Sign In

By signing in or creating an account, you agree with Associated Broadcasting Company's Terms & Conditions and Privacy Policy.

Ankita Lokhande: ಬಿಗ್ ಬಾಸ್​ನಲ್ಲಿ ಪತಿ ವಿರುದ್ಧವೇ ತಿರುಗಿಬಿದ್ದ ಪತ್ನಿ; ಶೋ ಪೂರ್ಣಗೊಳ್ಳುವುದರೊಳಗೇ ವಿಚ್ಛೇದನ?

ಬಿಗ್ ಬಾಸ್​ಗೆ ಬಂದ ನಂತರದಲ್ಲಿ ಸ್ವಾರ್ಥ ಹೆಚ್ಚಾಗುತ್ತದೆ. ಅದೆಷ್ಟೇ ಆಪ್ತತೆ ಬೆಳೆದಿದ್ದರೂ ತಾವು ಗೆಲ್ಲಬೇಕು ಎನ್ನುವ ಛಲ ಬರುತ್ತದೆ. ಇದಕ್ಕೆ ವಿಕ್ಕಿ ಜೈನ್ ಹಾಗೂ ಅಂಕಿತಾ ಲೋಖಂಡೆ ಉತ್ತಮ ಉದಾಹರಣೆ. ಇಬ್ಬರೂ ಪತಿ-ಪತ್ನಿ ಆದ ಹೊರತಾಗಿಯೂ ಇವರ ಮಧ್ಯೆ ಭರ್ಜರಿ ಫೈಟ್ ಏರ್ಪಡುತ್ತಿದೆ. ಇವರು ಆಗಾಗ ಕಿತ್ತಾಡಿಕೊಳ್ಳುತ್ತಿದ್ದಾರೆ.

Ankita Lokhande: ಬಿಗ್ ಬಾಸ್​ನಲ್ಲಿ ಪತಿ ವಿರುದ್ಧವೇ ತಿರುಗಿಬಿದ್ದ ಪತ್ನಿ; ಶೋ ಪೂರ್ಣಗೊಳ್ಳುವುದರೊಳಗೇ ವಿಚ್ಛೇದನ?
ವಿಕ್ಕಿ ಜೈನ್​, ಅಂಕಿತಾ ಲೋಖಂಡೆ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Nov 13, 2023 | 6:42 PM

ಸುಶಾಂತ್ ಸಿಂಗ್ ರಜಪೂತ್ ಅವರು ಅಂಕಿತಾ ಲೋಖಂಡೆ (Ankita Lokhande) ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದರು. ಹಲವು ವರ್ಷಗಳ ಕಾಲ ಇವರು ಸುತ್ತಾಟ ನಡೆಸಿದ್ದರು. ಆದರೆ, ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಬೇರೆ ಆಗುವುದಕ್ಕೆ ಕಾರಣ ಏನು ಎಂಬುದು ತಮಗೂ ಗೊತ್ತಿಲ್ಲ ಎಂದಿದ್ದರು ಅಂಕಿತಾ. ಇದೆಲ್ಲ ಆಗಿ ಹಲವು ವರ್ಷ ಕಳೆದಿದೆ. ಆ ಬಳಿಕ ಅಂಕಿತಾ ಅವರು ವಿಕ್ಕಿ ಜೈನ್ (Vicky Jain) ಅವರನ್ನು ಮದುವೆ ಆದರು. ವಿಶೇಷ ಎಂದರೆ ಇಬ್ಬರೂ ಈಗ ‘ಬಿಗ್ ಬಾಸ್ ಹಿಂದಿ ಸೀಸನ್ 17’ರ (Bigg Boss 17) ಸ್ಪರ್ಧಿಗಳಾಗಿದ್ದಾರೆ. ಇವರ ಮಧ್ಯೆ ಸಾಕಷ್ಟು ಜಗಳ ಏರ್ಪಡುತ್ತಿದೆ. ‘ನಮಗೆ ಮದುವೆ ಆಗಿದೆ ಎಂಬುದನ್ನೇ ಮರೆತುಬಿಡು’ ಎಂದು ವಿಕ್ಕಿಗೆ ಅಂಕಿತಾ ಹೇಳಿಕೊಂಡಿದ್ದಾರೆ. ಇವರ ಮಧ್ಯೆ ನಡೆಯುತ್ತಿರುವ ಜಗಳ ನೋಡಿ ವೀಕ್ಷಕರೇ ಅಚ್ಚರಿಗೊಂಡಿದ್ದಾರೆ. ಬಿಗ್ ಬಾಸ್​ ಮನೆಯಿಂದ ಬರುವುದರೊಳಗೆ ಇಬ್ಬರೂ ವಿಚ್ಛೇದನ ಪಡೆದುಕೊಳ್ಳಬಹುದು ಎನ್ನುವ ಮಾತು ಕೇಳಿ ಬಂದಿದೆ.

ಬಿಗ್ ಬಾಸ್​ಗೆ ಬಂದ ನಂತರದಲ್ಲಿ ಸ್ವಾರ್ಥ ಹೆಚ್ಚಾಗುತ್ತದೆ. ಅದೆಷ್ಟೇ ಆಪ್ತತೆ ಬೆಳೆದಿದ್ದರೂ ನಾವು ಗೆಲ್ಲಬೇಕು ಎನ್ನುವ ಛಲ ಬರುತ್ತದೆ. ಇದಕ್ಕೆ ವಿಕ್ಕಿ ಜೈನ್ ಹಾಗೂ ಅಂಕಿತಾ ಲೋಖಂಡೆ ಉತ್ತಮ ಉದಾಹರಣೆ. ಇಬ್ಬರೂ ಪತಿ, ಪತ್ನಿ ಆದ ಹೊರತಾಗಿಯೂ ಇವರ ಮಧ್ಯೆ ಭರ್ಜರಿ ಫೈಟ್ ಏರ್ಪಡುತ್ತಿದೆ. ಇವರು ಆಗಾಗ ಕಿತ್ತಾಡಿಕೊಳ್ಳುತ್ತಿದ್ದಾರೆ. ಹೊಸ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಅಂಕಿತಾ ಹಾಗೂ ವಿಕ್ಕಿ ಜಗಳ ಮಾಡಿಕೊಂಡಿದ್ದಾರೆ. ಈ ಜಗಳ ಆದ ಬಳಿಕ ಅಂಕಿತಾ ಅವರನ್ನು ಭೇಟಿ ಮಾಡಲು ವಿಕ್ಕಿ ತೆರಳಿದ್ದಾರೆ. ಈ ವೇಳೆ ಅಂಕಿತಾ ಸಿಟ್ಟಿನಿಂದ ಮಾತನಾಡಿದ್ದಾರೆ.

‘ಹೋಗು. ನೀನು ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ. ನಿನ್ನೊಂದಿಗೆ ಇದ್ದು ನಾನು ಹುಚ್ಚನಾಗುತ್ತಿದ್ದೇನೆ. ನಾವಿಬ್ಬರೂ ಮದುವೆಯಾಗಿದ್ದೇವೆ ಎಂಬುದನ್ನು ಮರೆತುಬಿಡು. ಇಂದಿನಿಂದ ನೀನು ಬೇರೆ, ನಾನು ಬೇರೆ. ನೀನು ನನ್ನನ್ನು ಬಳಸಿಕೊಂಡಿದ್ದೀಯ’ ಎಂದು ಅಂಕಿತಾ ಕೂಗಾಡಿದ್ದಾರೆ. ವಿಕ್ಕಿ ಜೈನ್ ಹಾಗೂ ಅಂಕಿತಾ ದಾಂಪತ್ಯದಲ್ಲಿ ಇರುವ ಬಿರುಕು ಪ್ರತಿ ದಿನವೂ ಕಂಡುಬರುತ್ತಿದೆ. ಶೋನಲ್ಲಿ ಇಬ್ಬರ ನಡುವೆ ಸಾಕಷ್ಟು ಜಗಳಗಳು ನಡೆದಿವೆ. ಇವರ ವರ್ತನೆಯನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದಾರೆ. ‘ಶೋ ಪೂರ್ಣಗೊಳ್ಳುವ ಮೊದಲೇ ಇವರ ವಿಚ್ಛೇದನ ಆದರೂ ಅಚ್ಚರಿ ಏನಿಲ್ಲ’ ಎಂದಿದ್ದಾರೆ ಅನೇಕರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಅಂದು ಕ್ಯಾಪ್ಟನ್​ ಆಗಿದ್ದ ನೀತು ವನಜಾಕ್ಷಿ ಇಂದು ಕಳಪೆ

ಸುಶಾಂತ್ ಜೊತೆ ಪ್ರೀತಿ:

ಸುಶಾಂತ್ ಸಿಂಗ್ ರಜಪೂತ್ ಹಾಗೂ ಅಂಕಿತಾ ಅವರು ಹಲವು ವರ್ಷ ಪ್ರೀತಿಯಲ್ಲಿದ್ದರು. ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ಮಾನವ್ ಹಾಗೂ ಅರ್ಚನಾ ಪಾತ್ರವನ್ನು ಇವರು ಮಾಡಿದ್ದರು. ತೆರೆಯ ಮೇಲೆ ನಟಿಸುತ್ತಾ ನಿಜ ಜೀವನದಲ್ಲೂ ಪ್ರೀತಿಸಲು ಆರಂಭಿಸಿದ್ದರು. ಇವರ ಪ್ರೀತಿಯಲ್ಲಿ ಹಲವು ಏಳು-ಬೀಳುಗಳು ಇದ್ದವು. 2016ರಲ್ಲಿ ಸುಶಾಂತ್ ಹಾಗೂ ಅಂಕಿತಾ ಬೇರೆ ಆದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.