ಮಂಡ್ಯ: ಬಿಜೆಪಿ (BJP) ನಾಯಕರಿಗೆ ಅಭಿವೃದ್ಧಿ ಬೇಕಾಗಿಲ್ಲ. ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಣಕಿ ರಾಜಕೀಯವಾಗಿ ಯಶಸ್ವಿಗಳಿಸಲು ಹೊರಟ್ಟಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮಂಡ್ಯ ಜಿಲ್ಲೆ ಕರಾವಳಿ ಪ್ರದೇಶ ಅಲ್ಲ, ಜಿಲ್ಲೆಯ ಜನ ಶ್ರಮಜೀವಿಗಳು. ಕರಾವಳಿ ಪ್ರದೇಶದ ಜನರ ಜೀವನ ಶೈಲಿ, ವಾತಾವರಣವೇ ಬೇರೆ. ಜನರು ಬಿಜೆಪಿಯ ಕುತಂತ್ರಗಳಿಗೆ ತಲೆಬಾಗುವುದಿಲ್ಲ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದೇ ಬಿಜೆಪಿಗೆ ಮುಳುವಾಗುತ್ತೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಪಂಚಮಸಾಲಿ ಸಮುದಾಯವನ್ನ 2ಎಗೆ ಸೇರಿಸಲು ಹಿಂದುಳಿದ ವರ್ಗಗಳ ವಿರೋಧ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಯಾವ ಯಾವ ಸಮುದಾಯದ ಪರಿಸ್ಥಿತಿ ಏನಾಗಿದೆ. ಆರ್ಥಿಕ, ಶೈಕ್ಷಣಿಕ ಹಾಗೂ ಅವರ ಪ್ರತಿನಿತ್ಯದ ಆದಾಯದ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಮೀಸಲಾತಿ ನಿಗದಿ ಮಾಡಬೇಕು. ಇವಾಗ ಎಲ್ಲಾ ಸಮುದಾಯದಲ್ಲೂ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ಆರಂಭವಾಗಿದೆ ಎಂದರು.
ಇದನ್ನೂ ಓದಿ: ನಿಖಿಲ್‌ಗಾಗಿ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ, ತಾಯಿಯಿಂದಲೇ ಮಗನಿಗೆ ಪಟ್ಟಾಭಿಷೇಕ
ಪ್ರತಿಯೊಬ್ಬರ ಹಕ್ಕನ್ನು ಕೊಡುವುದು ಸರ್ಕಾರದ ಜವಾಬ್ದಾರಿ. ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಯಾವುದೋ ಒಂದು ಕಾರ್ಡ್ ಪ್ಲೇ ಮಾಡಿದರೆ ಉಪಯೋಗ ಇಲ್ಲ. ಕಾಟಾಚಾರವಾಗಿ ಏನೋ ಮಾಡಿ ಜನರನ್ನ ಮೆಚ್ಚಿಸುತ್ತೇವೆ ಅಂದ್ರೆ ಮುಂದಿನ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ. ಬಿಜೆಪಿಯ ಒಕ್ಕಲಿಗ ಮಂತ್ರಿಗಳು ಒಕ್ಕಲಿಗ ಸಮಾಜದ ಬಗ್ಗೆ ಕೂತು ಮಾತನಾಡಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಕೆ.ಆರ್.ಪೇಟೆ ಜೆಡಿಎಸ್ ಅಭ್ಯರ್ಥಿ ಬದಲಾವಣೆಗೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಯಾವುದೇ ಬದಲಾವಣೆ ಮಾಡೋದಿಲ್ಲ. ಯಾರಿಗಾದ್ರೂ ಅಸಮಾಧಾನ ಇದರೆ ಕೂತು ಸರಿಪಡಿಸುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ: ಡಿ.19ಕ್ಕೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ನಿಖಿಲ್, ಜಿಟಿಡಿ ಕುಟುಂಬಕ್ಕೆ 2 ಟಿಕೆಟ್ ಸಿಗುತ್ತಾ?
ನನಗೆ ಮಾತೃ ಪಕ್ಷ ಬಿಜೆಪಿ. ನಾನು 2023ಕ್ಕೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತೇನೆ. ನಮ್ಮ ಕ್ಷೇತ್ರ ಅಭಿವೃದ್ಧಿ ಆಗಿರೋದು ಬಿಜೆಪಿಯಿಂದ. ನನಗೆ ವೈಯಕ್ತಿಕವಾಗಿ ಬಿಜೆಪಿ ಪಕ್ಷದಿಂದ ಹೆಸರುಗಳಿಸಿದ್ದೇನೆ. 2023ರ ಚುನಾವಣೆಗೆ ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಪಕ್ಷ ಅಧಿಕಾರಕ್ಕೆ ತಂದ ಬಳಿಕ ಮಂತ್ರಿ ಆಗಬೇಕು ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು. ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ.
ಕುಮಾರಸ್ವಾಮಿ ಕೂಡ ಬಿಜೆಪಿಗೆ ಧನ್ಯವಾದ ಹೇಳಬೇಕು. ಬಿಜೆಪಿಯಿಂದ ಚನ್ನಪಟ್ಟಣ ಕ್ಷೇತ್ರ ಅಭಿವೃದ್ಧಿ ಆಗಿದ್ದು ಎಂದು ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಹೇಳಿದರು. ಭಾವನಾತ್ಮಕವಾಗಿ ಜನರನ್ನು ಸೆಳೆಯಲು ಹೆಚ್ಡಿಕೆ ಮುಂದಾಗಿದ್ದಾರೆ. ಹೆಚ್ಡಿಕೆ ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಮತ ಹಾಕಿಸಿಕೊಂಡಿದ್ದಾರೆ. ನನ್ನನ್ನು ತೀರಿಸುವವರು, ಉಳಿಸುವವರು ನನ್ನ ಕ್ಷೇತ್ರದ ಮತದಾರರು. 2023ಕ್ಕೆ ರಾಮನಗರ, ಚನ್ನಪಟ್ಟಣ ಕ್ಷೇತ್ರ ಜನ ತಕ್ಕ ಉತ್ತರ ಕೊಡುತ್ತಾರೆ. ಚುನಾವಣೆ ಬಂದರೆ ಕಣ್ಣೀರು ಹಾಕಿ, ಇದೇ ಕೊನೆ ಚುನಾವಣೆ ಅಂತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:16 pm, Fri, 23 December 22