KRS ಸುತ್ತಮುತ್ತ ಗಣಿಗಾರಿಕೆಗೆ ಬ್ರೇಕ್ ಹಾಕಲು ಬಿಎಸ್ವೈ ಗ್ರೀನ್ ಸಿಗ್ನಲ್
ಮಂಡ್ಯ: ಕೆಆರ್ಎಸ್.. ಜಿಲ್ಲೆಯ ಜೀವನಾಡಿ. ಲಕ್ಷಾಂತರ ರೈತರ ಜಮೀನುಗಳಿಗೆ ನೀರುಣಿಸುತ್ತೆ. ಜಾನುವಾರುಗಳ ದಾಹ ತಣಿಸುತ್ತೆ. ಪ್ರವಾಸಿಗರನ್ನು ತನ್ನತ್ತ ಸೆಳೆದು ಕನ್ನಡ ನಾಡಿನ ಹಿರಿಮೆ ಹೆಚ್ಚಿಸುತ್ತೆ. ಇಂಥಾ ಡ್ಯಾಂಗೆ ಗಣಿಗಾರಿಕೆ ಕಂಟಕವಾಗಿದೆ. ಬೇಬಿ ಬೆಟ್ಟದಲ್ಲಿ ನಡೆಯೋ ಕಲ್ಲು ಗಣಿಗಾರಿಕೆಯಿಂದ ಜಲಾಶಯಕ್ಕೆ ಆಪಾಯ ಎದುರಾಗಿದೆ ಅನ್ನೋ ಮಾತುಗಳು ಕೇಳಿಬಂದಿದ್ವು. ಆದ್ರೀಗ ಗಣಿಗಾರಿಕೆಗೆ ಸಿಎಂ ಬ್ರೇಕ್ ಹಾಕೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ: ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆಯಿಂದ ಕೆಆರ್ಎಸ್ಗೆ ಅಪಾಯವಿದೆ ಅಂತಾ ಮೊದಲಿಂದ್ಲೂ ಆರೋಪಗಳು ಕೇಳಿಬಂದಿದ್ವು. […]
ಮಂಡ್ಯ: ಕೆಆರ್ಎಸ್.. ಜಿಲ್ಲೆಯ ಜೀವನಾಡಿ. ಲಕ್ಷಾಂತರ ರೈತರ ಜಮೀನುಗಳಿಗೆ ನೀರುಣಿಸುತ್ತೆ. ಜಾನುವಾರುಗಳ ದಾಹ ತಣಿಸುತ್ತೆ. ಪ್ರವಾಸಿಗರನ್ನು ತನ್ನತ್ತ ಸೆಳೆದು ಕನ್ನಡ ನಾಡಿನ ಹಿರಿಮೆ ಹೆಚ್ಚಿಸುತ್ತೆ. ಇಂಥಾ ಡ್ಯಾಂಗೆ ಗಣಿಗಾರಿಕೆ ಕಂಟಕವಾಗಿದೆ. ಬೇಬಿ ಬೆಟ್ಟದಲ್ಲಿ ನಡೆಯೋ ಕಲ್ಲು ಗಣಿಗಾರಿಕೆಯಿಂದ ಜಲಾಶಯಕ್ಕೆ ಆಪಾಯ ಎದುರಾಗಿದೆ ಅನ್ನೋ ಮಾತುಗಳು ಕೇಳಿಬಂದಿದ್ವು. ಆದ್ರೀಗ ಗಣಿಗಾರಿಕೆಗೆ ಸಿಎಂ ಬ್ರೇಕ್ ಹಾಕೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ: ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆಯಿಂದ ಕೆಆರ್ಎಸ್ಗೆ ಅಪಾಯವಿದೆ ಅಂತಾ ಮೊದಲಿಂದ್ಲೂ ಆರೋಪಗಳು ಕೇಳಿಬಂದಿದ್ವು. ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಕೆಆರ್ಎಸ್ ಡ್ಯಾಂ ಬಳಿ ಭಾರಿ ಪ್ರಮಾಣದ ಶಬ್ದ ಕೇಳಿ ಬಂದಿತ್ತು. ಇದಕ್ಕೆ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಿಷೇಧಿತ ವಸ್ತುಗಳನ್ನ ಬಳಕೆ ಮಾಡಿ ಕಲ್ಲುಗಳನ್ನ ಸಿಡಿಸುತ್ತಿರುವುದೇ ಕಾರಣ ಅಂತಾ ವರದಿ ಬಂದಿತ್ತು. ಶ್ರೀರಂಗಪಟ್ಟಣದ ಅಂದಿನ ಡಿವೈಎಸ್ಪಿ ವಿಶ್ವನಾಥ್ ಕೂಡ ಗಣಿಗಾರಿಕೆ ನಿಷೇಧಿಸ್ಬೇಕು ಅಂದಿದ್ರು.
ಕಳೆದ ತಿಂಗಳು ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಗಣಿಗಾರಿಕೆ ನಿಷೇಧಿಸುವ ಸಂಬಂಧ ವರದಿ ಕೇಳಿದ್ರು. ಈ ಬಗ್ಗೆ ಟಿವಿ9 ಕೂಡ ನಿರಂತರ ವರದಿ ಪ್ರಸಾರ ಮಾಡಿತ್ತು. ಈಗ ಇದಕ್ಕೆ ಬ್ರೇಕ್ ಹಾಕೋಕೆ ಸ್ವತಃ ಸಿಎಂ ಯಡಿಯೂರಪ್ಪನವರೇ ಮುಂದಾಗಿದ್ದಾರೆ. ಕೆಆರ್ಎಸ್ ಬಳಿ ಗಣಿಗಾರಿಕೆ ಸ್ಥಗಿತಗೊಳಿಸಿ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
50 ಕ್ಕೂ ಹೆಚ್ಚು ಪ್ರಭಾವಿಗಳಿಂದ ಗಣಿಗಾರಿಕೆ? ಪಾಂಡವಪುರ ತಾಲೂಕಿನಲ್ಲಿರುವ ಈ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ 50 ಕ್ಕೂ ಹೆಚ್ಚು ಪ್ರಭಾವಿಗಳು ಗಣಿಗಾರಿಕೆ ನಡೆಸುತ್ತಿದ್ದಾರೆ ಅನ್ನೋ ಆರೋಪವಿದೆ. ಇದ್ರಿಂದ ಡ್ಯಾಂಗೆ ಅಪಾಯವಿದೆ ಅಂತಾ ಎರಡ್ಮೂರು ವರದಿಗಳು ಬಂದ್ರೂ, ಜಿಲ್ಲಾಡಳಿತದಿಂದ ಇದಕ್ಕೆ ಬ್ರೇಕ್ ಹಾಕೋಕೆ ಸಾಧ್ಯವಾಗಿರಲಿಲ್ಲ. ಯಾಕಂದ್ರೆ ಜಿಲ್ಲಾಡಳಿತ ಕೆಲವು ದಿನಗಳ ಕಾಲ 144 ನಿಷೇಧಾಜ್ಞೆ ಜಾರಿಗೊಳಿಸಿದ್ರೆ, ಗಣಿಗಾರಿಕೆ ಮಾಲೀಕರು ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ಮತ್ತೆ ಮುಂದುವರಿಸುತ್ತಿದ್ರು. ಇದ್ರಿಂದಾಗಿ ಶ್ರೀ ರಾಮಯೋಗೇಶ್ವರ ಮಠದ ಲಿಂಗೈಕ್ಯ ಶ್ರೀ ಸದಾಶಿವ ಸ್ವಾಮೀಜಿಗಳ ಗದ್ದುಗೆ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ.
ಒಟ್ನಲ್ಲಿ, ಸರ್ಕಾರ ಗಣಿಗಾರಿಕೆ ನಿಷೇಧಕ್ಕೆ ಮುಂದಾಗುತ್ತಿಲ್ಲ ಅನ್ನೋ ಆರೋಪಗಳಿಗೆ ಸದ್ಯ ಸಿಎಂ ಯಡಿಯೂರಪ್ಪ ಅಂತ್ಯಹಾಡಿದ್ದಾರೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಸೂಚನೆ ನೀಡಿದ್ದಾರೆ. ಇನ್ಮುಂದಾದ್ರೂ ಕೆಆರ್ಎಸ್ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಗೆ ಬ್ರೇಕ್ ಬೀಳುತ್ತಾ ಕಾದು ನೋಡ್ಬೇಕು.