ಮಂಡ್ಯದಲ್ಲಿ ಹಳ್ಳಿಕಾರ್ ತಳಿ ಎತ್ತುಗಳ ಕುರಿತು ಚರ್ಚಾಗೋಷ್ಠಿ ಜೋರು, ಪೊಲೀಸರ ಮಧ್ಯಪ್ರವೇಶ

| Updated By: Rakesh Nayak Manchi

Updated on: Dec 10, 2023 | 5:28 PM

ಕೆಲವು ವರ್ಷದ ಹಿಂದೆ ವರ್ತೂರು ಸಂತೋಷ್ ‘ಹಳ್ಳಿಕಾರ್ ಒಡೆಯ’ ಎಂದು ಬಿಂಬಿಸಿಕೊಂಡು ಗೊಂದಲ ಸೃಷ್ಟಿಸುತ್ತಿದ್ದಾರೆ. ಆ ಮೂಲಕ ಹಳ್ಳಿಕಾರ್​ ಹೆಸರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಮಂಡ್ಯದ ರೈತರು ಆರೋಪಿಸಿದ್ದರು. ಅಲ್ಲದೆ, ರೈತರು ಹಳ್ಳಿಕಾರ್ ಕುರಿತು ಚರ್ಚಾಗೋಷ್ಠಿಯನ್ನು ಆಯೋಜಿಸಲಾಗಿದ್ದು, ವರ್ತೂರ್ ಪರ ರೈತರೂ ಭಾಗಿಯಾಗಿದ್ದಾರೆ.

ಮಂಡ್ಯದಲ್ಲಿ ಹಳ್ಳಿಕಾರ್ ತಳಿ ಎತ್ತುಗಳ ಕುರಿತು ಚರ್ಚಾಗೋಷ್ಠಿ ಜೋರು, ಪೊಲೀಸರ ಮಧ್ಯಪ್ರವೇಶ
ಹಳ್ಳಿಕಾರ್ ತಳಿ ಎತ್ತುಗಳ ಕುರಿತು ಮಂಡ್ಯದಲ್ಲಿ ವರ್ತೂರ್ ಸಂತೋಷ್ ಬೆಂಬಲಿಗರು ಹಾಗೂ ಹಿರಿಯ ರೈತರ ನಡುವೆ ಚರ್ಚಾಗೋಷ್ಠಿ
Follow us on

ಮಂಡ್ಯ, ಡಿ.10: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್(Varthur Santhosh) ಅವರು ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಹಳ್ಳಿಕಾರ್ (Hallikar) ಹೆಸರನ್ನು ಬಳಸಿಕೊಂಡ್ರಾ ಎಂಬ ಪ್ರಶ್ನೆ ಮೂಡಿದ್ದು, ‘ಹಳ್ಳಿಕಾರ್ ಒಡೆಯ’ ಎಂಬ ಬಿರುದಿನ ವಿರುದ್ಧ ಸಿಡಿದೆದ್ದ ಮಂಡ್ಯದ ರೈತರು ಚರ್ಚಾಗೋಷ್ಠಿ ಆಯೋಜಿಸಿದ್ದು, ವರ್ತೂರ್ ಪರ ರೈತರು ಹಾಗೂ ಹಿರಿಯ ರೈತರ ನಡುವೆ ಭಾರೀ ಚರ್ಚೆ ನಡೆಯುತ್ತಿದೆ.

ಚರ್ಚಾಗೋಷ್ಠಿಯಲ್ಲಿ, ಮಂಡ್ಯದಲ್ಲಿ ಹಿಂದೆಯಿಂದಲೂ ಹಳ್ಳಿಕಾರ್ ತಳಿ ಎತ್ತುಗಳನ್ನ ಸಾಕಿಕೊಂಡು ಬರುತ್ತಿದ್ದಾರೆ ಎಂದ ರೈತ ಸುಧಾಕರ್ ಹೇಳಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ವರ್ತೂರ್ ಸಂತೋಷ್ ಬೆಂಬಲಿಗ ರೈತರು, ಅದ್ಯಾರು ಮಂಡ್ಯದಲ್ಲಿ ಹಳ್ಳಿಕಾರ್ ಎತ್ತು ಕಟ್ಟಿದ್ದರು, ಮೊದಲು ಹೇಳಿ ಎಂದಿದ್ದಾರೆ.

ಈ ವೇಳೆ ನಾನು ಐದು‌ ವರ್ಷ ಇದ್ದಾಗಿನಿಂದಲೂ ಎತ್ತು ಸಾಕಿದ್ದೇವೆ. ಮಂಡ್ಯದ ಬಹಳಷ್ಟು ಜನರು ಹಳ್ಳಿಕಾರ್ ಎತ್ತು ಸಾಕಿದ್ದಾರೆ. ಹಳ್ಳಿಕಾರ್ ತಳಿ ಸಂರಕ್ಷರು ಕೆಲವರು ಮೃತಪಟ್ಟಿದ್ದಾರೆ. ಇನ್ನು ಕೆಲವರು ಈಗಲೂ ಹಳ್ಳಿಕಾರ್ ಎತ್ತು ಸಾಕುತ್ತಿದ್ದಾರೆ ಎಂದು ಸುಧಾಕರ್ ಅವರು ವರ್ತೂರು ಸಂತೋಷ್ ಬೆಂಬಲಿಗರಿಗೆ ತಿಳಿ ಹೇಳಿದರು.

ಇದನ್ನೂ ಓದಿ: ವರ್ತೂರ್ ಸಂತೋಷ್​ನ ಮನವೊಲಿಸಲು ಭಾಗ್ಯಾಳ ಕರೆಸಿದ ಬಿಗ್ ಬಾಸ್

ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್​ನಲ್ಲಿ ಹೀಗೆ ಆರಂಭವಾದ ಚರ್ಚೆ ವರ್ತೂರ್ ಸಂತೋಷ್ ಬೆಂಬಲಿಗರು ಹಾಗೂ ರೈತರ ನಡುವೆ ಭಾರೀ ಚರ್ಚೆ ಏರ್ಪಟ್ಟಿತು. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿದ ಹಿನ್ನೆಲೆ ವಾಗ್ವಾದ ತಣ್ಣಗಾಯಿತು. ಚರ್ಚಾಗೋಷ್ಠಿಯಲ್ಲಿ ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಯ ಹಿರಿಯ‌ ಹಳ್ಳಿಕಾರ್ ತಳಿ ಸಂರಕ್ಷಕರು, ರೈತರು ಭಾಗಿಯಾಗಿದ್ದಾರೆ.

ಏನಿದು ಹಳ್ಳಿಕಾರ್ ವಿವಾದ?

ಹುಲಿ ಉಗುರು ಧರಿಸಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರ ವಿವಾಹದ ವಿಚಾರ ಜೋರಾಗಿಯೇ ಚರ್ಚೆ ನಡೆದಿತ್ತು. ಇದೀಗ ಅವರಿಗೆ ಹಳ್ಳಿಕಾರ್ ಒಡೆಯ ಎಂಬ ಹೆಸರು ಕೊಟ್ಟ ಹಿನ್ನೆಲೆ ಆ ತಳಿಯ ಗೋವು ಸಾಕಾಣಿಕೆ ಮಾಡುತ್ತಿರುವ ರೈತರು ಸಿಡಿದೆದ್ದಿದ್ದಾರೆ.

ಹಳ್ಳಿಕಾರ್ ತಳಿ ಹೆಸರಿಗೆ ವರ್ತೂರ್ ಸಂತೋಷ್ ಅವರಿಂದ ಅಪಮಾನ ಆಗಿದೆ. ಹಳ್ಳಿಕಾರ್ ಹೆಸರು ಒಂದು ಇತಿಹಾಸ ಇರುವಂತಹದ್ದು. ಅಂತಹ ಹೆಸರಿಗೆ ಅಪಮಾನ ಮಾಡುವುದು ಸರಿಯಲ್ಲ. ತಲೆಮಾರಿನಿಂದ ನಮ್ಮ ಹಿರಿಯರು ಹಳ್ಳಿಕಾರ್ ಗೋ ತಳಿ ಬೆಳೆಸಿಕೊಂಡು ಬಂದಿದ್ದಾರೆ. ಹಳ್ಳಿಕಾರ್ ಒಡೆಯ ಎನ್ನುವುದಕ್ಕೆ ಒಂದು ಮಹತ್ವ ಇದೆ ಎಂದು ರೈತ ರವಿ ಪಾಟೀಲ್ ಹೇಳಿದ್ದರು.

ಹಳ್ಳಿಕಾರ್ ತಳಿಗೆ ನೂರಾರು ವರ್ಷಗಳ ಇತಿಹಾಸ ಇದೆ. ರಾಜ ಮಹಾರಾಜರು ತಳಿ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಆದರೆ ವರ್ತೂರ್ ತಾನೊಬ್ಬನೇ ಹಳ್ಳಿಕಾರ್ ತಳಿ‌ ಸಂರಕ್ಷಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಅವರಿಗವರೇ ಹಳ್ಳಿಕಾರ್ ಒಡೆಯ ಎಂದು ಬಿರುದು ಪಡೆದಿದ್ದಾರೆ. ಆ ಮೂಲಕ ಹಳ್ಳಿಕಾರ್ ಹೆಸರಿಗೆ ಅಪಮಾನವಾಗಿದೆ. ಹಳ್ಳಿಕಾರ್ ಒಡೆಯ ಹೆಸರಿಗೆ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೆ, ಹಳ್ಳಿಕಾರ್ ತಳಿ ಎತ್ತುಗಳ ಕುರಿತು ಚರ್ಚೆ ನಡೆಸಲು ಚರ್ಚಾಗೋಷ್ಠಿ ಆಯೋಜಿಸಿ ವರ್ತೂರ್ ಸಂತೋಷ್ ಅವರಿಗೂ ಆಹ್ವಾನ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ