CM Bommai Interview: ಟಿವಿ9 ವೇದಿಕೆಯಲ್ಲಿ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ

TV9 Web
| Updated By: shivaprasad.hs

Updated on:Sep 09, 2021 | 1:55 PM

ಸಿಎಂ ಬಸವರಾಜ ಬೊಮ್ಮಾಯಿ ಸಂದರ್ಶನ​: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟಿವಿ9ನ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ

CM Bommai Interview: ಟಿವಿ9 ವೇದಿಕೆಯಲ್ಲಿ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಮಾಧ್ಯಮ ಲೋಕದ ಇತಿಹಾಸದಲ್ಲೇ ವಿಶಿಷ್ಟ ಪ್ರಯತ್ನವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಿವಿ9 ಸ್ಟುಡಿಯೋದಲ್ಲಿ ಕಾಮನ್​ಮ್ಯಾನ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ನೇರವಾಗಿ ಜನರ ಸಮಸ್ಯೆ ನೇರವಾಗಿ ಆಲಿಸಿ, ಸ್ಥಳದಲ್ಲೇ ಪರಿಹಾರ ನೀಡುವ ವ್ಯವಸ್ಥೆಗೆ ಟಿವಿ9 ವೇದಿಕೆ ಕಲ್ಪಿಸಿಕೊಟ್ಟಿತ್ತು. ನಿರೂಪಕ ರಂಗನಾಥ್ ಭಾರಧ್ವಾಜ್ ಮುಖ್ಯಮಂತ್ರಿಯವರ ವಿಶೇಷ ಸಂದರ್ಶನವನ್ನು ನಡೆಸಿಕೊಟ್ಟಿದ್ದಾರೆ. ಈ ವೇದಿಕೆಯ ಮೂಲಕ ರಾಜ್ಯದ ವಿವಿಧ ಭಾಗಗಳ ಸಂತ್ರಸ್ತರ ಸಮಸ್ಯೆಗೆ ಮುಖ್ಯಂತ್ರಿ ಕಿವಿಯಾಗಲು ಟಿವಿ9 ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ಕಾರ್ಯಕ್ರಮ ಮಾಧ್ಯಮ ಲೋಕದ ಇತಿಹಾಸದಲ್ಲೇ ವಿಶಿಷ್ಟ ಪ್ರಯತ್ನವಾಗಿದ್ದು, ಸಿಎಂ ಹಾಗೂ ಕಾಮನ್ ಮ್ಯಾನ್​ಗೆ ವೇದಿಕೆ ಕಲ್ಪಿಸಿಕೊಟ್ಟು, ಸಿಎಂ ಅವರನ್ನು ಜನಸಾಮಾನ್ಯರ ಬಳಿಗೆ ಕರೆದೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಾಜಕೀಯ, ಸಾಮಾಜಿಕ ವಿಷಯಗಳನ್ನು ಸೇರಿದಂತೆ ಆಡಳಿತದ ಬಹುತೇಕ ವಿಚಾರಗಳ ಕುರಿತು ಮಾತನಾಡಿದರು. ಎಲ್ಲಾ ಪ್ರಶ್ನೆಗಳಿಗೂ ಸಾವಧಾನದಿಂದ ಉತ್ತರಿಸಿದ ಅವರು, ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಸ್ಥಳದಲ್ಲೇ ಹಲವು ಸಮಸ್ಯೆಗೆ ಪರಿಹಾರ ಸೂಚಿಸಿ, ಟಿವಿ9ನ ಈ ಜನಪರ ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿದರು. ಕಾರ್ಯಕ್ರಮದ ಸಂಪೂರ್ಣ ವರದಿ ಇಲ್ಲಿದೆ.

(CM Basavaraj Bommai Exclusive Interview open discussion with Karnataka Chief Minister Latest News)

LIVE NEWS & UPDATES

The liveblog has ended.
  • 09 Sep 2021 01:34 PM (IST)

    ‘ಕೊರೊನಾದಿಂದ ಅನಾಥವಾದ ಕುಟುಂಬಗಳಿಗೆ ವಿಶೇಷ ಯೋಜನೆ’

    ಟಿವಿ9ನಲ್ಲಿ ಪ್ರಸಾರವಾದ ವರದಿ ನೋಡಿ ಸಿಎಂ ಬೊಮ್ಮಾಯಿ ಘೋಷಣೆ

    ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಹೊಸ ಯೋಜನೆಯನ್ನು ರೂಪಿಸಲಾಗುವುದು ಎಂದು ಟಿವಿ9ನಲ್ಲಿ ಪ್ರಸಾರವಾದ ವರದಿ ನೋಡಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಸಿಎಂ ಸ್ಪೀಕಿಂಗ್ ಕಾರ್ಯಕ್ರಮದಲ್ಲಿ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳು, ಪೋಷಕರನ್ನ ಕಳೆದುಕೊಂಡು ಅನಾಥವಾಗಿರುವ ಮಕ್ಕಳ ವಿಶೇಷ ವರದಿಯನ್ನು ನೋಡಿ ಅವರು ಈ ಘೋಷಣೆ ಮಾಡಿದ್ದಾರೆ. ಅನಾಥವಾಗಿರುವ ಕುಟುಂಬಗಳಿಗೆ  ಸಾಮಾಜಿಕವಾಗಿ ಭದ್ರತೆ ನೀಡುವ ಕೆಲಸವಾಗಬೇಕು ಎಂದು ಸಿಎಂ ಇದೇ ವೇಳೆ ತಿಳಿಸಿದ್ದಾರೆ.

    ಟಿವಿ9 ಮೂಲಕ ಸಿಎಂಗೆ ಸಂಕಷ್ಟ ಹೇಳಿಕೊಂಡ ಹರ್ಷಿತಾ, ‘‘ಕೊರೊನಾ ನೀಡಿರುವ ಹೊಡೆತದಿಂದಾಗಿ, ಒಂದೊತ್ತಿನ ಊಟಕ್ಕೂ ಕೈಚಾಚುವ ಪರಿಸ್ಥಿತಿ ಇದೆ’’ ಎಂದಿದ್ದರು. ಕೊರೊನಾದಿಂದ ಅವರು ತಮ್ಮ ತಂದೆಯನ್ನ ಕಳೆದುಕೊಂಡು, ಮನೆ ಬಾಡಿಗೆ ಕಟ್ಟುವುದಕ್ಕೂ ಆಗದ ಪರಿಸ್ಥಿತಿಯಲ್ಲಿ ಇದ್ದಾರೆ. ಅವರ ಪರಿಸ್ಥಿತಿಯನ್ನು ಕೇಳಿದ ಸಿಎಂ ಪರಿಹಾರದ ಭರವಸೆ ನಿಡಿದ್ದಾರೆ. ಇದೇ ವೇಳೆ ಅವರು ಕೊರೊನಾದಿಂ ನಲುಗಿರುವವರಿಗಾಗಿಯೇ ವಿಶೇಷ ಯೋಜನೆ ಘೋಷಿಸಲಾಗುವುದು ಎಂದು ತಿಳಿಸಿದರು.

  • 09 Sep 2021 01:25 PM (IST)

    ಸೈನಿಕರ ಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತೇವೆ: ನಿವೃತ್ತ ಯೋಧರಿಗೆ ಭರವಸೆ ನೀಡಿದ ಸಿಎಂ

    ನಿವೃತ್ತ ಯೋಧ ಪ್ರಹ್ಲಾದ್ ರೆಡ್ಡಿ ಮನವಿಗೆ ಸಿಎಂ ಬೊಮ್ಮಾಯಿ ಸ್ಪಂದನೆ

    ನಿವೃತ್ತ ಯೋಧರ ಸಂಕಷ್ಟಕ್ಕೆ ಸಿಎಂ ಬೊಮ್ಮಾಯಿ ಸ್ಪಂದಿಸಿದ್ದಾರೆ. ನಿವೃತ್ತ ಯೋಧರಿಗೆ ಭೂಮಿಯನ್ನು ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಅಡೆತಡೆಗಳು ಇವೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ. ‘‘ಈ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ನಿವೃತ್ತ ಯೋಧರ ಯಾವ ಕೆಲಸಕ್ಕೆ ತೊಂದರೆಯಾಗಲ್ಲ. ಸೈನಿಕರ ಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತೇವೆ’’ ಎಂದು ಸಿಎಂ ಭರವಸೆ ನೀಡಿದ್ದಾರೆ.

    ‘‘ಸಾಮಾನ್ಯ ಕುಟುಂಬದಿಂದ ಯೋಧರು ಬಂದಿರುತ್ತಾರೆ. ಅವರು ಆರ್ಥಿಕರಾಗಿ ಸದೃಢರಾಗಬೇಕು. ಹುತಾತ್ಮ ಯೋಧರ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡುತ್ತೇವೆ’’ ಎಂದು ಬೊಮ್ಮಾಯಿ ನುಡಿದಿದ್ದಾರೆ.

    ನಿವೃತ್ತ ಯೋಧ ಪ್ರಹ್ಲಾದ್ ರೆಡ್ಡಿಯವರ ಮನವಿಗೆ ಸ್ಪಂದಿಸಿದ ಸಿಎಂ, ‘‘ನಿವೃತ್ತ ಯೋಧರಿಗೆ ಭೂಮಿ ಕೊಡಿಸುವ ಕೆಲಸ ಆಗಬೇಕು. ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳಬೇಕು’’ ಎಂದು ದಾವಣಗೆರೆ ಡಿಸಿ ಮಹಾಂತೇಶ್ ಬೀಳಗಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.

  • 09 Sep 2021 01:13 PM (IST)

    ‘ಜನರ ಅಭಿಪ್ರಾಯವೇ ನನಗೆ ಪ್ರೇರಣೆ’

    ಜನರ ಅಭಿಪ್ರಾಯ ತನಗೆ ಬಹಳ ಮುಖ್ಯ ಎಂದ ಸಿಎಂ

    ‘‘ಕನ್ನಡ ನಾಡಿನ ಜನತೆಯ ಅಭಿಪ್ರಾಯ ನನಗೆ ಬಹಳ ಮುಖ್ಯ. ಅದೇ ನನಗೆ ಮಾರ್ಗದರ್ಶನ, ಪ್ರೇರಣೆ, ಸರ್ವಸ್ವ, ಶಕ್ತಿ’’ ಎಂದು ಬೊಮ್ಮಾಯಿ ನುಡಿದಿದ್ದಾರೆ.

  • 09 Sep 2021 01:09 PM (IST)

    ‘ಮಾಜಿ ಮುಖ್ಯಮಂತ್ರಿ ಬಿಎಸ್​ವೈ ಮಾಸ್ ಲೀಡರ್‘

    ‘‘ಒಂದು ಸ್ಥಾನದಿಂದ ಯಡಿಯೂರಪ್ಪಗೆ ಬಲ ಬಂದಿಲ್ಲ. ಬಿ.ಎಸ್.ಯಡಿಯೂರಪ್ಪರಿಂದ ಆ ಸ್ಥಾನಕ್ಕೆ ಬಲ ಬಂದಿದೆ’’: ಸಿಎಂ

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಹಾಗೂ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಬೊಮ್ಮಾಯಿ, ‘‘ಬಿಎಸ್​ವೈ ಮಾಸ್ ಲೀಡರ್. ಒಂದು ಸ್ಥಾನದಿಂದ ಯಡಿಯೂರಪ್ಪಗೆ ಬಲ ಬಂದಿಲ್ಲ. ಬಿ.ಎಸ್.ಯಡಿಯೂರಪ್ಪರಿಂದ ಆ ಸ್ಥಾನಕ್ಕೆ ಬಲ ಬಂದಿದೆ. ನಾನು ಬಹುಮತ ಗಳಿಸಿ ಆಗಿರುವ ಸಿಎಂ ಅಲ್ಲ. ಬಹುಮತ ಗಳಿಸಿ ಸಿಎಂ ಆಗಿದ್ದು ಯಡಿಯೂರಪ್ಪ. ಮುಂದೆ ನಾನು ಬಹುಮತ ಗಳಿಸುವಂತಹ ಕೆಲಸ ಮಾಡುತ್ತೇನೆ’’ ಎಂದು ಬೊಮ್ಮಾಯಿ ಹೇಳಿದ್ದಾರೆ.

  • 09 Sep 2021 01:08 PM (IST)

    ಕಾಂಗ್ರೆಸ್‌ನಲ್ಲಿ ನಾಯಕತ್ವದ ಜಿಜ್ಞಾಸೆ ಇದೆ; ಆದರೆ ನಮ್ಮಲ್ಲಿ ಹಾಗಿಲ್ಲ: ಸಿಎಂ

    ನಾನು ಮೊದಲು ಕಾರ್ಯಕರ್ತ, ನಂತರ ಮುಖ್ಯಮಂತ್ರಿ ಎಂದ ಬೊಮ್ಮಾಯಿ

    ರಾಜ್ಯದಲ್ಲಿ ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದ ಅಮಿತ್ ಷಾ ಹೇಳಿಕೆಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿತ್ತು. ಈ ಕುರಿತಂತೆ ಬೊಮ್ಮಾಯಿ ಮನಬಿಚ್ಚಿ ಮಾತನಾಡಿದ್ದಾರೆ. ‘‘ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಸಿಎಂ ಮಾಡಿದ್ದಾರೆ. ಅಮಿತ್ ಶಾ ಮಾತುಗಳಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ನಾನು ಮೊದಲು ಕಾರ್ಯಕರ್ತ, ನಂತರ ಮುಖ್ಯಮಂತ್ರಿ. ಕಾರ್ಯಕರ್ತನಾಗಿ ಅವರ ವಿಶ್ವಾಸಗೊಳಿಸಿದ ನಂತರ ನಾನು ಸಿಎಂ’’ ಎಂದಿದ್ದಾರೆ ಬೊಮ್ಮಾಯಿ.

    ‘‘ಕಾಂಗ್ರೆಸ್‌ನಲ್ಲಿ ನಾಯಕತ್ವದ ಜಿಜ್ಞಾಸೆ ಇದೆ. ಆದರೆ ಭಾರತೀಯ ಜನತಾ ಪಾರ್ಟಿಯಲ್ಲಿ ನಾಯಕತ್ವದ ಸಮಸ್ಯೆ ಇಲ್ಲ. ಪಕ್ಷದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ. ಹಿರಿಯರ ಮಾರ್ಗದರ್ಶನ, ಸಲಹೆಗಳನ್ನು ಸ್ವೀಕರಿಸುತ್ತೇನೆ’’ ಎಂದು ಸಿಎಂ ಹೇಳಿದ್ದಾರೆ.

  • 09 Sep 2021 01:00 PM (IST)

    ಬೀದರ್​ನ ಗಡಿ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ; ಸಿಎಂ ಎದುರಲ್ಲೇ ಪರಿಹಾರದ ಭರವಸೆ

    ಕೂಡಲೇ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತೇನೆ ಎಂದ ಸಾರಿಗೆ ಸಚಿವ ಶ್ರೀರಾಮುಲು

    ಬಸ್ ಸೌಲಭ್ಯವಿಲ್ಲದೆ ಬೀದರ್ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ಟಿವಿ9  ತಂದಿದೆ. ಈ ಕುರಿತು ಫೋನ್ ಕರೆಯ ಮೂಲಕ ಮಾತನಾಡಿದ ಶ್ರೀರಾಮುಲು, ‘‘ಸಮಸ್ಯೆಯನ್ನು ಕೂಡಲೇ ಪರಿಹರಿಸುವ ಕೆಲಸ ಮಾಡುತ್ತೇನೆ’’ ಎಂದು ಸಿಎಂ ಎದುರಲ್ಲಿ ಭರವಸೆ ನೀಡಿದ್ದಾರೆ.

    ಇಂತಹ ಸಮಸ್ಯೆ ರಾಜ್ಯಾದ್ಯಂತ ಹಲವೆಡೆ ಇದೆ ಎಂದು ಟಿವಿ9 ಸಿಎಂ ಅವರನ್ನು ಗಮನ ಸೆಳೆದಾಗ, ‘‘ರಾಜ್ಯದ ಎಲ್ಲಾ ಕಡೆಯೂ ಸೂಕ್ತ ಬಸ್ ವ್ಯವಸ್ಥೆ ಮಾಡಿ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ’’ ಎಂದು ಸಿಎಂ ಸೂಚನೆ ನೀಡಿದ್ದಾರೆ.

  • 09 Sep 2021 12:47 PM (IST)

    ನಮ್ಮ ನೀರು ನಾವು ಪಡೆಯಲು ಯಾರ ಅಪ್ಪಣೆ ಬೇಕಿಲ್ಲ; ಅಣ್ಣಾಮಲೈ ಉಪವಾಸಕ್ಕೆ ಸಿಎಂ ಟಾಂಗ್

    ನೀರಾವರಿ ತಜ್ಞ ಕ್ಯಾಪ್ಟನ್ ಎಸ್.ರಾಜಾರಾವ್ ಸಲಹೆ ನಿಜ ಎಂದ ಮುಖ್ಯಮಂತ್ರಿ

    ನೀರಾವರಿ ಯೋಜನೆಗಳ ಸಂಬಂಧ ಸರ್ಕಾರಕ್ಕೆ ನೀರಾವರಿ ತಜ್ಞ ಕ್ಯಾಪ್ಟನ್ ಎಸ್.ರಾಜಾರಾವ್ ಟಿವಿ9 ಮುಖಾಂತರ ಸಲಹೆ ನೀಡಿದ್ದಾರೆ. ಇದರ ಕುರಿತು ಮಾತನಾಡಿರುವ ಸಿಎಂ, ರಾಜಾರಾವ್ ಹೇಳಿರುವುದು ಸತ್ಯ. ಅವರಿಂದ ಹಲವು ವಿಚಾರ ಕಲಿತಿದ್ದೇನೆ ಎಂದಿದ್ದಾರೆ. ‘‘ಕೃಷ್ಣಾ ನದಿ 130 ಟಿಎಂಸಿ ನೀರು ಬಳಕೆಗೆ ಆದ್ಯತೆ ನೀಡಲಾಗಿದೆ. ಈ ಕುರಿತು ದೆಹಲಿಗೆ ಹೋದಾಗ ವಕೀಲರ ಜೊತೆ ಚರ್ಚಿಸಿ, ಇದಕ್ಕೆ ಮೊದಲ ಆದ್ಯತೆಯನ್ನು ನೀಡುವಂತೆ ಹಾಗೂ ತಾತ್ಕಾಲಿಕ ಸ್ಟೇ ತೆಗೆದುಹಾಕಲು ವಾದಕ್ಕೆ ತಿಳಿಸಿದ್ದೇನೆ’’ ಎಂದು ಸಿಎಂ ತಿಳಿಸಿದ್ದಾರೆ. ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಮಾತನಾಡಿದ ಮಾಡಿದ ಸಿಎಂ, ‘‘ನಮ್ಮ ನೀರು ನಾವು ಪಡೆಯಲು ಯಾರ ಅಪ್ಪಣೆ ಬೇಕಿಲ್ಲ. ಯಾರಾದ್ರೂ ಉಪವಾಸ ಕೂರಲಿ, ಏನಾದ್ರೂ ಮಾಡಲಿ’’ ಎಂದು ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಉಪವಾಸಕ್ಕೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

  • 09 Sep 2021 12:40 PM (IST)

    ‘‘750 ರೈತ ಉತ್ಪಾದಕ ಸಂಸ್ಥೆಗಳಿಗೆ 3 ವರ್ಷಕ್ಕೆ ₹225 ಕೋಟಿ’’: ಸಿಎಂ

    ಯೋಜನೆಯ ಬಗ್ಗೆ ಟಿವಿ9 ಸ್ಟುಡಿಯೋದಲ್ಲಿ ಮುಖ್ಯಮಂತ್ರಿ ಆದೇಶ ಪ್ರಕಟ

    750 ರೈತ ಉತ್ಪಾದಕ ಸಂಸ್ಥೆಗಳಿಗೆ 3 ವರ್ಷಕ್ಕೆ ₹225 ಕೋಟಿಯನ್ನು ನೀಡುವ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಟಿವಿ9 ಸ್ಟುಡಿಯೋದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಯೋಜನೆಯ ಪ್ರಸಕ್ತ ವರ್ಷದ ಆದೇಶದ ಬಗ್ಗೆ ಸಿಎಂ ಬೊಮ್ಮಾಯಿ ಟಿವಿ9 ಸ್ಟುಡಿಯೋದಲ್ಲಿ ಆದೇಶ ಪ್ರಕಟಿಸಿದ್ದಾರೆ.

  • 09 Sep 2021 12:37 PM (IST)

    ‘‘ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು, ರೈತರ ಆದಾಯ ದ್ವಿಗುಣವಾಗಬೇಕು’’

    ಕೃಷಿ ಕ್ಷೇತ್ರದ ಕುರಿತಂತೆ ಸಿಎಂ ಬೊಮ್ಮಾಯಿ ಹೇಳಿಕೆ

    ‘‘ವರ್ಷಕ್ಕೆ ₹3-4 ಸಾವಿರ ಕೋಟಿಯಷ್ಟು ಮೊತ್ತದ ರೈತರ ವಿದ್ಯುತ್ ಬಿಲ್ ಸರ್ಕಾರ ಪಾವತಿ ಮಾಡುತ್ತಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ರೈತರ ಆದಾಯ ದ್ವಿಗುಣವಾಗಬೇಕು’’ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

  • 09 Sep 2021 12:30 PM (IST)

    ಕೊರೊನಾ ನಿರ್ವಹಣೆ ಮಾಡೋದು ಬಹಳ ಕಷ್ಟವಾಗಿತ್ತು; ಆದರೂ ಪಿಎಂ ಮೋದಿ, ಬಿಎಸ್‌ವೈ ಚೆನ್ನಾಗಿ ನಿರ್ವಹಿಸಿದರು

    ಕೊರೋನಾ ನಿರ್ವಹಣೆಯ ಕುರಿತಂತೆ ಸಿಎಂ ಬೊಮ್ಮಾಯಿ ಅಭಿಪ್ರಾಯ

    ಕೊರೊನಾ ನಿರ್ವಹಣೆ ಮಾಡೋದು ಬಹಳ ಕಷ್ಟವಾಗಿತ್ತು; ಆದರೂ ಪ್ರಧಾನಿ ಮೋದಿ, ಬಿಎಸ್‌ವೈ ಬಹಳ ಉತ್ತಮವವಾಗಿ ನಿರ್ವಹಿಸಿದರು ಎಂದು ಸಿಎಂ ಬೊಮ್ಮಾಯಿ ಶ್ಲಾಘಿಸಿದ್ದಾರೆ. ಸಾಲ ಹೆಚ್ಚಾಗಿ ಪಡೆಯಲು ಕೇಂದ್ರ ಅವಕಾಶ ಕೊಟ್ಟಿದೆ. ಆದ್ದರಿಂದ ಕಷ್ಟಕಾಲದಲ್ಲಿ ಆರ್ಥಿಕ ನಿರ್ವಹಣೆಗೆ ಸಹಾಯವಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

  • 09 Sep 2021 12:27 PM (IST)

    ಹಾವೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾದ ವಿಚಾರ; ಪ್ರತಿಕ್ರಿಯಿಸಿದ ಬೊಮ್ಮಾಯಿ

    ಪ್ರಕರಣದ ಕುರಿತಂತೆ ಹಾವೇರಿ ಜಿಲ್ಲಾಧಿಕಾರಿ ಸಂಜಯ್ ಅವರೊಂದಿಗೆ ಸಿಎಂ ಮಾತನಾಡಿ ಕ್ರಮಕ್ಕೆ ಸೂಚನೆ

    ಹಾವೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾದ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ‘‘ಶಿಗ್ಗಾಂವಿ, ಬಂಕಾಪುರಕ್ಕೆ ವರದಾ ನದಿಯಿಂದ ನೀರು ವ್ಯವಸ್ಥೆ ಮಾಡಲಾಗಿದೆ. ಉಳಿದ ಕೆಲವೆಡೆ ಮಾತ್ರ ಕುಡಿಯುವ ನೀರಿನ ಘಟಕಗಳಿವೆ. ಹಾಗಂತ ಎಲ್ಲ ಕಡೆ ಸಮಸ್ಯೆ ಇದೆ ಎನ್ನುವುದಕ್ಕೆ ಆಗುವುದಿಲ್ಲ. ಶುದ್ಧ ನೀರಿನ ಘಟಕಗಳಲ್ಲಿ ಬಹಳ ಲೋಪಗಳಿವೆ. ನೀರಿನ ಘಟಕ ಆರಂಭಿಸುವಾಗಲೇ ಈ ಮಾತು ಹೇಳಿದ್ದೆ. ನೀರಿನ ಘಟಕಗಳ ನಿರ್ವಹಣೆ ಖಾಸಗಿಯವರಿಗೆ ಕೊಟ್ಟಿದ್ದಾರೆ. ಒಂದು ಲೀಟರ್ ನೀರಿಗೆ 2 ರೂ. ಪಡೆದು ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಕೆಲವೆಡೆ ನಿರ್ವಹಣೆ ಮಾಡಲಾಗದೆ ಬಾಗಿಲು ಹಾಕಿದ್ದಾರೆ. ಹಿಂದಿನ ಸರ್ಕಾರದಲ್ಲಿ ಹಾಕಿರುವ ಕೆಲವು ಘಟಕಗಳು ಹಾಳಾಗಿವೆ. ಬೋರ್‌ವೆಲ್ ಇಲ್ಲದ ಕಡೆಯೂ ನೀರಿನ ಘಟಕ ಹಾಕಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಇದಕ್ಕೆ ಪರಿಹಾರ ಕೈಗೊಳ್ಳಲಾಗುವುದು’’ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

    ಪ್ರಕರಣದ ಕುರಿತಂತೆ ಹಾವೇರಿ ಡಿಸಿ ಸಂಜಯ್ ಶೆಟ್ಟಣ್ಣನವರ್ ಅವರೊಂದಿಗೆ ಸಿಎಂ ಟಿವಿ9 ವೇದಿಕೆಯಲ್ಲಿ ಮಾತನಾಡಿದ್ದಾರೆ. ಕುಡಿಯುವ ನೀರಿನ ಘಟಕ ಹಾಕಿ ಎಷ್ಟು ದಿನ ಆಗಿದೆ ಎಂದು ಇಂದು ಸಂಜೆಯ ವೇಳೆಗೆ ಮಾಹಿತಿ ನೀಡಲು ಸೂಚನೆ ಮುಖ್ಯಮಂತ್ರಿ ಡಿಸಿಗೆ ಸೂಚನೆ ನೀಡಿದ್ದಾರೆ. ‘‘ಜಿಲ್ಲೆಯಲ್ಲಿ ಹಾಳಾಗಿರುವ ಎಲ್ಲ ಘಟಕಗಳ ಮಾಹಿತಿ ನೀಡಿ. ದುರಸ್ತಿ ಮಾಡುವ ಕೆಲಸವೂ ಆಗಲಿ. ಕೆಲವು ಘಟಕಗಳಲ್ಲಿ ನೀರೇ ಬರುವುದಿಲ್ಲ, ಅದೇಕೆ ಬೇಕು? ಅಂತಹ ಘಟಕಗಳನ್ನು ತೆಗೆದುಹಾಕಿ. ಕುಡಿಯುವ ನೀರಿನ ಘಟಕ ಯಾವಾಗ ಹಾಕಲಾಯಿತು; ಅದರ ಈಗಿನ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಮಾಹಿತಿ ನೀಡಿ’’ ಎಂದು ಸಿಎಂ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.

  • 09 Sep 2021 12:14 PM (IST)

    ಹೆಣ್ಣುಮಕ್ಕಳ ಸುರಕ್ಷತೆಗೆ ಒಬ್ಬ ಅಣ್ಣ, ತಮ್ಮ, ತಂದೆಯಾಗಿ ಕ್ರಮ ತೆಗೆದುಕೊಳ್ಳುತ್ತೇನೆ

    ಅತ್ಯಾಚಾರ ಘಟನೆಗಳ ಕುರಿತಂತೆ ಹೆಣ್ಣುಮಕ್ಕಳ ಭೀತಿಯನ್ನು ತೆರೆದಿಟ್ಟ ವಿದ್ಯಾರ್ಥಿನಿ ವಿಸ್ಮಯಾ ಅವರಿಗೆ ಉತ್ತರ ನೀಡಿದ ಸಿಎಂ

    ಹೆಣ್ಣುಮಕ್ಕಳ ಸುರಕ್ಷತೆಗೆ ಒಬ್ಬ ಅಣ್ಣ, ತಮ್ಮ, ತಂದೆಯಾಗಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಸರ್ಕಾರದಿಂದ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾತನಾಡಿದ ಸಿಎಂ, ‘‘ಕಾಲೇಜುಗಳಲ್ಲಿ ಸೆಲ್ಫ್ ಡಿಫೆನ್ಸ್ ಪ್ರೋಗ್ರಾಂ ಮಾಡುತ್ತೇವೆ. ಕೊರೊನಾ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮ ವಿಳಂಬಗೊಂಡಿದೆ. ಶೀಘ್ರದಲ್ಲಿಯೇ ವಿದ್ಯಾರ್ಥಿನಿಯರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಸೆಲ್ಫ್ ಡಿಫೆನ್ಸ್ ಪ್ರೋಗ್ರಾಂ ಮಾಡುತ್ತೇವೆ’’ ಎಂದು ಅವರು ಹೇಳಿಕೆ ನೀಡಿದ್ದಾರೆ.

    ಪೊಲೀಸರ ಕಾರ್ಯವೈಖರಿಯ ಕುರಿತು ಮಾತನಾಡಿರುವ ಸಿಎಂ, ‘‘ಪೊಲೀಸರು ಸಮಯಪ್ರಜ್ಞೆಯಿಂದ ಕೆಲಸ ಮಾಡಬೇಕು. ಪೊಲೀಸರು ಶೇ.99ರಷ್ಟು ಒಳ್ಳೆಯ ಕೆಲಸ ಮಾಡಿರುತ್ತಾರೆ. ಯಾವುದೋ ಒಂದೆರಡು ಕೆಲಸದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತದೆ. ಹಾಗಂತ ಪೊಲೀಸ್ ಇಲಾಖೆಯನ್ನು ದೂರಲು ಆಗುವುದಿಲ್ಲ’’ ಎಂದು ಬೊಮ್ಮಾಯಿ ಹೇಳಿದ್ದಾರೆ.

  • 09 Sep 2021 12:07 PM (IST)

    ಸೂಕ್ಷ್ಮ ಘಟನೆಗಳಿಗೆ ರಾಜಕೀಯ ನಾಯಕರ ಪ್ರತಿಕ್ರಿಯೆ ಕುರಿತು ಮಾತನಾಡಿದ ಸಿಎಂ

    ಮೈಸೂರಿನ ಘಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಸಿಎಂ ಅಭಿಪ್ರಾಯ

    ಈಗ ಟಿವಿ ನೋಡಿ ಆಚೆ ಬರಬೇಕಾದ ಪರಿಸ್ಥಿತಿ ಇದೆ. ಇಲ್ಲದಿದ್ದರೆ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ಆಗಲ್ಲ. ಆದರೆ ಪ್ರತಿಕ್ರಿಯಿಸುವಾಗ ಜಾಗ್ರತೆ ವಹಿಸಬೇಕು. ಘಟನೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡಬೇಕಾಗಿ ಬಂದಾಗ ಇಂತಹ ತಪ್ಪುಗಳಾಗಬಹುದು. ಆದ್ದರಿಂದ ಬಹಳ ಸೂಕ್ಷ್ಮವಾಗಿರಬೇಕು ಎಂದು ಸಿಎಂ ಹೇಳಿದ್ದಾರೆ.

  • 09 Sep 2021 11:59 AM (IST)

    ಜಿ.ಎಚ್.ಪಟೇಲ್​ರ ಮಾತುಗಳನ್ನು ಸ್ಮರಿಸಿದ ಮುಖ್ಯಮಂತ್ರಿ ಬೊಮ್ಮಾಯಿ

    ‘‘ನಾವು ಗಿಡಗಳಾಗಬಾರದು, ನೆರಳು ನೀಡುವ ಮರಗಳಾಗಬೇಕು’’ ಎಂಬುದನ್ನು ನೆನಪಿಸಿಕೊಂಡ ಸಿಎಂ

    ‘‘ಭೂಮಿಯಲ್ಲಿ ನಾವು ಗಿಡಗಳಾಗಿ ಉಳಿಯಬಾರದು. ಬಲವಾಗಿ ಬೇರೂರುವ ಮರಗಳಾಗಿ ಬೆಳೆಯಬೇಕು. ಎಲ್ಲರಿಗೂ ನೆರಳು ನೀಡುವಂತಾಗಬೇಕು’’ ಎಂದು ಜೆ.ಹೆಚ್.ಪಟೇಲ್ ಹೇಳಿದ್ದರು. ಆ ಮಾತುಗಳನ್ನು ಸಿಎಂ ಸ್ಮರಿಸಿ, ಅವರ ಮಾತಿನಂತೆ ತಾನು ನಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

  • 09 Sep 2021 11:52 AM (IST)

    ‘ಖೇಲೋ ಇಂಡಿಯಾ’ಕ್ಕೆ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ನೆರವಿಗೆ ಕ್ರಮ: ಸಿಎಂ

    ಕ್ರೀಡಾಪಟುಗಳಿಗೆ ನೆರವಿನ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು ಎಂದ ಸಿಎಂ ಬೊಮ್ಮಾಯಿ

    ‘‘ಕ್ರೀಡಾಪಟುಗಳಿಗೆ ನೆರವಿನ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕ್ರೀಡಾಪಟುಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. 75 ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ’’ ಎಂದು ಸಿಎಂ ‘ಖೇಲೋ ಇಂಡಿಯಾ’ ಕುರಿತು ಮಾಹಿತಿ ನೀಡಿದ್ದಾರೆ.

  • 09 Sep 2021 11:48 AM (IST)

    ಸಾಧನೆ ಶಿಖರವೇರಲು ಹೊರಟ ಛಲಗಾರ್ತಿಗೆ ಬಡತನ ಅಡ್ಡಿ; ಸಹಾಯದ ಭರವಸೆ ನೀಡಿದ ಸಿಎಂ

    ಟಿವಿ9 ಸ್ಟುಡಿಯೋದಲ್ಲೇ ಬಾಲಕಿಗೆ ₹10 ಲಕ್ಷ ಸೈಕಲ್​ ಕೊಡಿಸುವ ಆದೇಶ ಮಾಡುತ್ತೇನೆ ಎಂದ ಸಿಎಂ

    ಟಿವಿ9ಗೆ ಸೈಕ್ಲಿಂಗ್ ಕ್ರೀಡಾಪಟು ಪವಿತ್ರಾ ಕುರ್ತಕೋಟಿ ಸಹಾಯಕ್ಕಾಗಿ ಮನವಿ ಮಾಡಿದ್ದರು. ಸಾಧನೆ ಶಿಖರವೇರಲು ಹೊರಟ ಛಲಗಾರ್ತಿಗೆ ಬಡತನ ಅಡ್ಡಿಯಾಗಿದ್ದು, ಸೈಕಲ್ ಕೊಡಿಸಿ ಎಂದು ಆಕೆ ಮನವಿ ಮಾಡಿದ್ದರು. ‘ಹಳ್ಳಿ’ಗಾಡಲ್ಲಿ ಅರಳಿದ ‘ಹೂವಿ’ಗೆ ಸರ್ಕಾರ ನೆರವಿನ ಭರವಸೆ ನೀಡಿದೆ.

    ಬಾಲಕಿಗೆ ₹10 ಲಕ್ಷ ಮೌಲ್ಯದ ಸೈಕಲ್​ ಕೊಡಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಕ್ರೀಡಾ ಇಲಾಖೆ ಜತೆ ಚರ್ಚಿಸಿ ಹಣಕಾಸು ನೆರವು ನೀಡುತ್ತೇವೆ ಎಂದು ತಿಳಿಸಿರುವ ಬೊಮ್ಮಾಯಿ, ‘‘ಕೇವಲ ಸೈಕಲ್ ಮಾತ್ರವಲ್ಲ, ಎಲ್ಲ ಸೌಲಭ್ಯ ಒದಗಿಸುತ್ತೇವೆ’’ ಎಂದು ಭರವಸೆ ನೀಡಿದ್ದಾರೆ.

  • 09 Sep 2021 11:42 AM (IST)

    ಚಿತ್ರರಂಗದ ಸಮಸ್ಯೆ ತೆರೆದಿಟ್ಟ ರಮೇಶ್ ಅರವಿಂದ್

    ಚಿತ್ರರಂಗದ ಎಲ್ಲಾ ಚಟುವಟಿಕೆಗೆ ಕೊರೊನಾ 3ನೇ ಅಲೆ ನೋಡಿಕೊಂಡು ಪರಿಹಾರ: ಸಿಎಂ

    ಚಿತ್ರರಂಗ ಕೊರೊನಾ ಹೊಡೆತದಿಂದ ಎದುರಿಸಿರುವ ಸಮಸ್ಯೆಗಳ ಕುರಿತು ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದಾರೆ. ‘‘ಕೊರೊನಾದಿಂದ ಚಿತ್ರರಂಗ ಸಮಸ್ಯೆ ಎದುರಿಸುತ್ತಿದೆ. ಎಲ್ಲ ಚಿತ್ರ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ’’ ಎಂದು ಅವರು ಟಿವಿ9 ಮುಖಾಂತರ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ‘‘ನಾವು ಚಿತ್ರರಂಗದ ಪರವಾಗಿದ್ದೇವೆ. ಚಿತ್ರರಂಗದ ಎಲ್ಲ ಚಟುವಟಿಕೆಗೆ ಆದಷ್ಟು ಶೀಘ್ರವಾಗಿ ಅನುಮತಿ ನೀಡುತ್ತೇವೆ. ಆದರೆ, ಕೊರೊನಾ 3ನೇ ಅಲೆ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತೇವೆ’‘ ಎಂದು ಅವರು ತಿಳಿಸಿದ್ದಾರೆ.

    ಡಾ.ರಾಜ್​ಕುಮಾರ್ ಕುಟುಂಬದೊಂದಿಗಿನ ಆತ್ಮೀಯತೆಯ ಕುರಿತು ಮಾತನಾಡುತ್ತಾ ರಾಜ್ ಅವರನ್ನು ಸಿಎಂ ನೆನಪಿಸಿಕೊಂಡರು. ಈ ಕುರಿತು ಮಾತನಾಡಿದ ಸಿಎಂ, ‘‘ಡಾ.ರಾಜ್‌ಕುಮಾರ್ ಪುತ್ರರು ನನಗೆ ಆತ್ಮೀಯರು. ಡಾ.ರಾಜ್‌ಕುಮಾರ್ ಕಾಲದಿಂದಲೂ ಹತ್ತಿರವಾಗಿದ್ದಾರೆ. 30-40 ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ಕಚೇರಿ ಓಪನ್ ಮಾಡಿದ ಕಾಲದಿಂದಲೂ ಡಾ.ರಾಜ್‌ಕುಮಾರ್ ಪರಿಚಯವಿದ್ದರು’’ ಎಂದು ರಾಜ್ ಅವರನ್ನು ಸಿಎಂ ನೆನಪಿಸಿಕೊಂಡಿದ್ದಾರೆ.

  • 09 Sep 2021 11:35 AM (IST)

    B.Ed ಶಿಕ್ಷಣದ ಸಮಸ್ಯೆಯನ್ನು ತೆರೆದಿಟ್ಟ ಗುರುರಾಜ ಕರ್ಜಗಿ; ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮನವಿ

    ಕರ್ಜಗಿಯವರು ವಿವರಿಸಿದ ಸಮಸ್ಯೆ ನಿಜ ಎಂದು ಒಪ್ಪಿದ ಸಿಎಂ; ಪರಿಹಾರದ ಭರವಸೆ

    ವೃತ್ತಿಯಲ್ಲಿ ಶಿಕ್ಷಕರಾಗಿರುವ ಗುರುರಾಜ ಕರ್ಜಗಿ ಸಿಎಂ ಅವರಲ್ಲಿ ನೂತನ ಶಿಕ್ಷಣ ನೀತಿಯ ಕುರಿತು ತಮ್ಮಲ್ಲಿರುವ ಜಿಜ್ಞಾಸೆಯನ್ನು ತೆರೆದಿಟ್ಟಿದ್ದಾರೆ. ‘‘ಶಿಕ್ಷಕನಾಗಿ ನನಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಒಂದಷ್ಟು‌ ಜಿಜ್ಞಾಸೆಗಳಿವೆ. ಇತರ ದೇಶಗಳಂತೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯೂ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು. ಆದರೆ ಬಿ.ಎಡ್ ನಂತರ ಕೋರ್ಸ್​​ಗಳಲ್ಲಿ ಹಲವು ವ್ಯಕ್ತಿಗಳು ಕೇವಲ ಸರ್ಟಿಫಿಕೇಟ್ ಹಿಡಿದು ಬರುತ್ತಾರೆ. ಒಂದೂ ತರಗತಿಗಳಿಗೆ ಹೋಗಿರುವುದಿಲ್ಲ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಿ’’ ಎಂದು ಗುರುರಾಜ ಕರ್ಜಗಿ‌ ಮನವಿ ಮಾಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಗುರುರಾಜ ಕರ್ಜಗಿಯವರ ಮಾತುಗಳು ನಿಜ ಎಂದು ಒಪ್ಪಿದ್ದಾರೆ. ‘‘ಉತ್ತಮ ಶಿಕ್ಷಕರಿಂದ ಉತ್ತಮ ಸಾಧನೆ ಮಾಡಿದವರಿದ್ದಾರೆ. ಶಿಕ್ಷಕರು ತನ್ನ ಜೀವನ ಪರ್ಯಂತ ಕಲಿಯಬೇಕಾಗುತ್ತದೆ. ಉತ್ತಮ ವಿದ್ಯಾರ್ಥಿಯಾದವರು ಉತ್ತಮ ಶಿಕ್ಷಕರಾಗಿರುತ್ತಾರೆ’’ ಎಂದಿದ್ದಾರೆ. ಉತ್ತಮ ಶಿಕ್ಷಕರನ್ನು ರೂಪಿಸುವ ಕುರಿತು ಮಾತನಾಡಿರುವ ಸಿಎಂ, ‘‘ಉತ್ತಮ ಶಿಕ್ಷಕರನ್ನು ತಯಾರಿಸುವ ಕೆಲಸವಾಗಬೇಕಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲೂ ಸ್ವಲ್ಪ ಕೊರತೆ ಇದೆ. ಅತಿಥಿ ಉಪನ್ಯಾಸಕರು ತರಗತಿಗಳನ್ನು ಮಾಡುತ್ತಿದ್ದಾರೆ. ಸಮಸ್ಯೆಗಳಿಗೆ ಯೋಜನೆ ರೂಪಿಸಿ ಪರಿಹಾರ ಕೈಗೊಳ್ಳಲಾಗುವುದು’’ ಎಂದಿದ್ದಾರೆ.

  • 09 Sep 2021 11:25 AM (IST)

    ಕಾರ್ಯಕ್ರಮದ ವಿಡಿಯೊ ಲೈವ್ ಇಲ್ಲಿ ವೀಕ್ಷಿಸಬಹುದು.

    ಮಾಧ್ಯಮಲೋಕದಲ್ಲೇ ವಿಶಿಷ್ಟ ಪ್ರಯತ್ನವಾದ ಸಿಎಂ- ಕಾಮನ್ ಮ್ಯಾನ್ ಮಾತುಕತೆಯನ್ನು ಇಲ್ಲಿ ವೀಕ್ಷಿಸಬಹುದು

  • 09 Sep 2021 11:19 AM (IST)

    BDA ನಿರ್ಲಕ್ಷ್ಯಕ್ಕೆ 312 ಕುಟುಂಬಗಳಿಗೆ ಸಂಕಷ್ಟ ವಿಚಾರ; ಸುಮಾರು 7 ವರ್ಷದಿಂದ ಪರದಾಡುತ್ತಿರುವ ಕುಟುಂಬಗಳು

    ಒಂದು ತಿಂಗಳೊಳಗೆ ಕೆಲಸ ಮುಗಿಸಿ ಎಂದು ಬಿಡಿಎ ಆಯುಕ್ತ ಎಂ.ಬಿ.ರಾಜೇಶ್​ಗೌಡಗೆ ಸಿಎಂ ಸೂಚನೆ

    BDA ನಿರ್ಲಕ್ಷ್ಯಕ್ಕೆ 312 ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಮನೆಗಳಿಗೆ ಮೂಲಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ಅಲ್ಲಿ ಹೋಗಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಸುಮಾರು 7 ವರ್ಷದಿಂದ ಕುಟುಂಬಗಳು ಈ ಸಮಸ್ಯೆಯಿಂದ ಪರದಾಡುತ್ತಿವೆ. ಪ್ರಕರಣದ ಕುರಿತಂತೆ ಸಿಎಂ ಟಿವಿ9 ವೇದಿಕೆಯಲ್ಲಿ ಸ್ಥಳದಲ್ಲೇ ಪರಿಹಾರ ಸೂಚಿಸಿದ್ದಾರೆ.

    ಬಿಡಿಎ ಆಯುಕ್ತ ಎಂ.ಬಿ.ರಾಜೇಶ್‌ಗೌಡ ಅವರೊಂದಿಗೆ ಫೋನ್ ಕರೆಯ ಮುಖಾಂತರ ಸಿಎಂ ಮಾತನಾಡಿದ್ದು, 2 ತಿಂಗಳಲ್ಲಿ ಮೂಲಸೌಕರ್ಯ ಒದಿಗಿಸುವುದಾಗಿ ಆಯುಕ್ತ ಹೇಳಿಕೆ ನೀಡಿದ್ದಾರೆ. ಆಗ ಸಿಎಂ ‘‘2 ತಿಂಗಳು ಆಗಲ್ಲ, ಹಗಲು-ರಾತ್ರಿ ಕೆಲಸ ಮಾಡಿ, ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ-  ಎಲ್ಲ ಕೆಲಸ ಮುಗಿಸಿ’’ ಎಂದು ಖಡಕ್ ಸೂಚನೆ ನೀಡಿದ್ದಾರೆ.

  • 09 Sep 2021 11:12 AM (IST)

    ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದಿರುವುದಕ್ಕೆ ಪರಿಹಾರವೇನು?

    ಬಿಬಿಎಂಪಿಗೆ ಗುಂಡಿ ಮುಚ್ಚುವಂತೆ ಸೂಚಿಸಿದ್ದೇನೆ ಎಂದ ಸಿಎಂ

    ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದಿರುವ ಕುರಿತು ಮಾತನಾಡಿರುವ ಸಿಎಂ, ಮಳೆ ಹೆಚ್ಚಾಗಿ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಇದೇ ಮೊದಲ ಬಾರಿಗೆ ರಸ್ತೆ ಗುಂಡಿಗಳು ಆಗಿರುವುದಲ್ಲ. ಆದರೆ, ಕೂಡಲೇ ರಸ್ತೆ ಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಈ ಕುರಿತು ಸೂಚನೆ ನೀಡಿದ್ದು, ಆದ್ಯತೆ ಮೇರೆಗೆ ರಸ್ತೆ  ಗುಂಡಿ ಮುಚ್ಚುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

  • 09 Sep 2021 11:05 AM (IST)

    ಸಿಎಂ ಪರಿಹಾರ ನಿಧಿ ಚೆಕ್ ನೀಡದೆ ತಹಶೀಲ್ದಾರ್ ಕಳ್ಳಾಟ; ನಾಳೆ ಸಂಜೆಯೊಳಗೆ ಚೆಕ್ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ: ಸಿಎಂ

    ಟಿವಿ9 ಮೂಲಕ ಸಂತ್ರಸ್ತರ ಅಹವಾಲು ಸ್ವೀಕರಿಸಿದ ಸಿಎಂ ಬೊಮ್ಮಾಯಿ

    ಸಿಎಂ ಪರಿಹಾರ ನಿಧಿ ಚೆಕ್ ನೀಡದೆ ತಹಶೀಲ್ದಾರ್ ಕಳ್ಳಾಟ ಮಾಡುತ್ತಿರುವ ಘಟನೆಯನ್ನು ಟಿವಿ9 ಮುಖ್ಯಮಂತ್ರಿಗಳಿಗೆ ತೋರಿಸಿದೆ. ಇದು ನಿಜವಾಗಲೂ ದುರದೃಷ್ಟಕರ ಸಂಗತಿ ಎಂದ ಬೊಮ್ಮಾಯಿ, 24 ಗಂಟೆಯಲ್ಲಿ ಸಂತ್ರಸ್ತೆಗೆ ಚೆಕ್ ತಲುಪಿಸುವ ಕೆಲಸವಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ರಾಯಚೂರು ಜಿಲ್ಲಾಧಿಕಾರಿಗೆ ಹೇಳಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಅವರು ಸಂತ್ರಸ್ತ ವ್ಯಕ್ತಿಗೆ ಅಭಯ ನೀಡಿದ್ದಾರೆ.

  • 09 Sep 2021 10:53 AM (IST)

    ಒಂದು ತಿಂಗಳ ಕೆಲಸ ಕಾರ್ಯ ತೃಪ್ತಿ ತಂದಿದೆಯೇ?

    ಮುಂದಿನ ಆಡಳಿತಕ್ಕೆ ಇದು ಭದ್ರ ಬುನಾದಿಯಾಗಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ ಸಿಎಂ ಬೊಮ್ಮಾಯಿ.

    ಒಂದು ತಿಂಗಳಲ್ಲಿ‌ಸರ್ಕಾರದ ಕೆಲಸ ಕಾರ್ಯಗಳನ್ನು ಅಳೆಯಲು ಸಾಧ್ಯವಿಲ್ಲ.‌ ಆದರೆ ಜನಪರ ಯೋಜನೆಗಳ ಅನುಷ್ಠಾನಕ್ಕೆ‌ ಮತ್ತು ಸ್ವಚ್ಛ ದಕ್ಷ ಆಡಳಿತಕ್ಕೆ, ಕನ್ನಡಿಗರ ಬದುಕಿನಲ್ಲಿ‌ ನಗು ತರಲು ಭದ್ರ ಬುನಾದಿ ಹಾಕಲು ನಾನು ಪ್ರಯತ್ನಿಸುತ್ತಿದ್ದೇನೆ. ಅದಕ್ಕಾಗಿ ಈ ಒಂದು ತಿಂಗಳ ಅನುಭವ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.

    ತಿಂಗಳಲ್ಲಿ ಸರ್ಕಾರದ ಕಾರ್ಯಕ್ಷಮತೆ ಅಳೆಯಲು ಆಗಲ್ಲ. ಜವಾಬ್ದಾರಿ ಹೊತ್ತವರಿಂದ ಬದಲಾವಣೆ ಆರಂಭವಾಗಬೇಕು. ನನ್ನಿಂದಲೇ ಬದಲಾವಣೆ ಆರಂಭವಾಗಬೇಕಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಬಳಿಕ ಸಚಿವರು, ಅಧಿಕಾರಿಗಳಿಂದ ಬದಲಾವಣೆ ಆಗಬೇಕು. ಅಧಿಕಾರಿಗಳಿಗೆ ಹಳ್ಳಿಗಳಿಗೆ ಹೋಗಿ, ಇಲಾಖೆ ಕೆಲಸದ ಬಗ್ಗೆ ಪರಿಶೀಲಿಸುವಂತೆ ಹೇಳಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ ಸಿಎಂ

  • Published On - Sep 09,2021 10:41 AM

    Follow us
    ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
    ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
    ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
    ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
    ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
    ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
    ‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
    ‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
    ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
    ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
    ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
    ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
    Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
    Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
    Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
    Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
    ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
    ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
    ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
    ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು