ಮೇಲುಕೋಟೆ ಜಾತ್ರೆ ವೇಳೆ ಹೆಜ್ಜೇನು ದಾಳಿ; 30ಕ್ಕೂ ಹೆಚ್ಚು ಜನರಿಗೆ ಗಾಯ, 7 ಜನರ ಸ್ಥಿತಿ ಗಂಭೀರ
ಅಷ್ಟತೀರ್ಥೋತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರು, ಅಷ್ಟತೀರ್ಥೋತ್ಸವವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದರು. ಈ ವೇಳೆ ಜೇನುಗೂಡಿದ್ದ ಮರದ ಸಮೀಪವೇ ಭಕ್ತರು ಕರ್ಪೂರ ಹಚ್ಚಿದ್ದರು. ಈ ಹಿನ್ನಲೆ ಕರ್ಪೂರದ ಹೊಗೆಯಿಂದ ಏಕಾಎಕಿ ಹೆಜ್ಜೇನು ದಾಳಿ ಮಾಡಿದೆ. ಕೂಡಲೇ ಭಕ್ತರು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಪಾಲಾಗಿ ಓಡಿದ್ದಾರೆ.
ಮಂಡ್ಯ, ನ.22: ಜಿಲ್ಲೆಯ ಪಾಂಡವಪುರ ತಾಲೂಕಿನ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆ(Melukote)ಯಲ್ಲಿ ಹೆಜ್ಜೇನು ದಾಳಿ (bee attack) ಮಾಡಿದ ಘಟನೆ ನಡೆದಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, 17 ಜನರ ಸ್ಥಿತಿ ಗಂಭೀರ ಆಗಿದೆ. ತೊಟ್ಟಿಲುಮಡು ಜಾತ್ರೆಯ ಅಷ್ಟತೀರ್ಥೋತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದ್ದು, ಕೂಡಲೇ ಅಸ್ವಸ್ತರಾದವರನ್ನು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.
ಜೇನುಗೂಡಿದ್ದ ಮರದ ಸಮೀಪವೇ ಕರ್ಪೂರ ಹಚ್ಚಿದ್ದ ಭಕ್ತರು
ಅಷ್ಟತೀರ್ಥೋತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರು, ಅಷ್ಟತೀರ್ಥೋತ್ಸವವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದರು. ಈ ವೇಳೆ ಜೇನುಗೂಡಿದ್ದ ಮರದ ಸಮೀಪವೇ ಭಕ್ತರು ಕರ್ಪೂರ ಹಚ್ಚಿದ್ದರು. ಈ ಹಿನ್ನಲೆ ಕರ್ಪೂರದ ಹೊಗೆಯಿಂದ ಏಕಾಎಕಿ ಹೆಜ್ಜೇನು ದಾಳಿ ಮಾಡಿದೆ. ಕೂಡಲೇ ಭಕ್ತರು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಪಾಲಾಗಿ ಓಡಿದ್ದಾರೆ. ಹೆಜ್ಜೇನು ದಾಳಿಗೊಳಗಾದವರಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಂಭೀರವಾಗಿ ಗಾಯಗೊಂಡ 17 ಜನರನ್ನು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:ಚಾಮರಾಜನಗರ: ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ: ಓರ್ವ ವ್ಯಕ್ತಿ ಸಾವು, 10 ಜನರಿಗೆ ಗಾಯ
ಇನ್ನು ಇದೇ ನವೆಂಬರ್ 20 ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿಯ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಾಮಕರಣ ಕಾರ್ಯಕ್ರಮದಲ್ಲಿ ಹೆಜ್ಜೇನು ದಾಳಿ ಮಾಡಿತ್ತು. ಇದರಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ, ವೀರಭದ್ರಯ್ಯ(47) ಮೃತ ವ್ಯಕ್ತಿ. ಜೊತೆಗೆ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Wed, 22 November 23