Farmers Protest ಕರ್ನಾಲ್ ಮಾಜಿ ಎಸ್‌ಡಿಎಮ್ ವಿರುದ್ಧ ಕ್ರಮದ ಕುರಿತು ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಸಿದ ರೈತರು
Haryana ಆಡಳಿತವು ರಾಜ್ಯ ರಾಜಧಾನಿ ಚಂಡೀಗಢದ ನಿರ್ದೇಶನಗಳ ಮೇಲೆ ಕೆಲಸ ಮಾಡುತ್ತಿರುವಂತೆ ತೋರುತ್ತದೆ. ದೀರ್ಘಾವಧಿ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದರು. ಬಿಕೆಯು ಹರಿಯಾಣ ಮುಖ್ಯಸ್ಥ ಗುರ್ನಾಮ್ ಸಿಂಗ್ ಚಾದುನಿ ಕೂಡ ಮುತ್ತಿಗೆಯನ್ನು ಮುಂದುವರಿಸುವುದಾಗಿ ಹೇಳಿದರು.
ಕರ್ನಾಲ್: 11 ದಿನಗಳ ಹಿಂದೆ ರೈತರ ಮೇಲೆ ಪೋಲಿಸರು ನಡೆಸಿದ ದೌರ್ಜನ್ಯವನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿ ನಗರದ ಮಿನಿ-ಸೆಕ್ರೆಟರಿಯೇಟ್ (mini-Secretariat) ಮುತ್ತಿಗೆ ಹಾಕುವುದಾಗಿ ಹೇಳಿದ್ದರು. ಈ ವಿಷಯದ ಬಗ್ಗೆ ಮಾತುಕತೆ ನಡೆಸಲು ಸರ್ಕಾರ ರೈತ ನಾಯಕರನ್ನು ಮಾತುಕತೆಗೆ ಕರೆದಿತ್ತು. ಬುಧವಾರ ಸರ್ಕಾರ ಮತ್ತು ರೈತ ನಾಯಕರ ನಡುವೆ ಕರ್ನಾಲ್‌ನಲ್ಲಿ ನಡೆದ ಮಾತುಕತೆ ವಿಫಲವಾದ ಕಾರಣ ಸಂಯುಕ್ತ ಕಿಸಾನ್ ಮೋರ್ಚಾದ (SKM) ನಾಯಕರು ಮಿನಿ-ಸೆಕ್ರೆಟರಿಯೇಟ್ ಮುತ್ತಿಗೆಯನ್ನು ಮುಂದುವರಿಸುವುದಾಗಿ ಹೇಳಿದರು.
“ಆಡಳಿತವು ರಾಜ್ಯ ರಾಜಧಾನಿ ಚಂಡೀಗಢದ ನಿರ್ದೇಶನಗಳ ಮೇಲೆ ಕೆಲಸ ಮಾಡುತ್ತಿರುವಂತೆ ತೋರುತ್ತದೆ. ದೀರ್ಘಾವಧಿ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದರು. ಬಿಕೆಯು ಹರಿಯಾಣ ಮುಖ್ಯಸ್ಥ ಗುರ್ನಾಮ್ ಸಿಂಗ್ ಚಾದುನಿ ಕೂಡ ಮುತ್ತಿಗೆಯನ್ನು ಮುಂದುವರಿಸುವುದಾಗಿ ಹೇಳಿದರು.
ಎಸ್‌ಕೆಎಂ ಪ್ರಕಾರ ಮೂರು ಗಂಟೆಗಳ ಕಾಲ ನಡೆದ ಮಾತುಕತೆಯ ವಿಫಲವಾಗಿರುವುಕ್ಕೆ ಕಾರಣವಾದ ಪ್ರಮುಖ ವಿಷಯವೆಂದರೆ ಮಾಜಿ ಎಸ್‌ಡಿಎಂ ಆಯುಷ್ ಸಿನ್ಹಾ ವಿರುದ್ಧ ಕ್ರಮದ ಬೇಡಿಕೆ. ಕೇಂದ್ರದ ಹೊಸ ಕೃಷಿ ಕಾನೂನುಗಳವಿರುದ್ಧ ಚಳುವಳಿಯನ್ನು ಮುನ್ನಡೆಸುತ್ತಿರುವ ರೈತ ಸಂಘಟನೆಯಾಗಿದೆ ಸಂಯುಕ್ತ ಕಿಸಾನ್ ಮೋರ್ಚಾ (SKM).
ಆಗಸ್ಟ್ 28 ರಂದು ಕರ್ನಾಲ್ ಬಳಿಯ ಚಂಡೀಗಢ-ದೆಹಲಿ ಹೆದ್ದಾರಿಯಲ್ಲಿರುವ ಬಸ್ತಾರಾದ ಟೋಲ್ ಪ್ಲಾಜಾದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಲು ಆದೇಶ ನೀಡಿದ ಸಿನ್ಹಾ ಪೊಲೀಸ್ ಸಿಬ್ಬಂದಿಯಲ್ಲಿ ರೈತರ ತಲೆ ಒಡೆಯಿರಿ ಎಂದು ಹೇಳುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಬುಧವಾರದ ಮಾತುಕತೆಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ವರಾಜ್ ಇಂಡಿಯಾ ಸಂಸ್ಥಾಪಕ ಯೋಗೇಂದ್ರ ಯಾದವ್ ಅವರು ಅಧಿಕಾರಿಯ ವಿರುದ್ಧ ಕ್ರಮಕ್ಕೆ ಕೋರಿದಾಗ, ಆಡಳಿತವು ಪರಿಹಾರದ ಮೇಲೆ ಗಮನ ಹರಿಸಲು ಕೇಳಿದೆ. “ಇದು ನಮ್ಮ ಗೌರವದ ಪ್ರಶ್ನೆ ಎಂದು ನಾವು ಅವರಿಗೆ ಹೇಳಿದ್ದೇವೆ ಮತ್ತು ನಾವು ನಮ್ಮಿಂದಲೇ ಸಾಕಷ್ಟು ಪರಿಹಾರವನ್ನು ಸಂಗ್ರಹಿಸಬಹುದು” ಎಂದು ಯಾದವ್ ಹೇಳಿದರು. ಸಿನ್ಹಾ ಅವರನ್ನು ಸೇವೆಯಿಂದ ವಜಾಗೊಳಿಸಲು ಮತ್ತು ಕೊಲೆ ಮತ್ತು ಕೊಲೆ ಯತ್ನದ ಆರೋಪದ ಮೇಲೆ ಆತನನ್ನು ಬಂಧಿಸುವಂತೆ ನಾಯಕರು ಆಡಳಿತವನ್ನು ಕೇಳಿದ್ದಾರೆ. ಸುಶೀಲ್ ಕಾಜಲ್ ಎಂಬ ರೈತನು “ಪೋಲಿಸರ ಹಲ್ಲೆಯಿಂದ” ಹೃದಯಾಘಾತಕ್ಕೊಳಗಾಗಿದ್ದಾನೆ ಎಂದು ರೈತರು ಹೇಳಿದ್ದಾರೆ. “ಆದರೆ ಅವರು (ಆಡಳಿತ) ಅದನ್ನು ನಿರಾಕರಿಸಿದರು. ಅವರು ಸಿನ್ಹಾ ಅವರನ್ನು ಅಮಾನತು ಮಾಡಲು ಸಹ ನಿರಾಕರಿಸಿದರು” ಎಂದು ಯಾದವ್ ಹೇಳಿದರು.
ಸಿನ್ಹಾ ಮತ್ತು ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮದ ಜೊತೆಗೆ, ಪ್ರತಿಭಟನಾಕಾರರು ಕಾಜಲ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ನೀಡಬೇಕೆಂದು ಒತ್ತಾಯಿಸಿದ್ದಾರೆ. ಗುರ್ಗಾಂವ್‌ನಲ್ಲಿ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಸುದ್ದಿಗಾರರೊಂದಿಗೆ ಮಾತನಾಡಿದ್ದು ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಮತ್ತು ಧ್ವನಿ ಎತ್ತುವ ಹಕ್ಕು ಎಲ್ಲರಿಗೂ ಇದೆ. ಅವರ (ರೈತರ) ಬೇಡಿಕೆಗಳು ಏನೇ ಇರಲಿ, ನಮ್ಮ ಅಧಿಕಾರಿಗಳು ಅವರೊಂದಿಗೆ ಮಾತನಾಡುತ್ತಿದ್ದಾರೆ. ಮಾತುಕತೆಗಳು ನಡೆಯುತ್ತಿವೆ ”ಎಂದು ಹೇಳಿದ್ದಾರೆ.
ಕರ್ನಾಲ್‌ನಲ್ಲಿ, ಡೆಪ್ಯುಟಿ ಕಮಿಷನರ್ ನಿಶಾಂತ್ ಕುಮಾರ್ ಯಾದವ್ ಹೇಳಿಕೆಯಲ್ಲಿ ಕರ್ನಾಲ್‌ನಲ್ಲಿರುವ ಎಲ್ಲಾ ಕಚೇರಿಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಆಡಳಿತವು “ಪ್ರತಿಭಟನಾಕಾರರೊಂದಿಗೆ ನಿಯಮಿತವಾಗಿ ಮಾತುಕತೆ ನಡೆಸುತ್ತಿದೆ” ಎಂದು ಹೇಳಿದರು. ಆದಾಗ್ಯೂ, “ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು” ಪ್ರಯತ್ನಿಸುವವರನ್ನು “ಕಠಿಣವಾಗಿ ಎದುರಿಸಲಾಗುವುದು” ಎಂದು ಅವರು ಎಚ್ಚರಿಸಿದರು.
“ನಡೆಯುತ್ತಿರುವ ರೈತರ ಆಂದೋಲನದ ನಡುವೆ ಕರ್ನಾಲ್‌ನಲ್ಲಿ ಯಾರೂ ಭಯಪಡುವ ಅಗತ್ಯವಿಲ್ಲ. ಎಲ್ಲಾ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತವೆ “ಎಂದು ಡಿಸಿ ಹೇಳಿದರು. ಕರ್ನಾಲ್ ಅಥವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾಕಾರರು ಯಾವುದೇ ರಸ್ತೆಯನ್ನು ಮುಚ್ಚಿಲ್ಲ ಮತ್ತು “ಹಾಗೆ ಮಾಡಲು ಅವರಿಗೆ ಅವಕಾಶ ನೀಡುವುದಿಲ್ಲ” ಎಂದು ಅವರು ಹೇಳಿದರು.
“ಕರ್ನಾಲ್‌ನಲ್ಲಿರುವ ಎಲ್ಲಾ ಕಚೇರಿಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿವೆ ಮತ್ತು ಮಿನಿ-ಸೆಕ್ರೆಟರಿಯೇಟ್‌ನಲ್ಲಿ ಯಾರಿಗಾದರೂ ಕೆಲಸವಿದ್ದರೆ, ಅವರು ಭೇಟಿ ನೀಡಬಹುದು ಮತ್ತು ಕೆಲಸವನ್ನು ಪೂರ್ಣಗೊಳಿಸಬಹುದು. ಪ್ರತಿಭಟನಾಕಾರರೊಂದಿಗೆ ಜಿಲ್ಲಾಡಳಿತ ನಿಯಮಿತವಾಗಿ ಮಾತುಕತೆ ನಡೆಸುತ್ತಿದೆ. ಪ್ರತಿಭಟನಾಕಾರರು ತಾವು ಯಾರಿಗೂ ತೊಂದರೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ”ಎಂದು ಅವರು ಹೇಳಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾರಾದರೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಪ್ರಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ “ಎಂದು ಡಿಸಿ ಹೇಳಿದರು.
ಬೆಳಗ್ಗೆ ಹೊತ್ತಲ್ಲಿ ಪ್ರತಿಭಟನಾಕಾರರು ಯಾರನ್ನೂ ಮುಖ್ಯ ದ್ವಾರದಿಂದ ಮಿನಿ-ಸೆಕ್ರೆಟರಿಯೇಟ್ ಒಳಗೆ ಪ್ರವೇಶಿಸಲು ಬಿಡಲಿಲ್ಲ ಆದರೂ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹಿಂಬದಿಯ ಗೇಟ್ ಮೂಲಕ ಪ್ರವೇಶಿಸಿದರು. ಸಂಜೆಯ ಹೊತ್ತಿಗೆ ಹರ್ಯಾಣ ಮುಖ್ಯಮಂತ್ರಿ ಎಂ ಎಲ್ ಖಟ್ಟರ್ ಅವರ ಮನೆಯಿಂದ ಸುಮಾರು 3 ಕಿಮೀ ದೂರದಲ್ಲಿರುವ ಮಿನಿ-ಸೆಕ್ರೆಟರಿಯೇಟ್ ಹೊರಗಿನ ರೈತರ ಸಂಖ್ಯೆ 20,000 ಕ್ಕಿಂತ ಹೆಚ್ಚಾಗಿದೆ. ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳು ಮತ್ತು ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸಿಎಪಿಎಫ್ (CAPF) ಮತ್ತು ಬಿಎಸ್ಎಫ್ (BSF) ಸೇರಿದಂತೆ ಕನಿಷ್ಠ 40 ಕಂಪನಿಗಳ ಭದ್ರತಾ ಪಡೆಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಗುರುವಾರ ಪಂಜಾಬ್ ಮೂಲದ ಬಿಕೆಯು (ಉಗ್ರಾನ್) ದ ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಾನ್ ಅವರು ಕರ್ನಾಲ್‌ಗೆ ಬೃಹತ್ ಬೆಂಗಾವಲನ್ನು ಮುನ್ನಡೆಸುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಉತ್ತರಪ್ರದೇಶದಿಂದ ರೈತರು ಕೂಡ ಇಲ್ಲಿಗೆ ತಲುಪಲಿದ್ದಾರೆ ಎಂದು ಟಿಕಾಯತ್ ಹೇಳಿದ್ದಾರೆ.
(No breakthrough in the talks held in Karnal between the Haryana government and farm leaders siege continues)
Published On - 11:21 am, Thu, 9 September 21