ಮಂಡ್ಯದಲ್ಲಿ ಇನ್ನೂ ಜೀವಂತವಾಗಿದೆ ಬಾಲ ಕಾರ್ಮಿಕ ಪದ್ದತಿ, ಎರಡೇ ದಿನಕ್ಕೆ ಕಿತ್ತು ಬಂದ ಡಾಂಬಾರು ಸರಿ ಮಾಡಲು ಹೋಗಿ ಎಡವಟ್ಟು

ಮಂಡ್ಯ ಜಿಲ್ಲೆಯಲ್ಲಿ ಅಪ್ರಪ್ತಾ ಬಾಲಕನನ್ನು ರಸ್ತೆ ಡಾಂಬರೀಕರಣ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಳಪೆ ಕಾಮಗಾರಿ ತಪ್ಪು ಸರಿ ಮಾಡಿಕೊಳ್ಳುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಮಂಡ್ಯದಲ್ಲಿ ಇನ್ನೂ ಜೀವಂತವಾಗಿದೆ ಬಾಲ ಕಾರ್ಮಿಕ ಪದ್ದತಿ, ಎರಡೇ ದಿನಕ್ಕೆ ಕಿತ್ತು ಬಂದ ಡಾಂಬಾರು ಸರಿ ಮಾಡಲು ಹೋಗಿ ಎಡವಟ್ಟು
ಅಪ್ರಪ್ತಾ ಬಾಲಕನನ್ನು ರಸ್ತೆ ಡಾಂಬರೀಕರಣ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ
Updated By: ಆಯೇಷಾ ಬಾನು

Updated on: Nov 19, 2022 | 9:41 AM

ಮಂಡ್ಯ: ಈ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ದತಿ ಇನ್ನು ಜೀವಂತವಾಗಿದೆ. ಅಪ್ರಪ್ತಾ ಬಾಲಕನನ್ನು ರಸ್ತೆ ಡಾಂಬರೀಕರಣ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಳಪೆ ಕಾಮಗಾರಿಯನ್ನ ಪ್ರಶ್ನಿಸಿ ಗ್ರಾಮಸ್ಥರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ಟಿವಿ9 ಕೂಡ ಸುದ್ದಿ ಪ್ರಸಾರ ಮಾಡಿತ್ತು. ಇದೇ ಬೆನ್ನಲ್ಲೆ ಎಚ್ಚೆತ್ತ ಕಾಂಟ್ರ್ಯಾಕ್ಟರ್ ಮತ್ತೆ ರಸ್ತೆಗೆ ಡಾಂಬರೀಕರಣ ಮಾಡಿಸಿದ್ದಾರೆ. ಈ ವೇಳೆ ಬಾಲಕ ಡಾಂಬರೀಕರಣ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ. ಟಿವಿ9 ಕ್ಯಾಮರಾ ನೋಡುತ್ತಿದ್ದಂತೆ ಬಾಲಕ ಓಡಿದ್ದಾನೆ.

ಎರಡೇ ದಿನದಲ್ಲಿ ಕಿತ್ತು ಬಂದ ಡಾಂಬಾರು ಗ್ರಾಮಸ್ದರ ಆಕ್ರೋಶ

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ನಾಯಕನಹಳ್ಳಿಯಲ್ಲಿ ಕಾಂಟ್ರ್ಯಾಕ್ಟರ್ ಮಾಡಿದ ಎಡವಟ್ಟಿನಿಂದ ಜನರು ಆಕ್ರೋಶಗೊಂಡಿದ್ದರು. ಹೀಗಾಗಿ ಮೊಬೈಲ್ ನಲ್ಲಿ ರಸ್ತೆಯ ಅವ್ಯವಸ್ಥೆಯನ್ನ ಸೆರೆ ಹಿಡಿದಿದ್ದರು. ಯಾವಾಗ ನಾಯಕನಹಳ್ಳಿ ಗ್ರಾಮಸ್ಥರು ಆಕ್ರೋಶವನ್ನ ವ್ಯಕ್ತಪಡಿಸಿದರೋ ತಡ ಮಾಡದ ಕಂಟ್ರ್ಯಾಕ್ಟರ್ ಈಗ ಮತ್ತೆ ರಸ್ತೆಗೆ ಹೊಸದಾಗಿ ಡಾಂಬಾರು ಹಾಕುತ್ತಿದ್ದಾರೆ. ಗ್ರಾಮಸ್ಥರ ಆಗ್ರಹದಂತೆ ಈಗ ಡಾಂಬಾರು ಹಾಕೋದ್ರ ಮೂಲಕ ತನ್ನ ತಪ್ಪನ್ನ ಸರಿ ಪಡಿಸಿಕೊಳ್ಳುತ್ತಿದ್ದಾರೆ. ಆದ್ರೆ ತಪ್ಪು ಸರಿ ಮಾಡಿಕೊಳ್ಳುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅಪ್ರಪ್ತನನ್ನ ರಸ್ತೆ ಡಾಂಬರೀಕರಣ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಇಂಜಿನಿಯರ್ ಸಾಹೇಬ್ರು ಮಾಡಿದ ಎಡವಟ್ಟು ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದೆ. ಟಿವಿ9 ಕ್ಯಾಮರಾ ಕಂಡ ತಕ್ಷಣ ಬಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಇದನ್ನೂ ಓದಿ: ಮೈಸೂರು-ಬೆಂಗಳೂರು ಹೆದ್ದಾರಿ ಕಳಪೆ ಕಾಮಗಾರಿಯನ್ನು ಸಂಸದೆ ಸುಮಲತಾ ಅಂಬರೀಷ್ ತರಾಟೆಗೆ ತೆಗೆದುಕೊಂಡರು