ವರ್ತೂರ್ ಸಂತೋಷ್​ನ ಮನವೊಲಿಸಲು ಭಾಗ್ಯಾಳ ಕರೆಸಿದ ಬಿಗ್ ಬಾಸ್

ಈ ಸೀಸನ್​ನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಥಮ್, ಶಾಸಕ ಪ್ರದೀಪ್ ಈಶ್ವರ್, ನಟಿ ತಾರಾ ಹಾಗೂ ‘ಬೃಂದಾವನ’ ಧಾರಾವಾಹಿ ತಂಡದವರು ಬಂದು ಹೋಗಿದ್ದಾರೆ. ಈಗ ಸುಷ್ಮಾ ರಾವ್ ಕೂಡ ದೊಡ್ಮನೆಗೆ ಬಂದಿದ್ದಾರೆ. ಅವರು ಸಂತೋಷ್ ಅವರ ಮನ ಒಲಿಸಲು ಪ್ರಯತ್ನಿಸಿದ್ದಾರೆ.

ವರ್ತೂರ್ ಸಂತೋಷ್​ನ ಮನವೊಲಿಸಲು ಭಾಗ್ಯಾಳ ಕರೆಸಿದ ಬಿಗ್ ಬಾಸ್
ಬಿಗ್ ಬಾಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 13, 2023 | 8:33 AM

ವರ್ತೂರು ಸಂತೋಷ್ ಅವರು ಬಿಗ್ ಬಾಸ್ (Bigg Boss) ಮನೆಯಿಂದ ಹೊರಹೋಗುವುದಾಗಿ ಹಠ ಹಿಡಿದು ಕುಳಿತಿದ್ದಾರೆ. ಅವರನ್ನು ಮನ ಒಲಿಸಲು ಮೊದಲು ಸುದೀಪ್ ಪ್ರಯತ್ನಿಸಿದರು. ಆದರೆ, ಇದು ಸಾಧ್ಯವಾಗಲಿಲ್ಲ. ಆ ಬಳಿಕ ಅವರು ವೇದಿಕೆಯಿಂದ ಹೊರ ನಡೆದರು. ಮನೆ ಮಂದಿ ಕೂಡ ವರ್ತೂರು ಸಂತೋಷ್ ಅವರ ಮನ ಒಲಿಸಲು ಪ್ರಯತ್ನಿಸಿದರು. ಬಳಿಕ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಭಾಗ್ಯ ಪಾತ್ರ ಮಾಡುತ್ತಿರುವ ಸುಷ್ಮಾ ರಾವ್ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ!

ಬಿಗ್ ಬಾಸ್​ನಲ್ಲಿ ಹೊರಗಿನಿಂದ ಅತಿಥಿಗಳು ಬರೋದು ಅಪರೂಪಕ್ಕೊಮ್ಮೆ. ಆದರೆ, ಈ ಬಾರಿಯ ಬಿಗ್ ಬಾಸ್ ಆ ರೀತಿಯಲ್ಲಿ ಇಲ್ಲ. ಈ ಸೀಸನ್​ನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಥಮ್, ಶಾಸಕ ಪ್ರದೀಪ್ ಈಶ್ವರ್, ನಟಿ ತಾರಾ ಹಾಗೂ ‘ಬೃಂದಾವನ’ ಧಾರಾವಾಹಿ ತಂಡದವರು ಬಂದು ಹೋಗಿದ್ದಾರೆ. ಈಗ ಸುಷ್ಮಾ ರಾವ್ ಕೂಡ ದೊಡ್ಮನೆಗೆ ಬಂದಿದ್ದಾರೆ. ಅವರು ಸಂತೋಷ್ ಅವರ ಮನ ಒಲಿಸಲು ಪ್ರಯತ್ನಿಸಿದ್ದಾರೆ.

ಸುದೀಪ್ ಅವರು ಸಂತೋಷ್ ಅವರ ಬಳಿ ಬಿಗ್ ಬಾಸ್​ನಲ್ಲೇ ಇರುವಂತೆ ಕೋರಿದರು. ಆದರೆ, ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದರು. ಇದು ಸುದೀಪ್​ಗೆ ಬೇಸರ ಮೂಡಿಸಿದೆ. 34 ಲಕ್ಷ ವೋಟ್ ಬಿದ್ದ ಹೊರತಾಗಿಯೂ ತಾವು ಹೊರ ನಡೆಯುವುದಾಗಿ ಅವರು ಹೇಳಿದ್ದಾರೆ. ಹೀಗೇಕೆ ಎನ್ನುವ ಪ್ರಶ್ನೆ ಮನೆ ಮಂದಿಗೆ ಮೂಡಿದೆ. ‘ಹೊರಗೆ ಎಲ್ಲವೂ ಸಹಜವಾಗಿದೆ’ ಎಂದು ಸುದೀಪ್ ಹೇಳಿದರೂ ವರ್ತೂರು ಸಂತೋಷ್ ಅವರು ಒಪ್ಪಲು ರೆಡಿ ಇರಲಿಲ್ಲ. ಕೊನೆಗೆ ಸುದೀಪ್ ಅವರು ವೇದಿಕೆಯಿಂದ ನಡೆದ ಬಳಿಕ ದೊಡ್ಮನೆಗೆ ಸುಷ್ಮಾ ರಾವ್ ಬಂದಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಹಠ ಕಾಣುತ್ತಿಲ್ಲ’; ಎಂದ ಸುದೀಪ್; ‘ನನಗೆ ಅದು ತುಂಬಾ ಕಾಡುತ್ತಿದೆ’ ಎಂದ ಸಂತೋಷ್

‘ನಾನು ನಿನ್ನ ಅಕ್ಕ ಎಂದುಕೋ. ನಿನ್ನಿಂದ ಆಗಲ್ಲ ಎನ್ನೋದನ್ನು ತೆಗೆದುಹಾಕು’ ಎಂದು ಸುಷ್ಮಾ ಕೇಳಿಕೊಂಡಿದ್ದಾರೆ. ‘ನನ್ನ ಕೈಯಲ್ಲಿ ಆಗುತ್ತಿಲ್ಲ’ ಎಂದು ಸಂತೋಷ್ ಪದೇಪದೇ ಹೇಳುತ್ತಿದ್ದಾರೆ. ಡ್ರೋನ್ ಪ್ರತಾಪ್ ಊಟ ತಂದುಕೊಟ್ಟರೂ ಅದನ್ನು ಅವರು ಸ್ವೀಕರಿಸಲಿಲ್ಲ. ಇಂದಿನ ಎಪಿಸೋಡ್​ನಲ್ಲಿ ಅವರು ಇರುತ್ತಾರಾ ಅಥವಾ ಹೋಗುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:32 am, Mon, 13 November 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು