಇದ್ದಿದ್ದ ಒಂದು ಟ್ರ್ಯಾಕ್ಟರ್​ನ್ನೂ ಕೂಡ ಕಸಿದುಕೊಂಡಿದ್ದರು. ಜಮೀನು, ಮನೆ, ಆಸ್ತಿ ಏನೂ ಇಲ್ಲದೆ ಗಿರೀಶ್​ ತೀರ ಕಷ್ಟಪಡುತ್ತಿದ್ದರು. ಇದೆಲ್ಲದರಿಂದ ಮನನೊಂದ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು-ಪತ್ನಿಯೊಂದಿಗೆ ವಾಸವಾಗಿದ್ದ ಕೊಟ್ಟಿಗೆ ಗೋಡೆ ಮೇಲೆಲ್ಲ, ‘ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ, ಹೆತ್ತವರ ಕಿರುಕುಳವೇ ಕಾರಣ’ ಎಂದು ಬರೆದಿಟ್ಟಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಗಿರೀಶ್​ ಹೆತ್ತವರಾದ ರಾಜು ಮತ್ತು ದೇವಮಣಿ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: Farmers Protest ಕರ್ನಾಲ್ ಮಾಜಿ ಎಸ್‌ಡಿಎಮ್ ವಿರುದ್ಧ ಕ್ರಮದ ಕುರಿತು ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಸಿದ ರೈತರು

CM Bommai Interview LIVE: ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ; ಕಾಮನ್​ಮ್ಯಾನ್ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

Published On - 11:40 am, Thu, 9 September 21