ಕುಮಾರಸ್ವಾಮಿಗೆ ಯಾರ ಮೇಲು ನಂಬಿಕೆ‌ ಇಲ್ಲ, ಮೋದಿ ಅವರನ್ನೇ ಬೈದಿದ್ದಾರೆ: ಚಲುವರಾಯಸ್ವಾಮಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 30, 2024 | 4:13 PM

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ‘ಸಮಾಜ ತಲೆ ತಗ್ಗಿಸುವ ವಿಚಾರ ಇದು. ಈ ಪ್ರಕರಣವನ್ನು ಡೈವರ್ಟ್ ಮಾಡಲು ಜೆಡಿಎಸ್ ಅವರು ಮಾತಾಡುತ್ತಾರೆ. ಒಬ್ಬ ಹೆಣ್ಣು ಮಗಳನ್ನು ಬಳಿಸಿಕೊಂಡು‌ ಈ ರೀತಿ ಮಾಡಿದ್ರೆ, ಅವರ ಕುಟುಂಬ ಸೇರಿದಂತೆ ಸುತ್ತಮುತ್ತಲಿನ ವಾತಾವರಣದ ಮೇಲೂ ಪ್ರಭಾವ ಬೀರುತ್ತದೆ ಎಂದರು.

ಕುಮಾರಸ್ವಾಮಿಗೆ ಯಾರ ಮೇಲು ನಂಬಿಕೆ‌ ಇಲ್ಲ, ಮೋದಿ ಅವರನ್ನೇ ಬೈದಿದ್ದಾರೆ: ಚಲುವರಾಯಸ್ವಾಮಿ
ಚಲುವರಾಯಸ್ವಾಮಿ
Follow us on

ಮಂಡ್ಯ, ಮೇ.30: ಹೆಚ್​.ಡಿ ಕುಮಾರಸ್ವಾಮಿ(H. D. Kumaraswamy)ಗೆ ಯಾರ ಮೇಲೂ ನಂಬಿಕೆ‌ ಇಲ್ಲ, ಮೋದಿ ಅವರನ್ನೇ ಹಿಯಾಳಿಸಿ ಬೈದಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ(Chaluvaraya Swamy) ಅವರು ಹೇಳಿದರು. ಮಂಡ್ಯದಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್, ಬಿಜೆಪಿ, ಕಾಂಗ್ರೆಸ್ ಎಲ್ಲರಿಗೂ ಬೈದಿದ್ದಾರೆ. ಕುಮಾರಸ್ವಾಮಿ ಯಾರನ್ನು ಅನುಮಾನದಲ್ಲಿ ನೋಡುವ ವ್ಯಕ್ತಿ ಅಲ್ಲ ಎಂದಿದ್ದಾರೆ.

ಇದೇ ವೇಳೆ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ‘ನಾನು ಈ ಬಗ್ಗೆ ಚರ್ಚೆ ಮಾಡಲ್ಲ ಅಂತಾ ಹೇಳಿದ್ದೇನೆ. ವಾಟ್ಸ್‌ ಆಪ್​ನಲ್ಲಿ ಜೈ ಜೆಡಿಎಸ್, ಜೈ ಕುಮಾರಣ್ಣ, ಜೈ ರೇವಣ್ಣ, ಜೈ ಪ್ರಜ್ವಲ್ ಅಂತಾರೆ, ಇದನ್ನು ನೋಡಿದಾಗ ಏನನ್ನು ಹೇಳೋದು. ಸಮಾಜ ತಲೆ ತಗ್ಗಿಸುವ ವಿಚಾರ ಇದು. ಈ ಪ್ರಕರಣವನ್ನು ಡೈವರ್ಟ್ ಮಾಡಲು ಜೆಡಿಎಸ್ ಅವರು ಮಾತಾಡುತ್ತಾರೆ. ಒಬ್ಬ ಹೆಣ್ಣು ಮಗಳನ್ನು ಬಳಿಸಿಕೊಂಡು‌ ಈ ರೀತಿ ಮಾಡಿದ್ರೆ, ಅವರ ಕುಟುಂಬ ಸೇರಿದಂತೆ ಸುತ್ತಮುತ್ತಲಿನ ವಾತಾವರಣದ ಮೇಲೂ ಪ್ರಭಾವ ಬೀರುತ್ತೆ.

ಇದನ್ನೂ ಓದಿ:ಪ್ರಜ್ವಲ್​​ನನ್ನು ವಿದೇಶಕ್ಕೆ ಕಳಿಸಿದ್ದೇ ದೇವೇಗೌಡರು ಎಂದಿದ್ದ ಸಿದ್ದರಾಮಯ್ಯಗೆ ಹೆಚ್​​ಡಿ ಕುಮಾರಸ್ವಾಮಿ ತಿರುಗೇಟು

ಕಾನೂನು ಬದ್ಧವಾಗಿ ಏನು ಆಗುತ್ತೆ ನೋಡೋಣಾ, ನ್ಯಾಯಾಲಯಕ್ಕೆ ಎಲ್ಲರೂ ಸಹ ತಲೆ ಭಾಗಬೇಕಾಗುತ್ತದೆ. ನಮ್ಮ ಸರ್ಕಾರದಿಂದ ಪಕ್ಷಪಾತವಿಲ್ಲದೆ ತನಿಖೆ ಮಾಡಲಾಗುತ್ತದೆ. ಎಸ್‌ಐಟಿ ತನಿಖೆ ಮಾಡಿ ನ್ಯಾಯಾಲಯಕ್ಕೆ ನೀಡುತ್ತೆ. ನ್ಯಾಯಾಲಯ ಮುಂದೆ ಎಲ್ಲವೂ ಇದೆ. ಇದು ಚರ್ಚೆ ಮಾಡುವ ವಿಚಾರವಲ್ಲ. ಕಾನೂನು ಬದ್ಧವಾಗಿ ಕ್ರಮವಾಗಬೇಕು. ಇಷ್ಟೊತ್ತಿಗೆ ಎಸ್‌ಐಟಿ ಮುಂದೆ ಪ್ರಜ್ವಲ್‌ನ್ನು‌ ಕುಮಾರಸ್ವಾಮಿ ಕುಟುಂಬ ತಂದು ನಿಲ್ಲಿಸಬೇಕಿತ್ತು. ಅದನ್ನು ಬಿಟ್ಟು ಮಾತಾಡೋದು ಅಲ್ಲ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ