ವಿಡಿಯೋ ಇದೆ! ಚಿಕ್ಕಮಂಡ್ಯದಲ್ಲಿ ಸಾವಿನ ಬಂಡಿ ಓಟ: ಪ್ರೇಕ್ಷಕರ ಮೇಲೆ ನುಗ್ಗಿದ ಎತ್ತಿನ ಬಂಡಿ, ಸ್ಥಳದಲ್ಲೇ ಉಸಿರು ಚೆಲ್ಲಿದ ರೈತ

ಇನ್ನೇನು ಎರಡು ಎತ್ತಿನ ಬಂಡಿಗಳು ತನ್ನ ಗುರಿ ತಲುಪ ಬೇಕಿತ್ತಷ್ಟೆ. ಆದ್ರೆ ಬೆದರಿದ ಎತ್ತುಗಳು ಪ್ರೇಕ್ಷಕರ ಗ್ಯಾಲರಿಯತ್ತ ನುಗ್ಗೇ ಬಿಟ್ಟಿತ್ತು.. ಎತ್ತಿನ ಬಂಡಿಗೆ ಸಿಲುಕಿ ಕೀಲಾರ ಗ್ರಾಮದ ನಾಗರಾಜ್ ಎಂಬ ರೈತ ಸ್ಥಳದಲ್ಲೆ ಅಸುನೀಗಿದ್ದಾರೆ

ವಿಡಿಯೋ ಇದೆ! ಚಿಕ್ಕಮಂಡ್ಯದಲ್ಲಿ ಸಾವಿನ ಬಂಡಿ ಓಟ: ಪ್ರೇಕ್ಷಕರ ಮೇಲೆ ನುಗ್ಗಿದ ಎತ್ತಿನ ಬಂಡಿ, ಸ್ಥಳದಲ್ಲೇ ಉಸಿರು ಚೆಲ್ಲಿದ ರೈತ
ಪ್ರೇಕ್ಷಕರ ಮೇಲೆ ನುಗ್ಗಿದ ಎತ್ತಿನ ಬಂಡಿ, ಸ್ಥಳದಲ್ಲೇ ಉಸಿರು ಚೆಲ್ಲಿದ ರೈತ
Updated By: ಸಾಧು ಶ್ರೀನಾಥ್​

Updated on: Jan 09, 2023 | 5:28 PM

ಎತ್ತಿನ ಬಂಡಿ ಓಟದ ಸ್ಪರ್ಧೆ ಸಾವಿನ ಓಟದ ಸ್ಪರ್ಧೆಯಾಗಿ ಬದಲಾಗಿದ್ದಾದ್ರು ಹೇಗೆ.. ಪ್ರೇಕ್ಷಕರ (spectator) ಗ್ಯಾಲರಿಯತ್ತ ಬಂಡಿ ತಿರುಗಿದ್ದಾದ್ರು ಎಲ್ಲಿ… ಬಂಡಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾದ್ರು ಹೇಗೆ ಅನ್ನೋದ್ರ ರಿಪೋರ್ಟ್ ನಿಮ್ಮ ಮುಂದೆ.

ಎತ್ತಿನ ಬಂಡಿ ಓಟ (bullock cart race) ಅಂದ್ರೆ ಗ್ರಾಮೀಣ ಭಾಗದಲ್ಲಿ ಸಿಕ್ಕಾ ಪಟ್ಟೆ ಫೇಮಸ್.. ಪಡ್ಡೆ ಹೈಕ್ಳಿಂದ ಹಿಡಿದು ಹಣ್ಣಣ್ಣು ಮುದುಕರು ಸಹ ಮುಗಿ ಬಿದ್ದು ಎತ್ತಿನ ಬಂಡಿ ಓಟದ ಸ್ಪರ್ಧೆಯನ್ನ ನೋಡ್ತಾರೆ.. ಹೆಣ್ಮಕ್ಳು ಬುತ್ತಿ ಕಟ್ಕೊಂಡು ಬಂದು ಪ್ರೇಕ್ಷಕರಾಗಿ ಕೂರ್ತಾರೆ.. ಇಂತಹ ಎತ್ತಿನ ಬಂಡಿ ಸ್ಪರ್ಧೆಯನ್ನ ಮಂಡ್ಯ ತಾಲೂಕಿನ ಚಿಕ್ಕ ಮಂಡ್ಯದಲ್ಲಿ (Chikkamandya) ಆಯೋಜನೆ ಮಾಡಲಾಗಿತ್ತು.. ಆದ್ರೆ ಎಲ್ಲರು ಸಡಗರ ಸಂಭ್ರಮದಿಂದ ಆಚರಿಸ್ಪಡುತ್ತಿದ್ದ ಎತ್ತಿನ ಬಂಡಿ ಸ್ಪರ್ಧೆ ಸಾವಿನ ಓಟದ ಸ್ಪರ್ಧೆಯಾಗಿ ಬದಲಾಗಿದೆ..ನೋಡ ನೋಡುತ್ತಿದ್ದಂತೆ ನಿಯಂತ್ರಣ ತಪ್ಪಿದ ಪರಿಣಾಮ ಪ್ರೇಕ್ಷಕರ ಮೇಲೆ ಹರಿದಿದೆ.. ನಾಗರಾಜು ಎಂಬ ಪ್ರೇಕ್ಷಕ ಎತ್ತಿನ ಬಂಡಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಪ್ರತಿ ವರ್ಷ ಎತ್ತಿನ ಬಂಡಿಯ ಓಟವನ್ನ ರೈತ ಮಿತ್ರ ಬಳಗ ಎಂಬ ಸಂಸ್ಥೆ ಆಯೋಜನೆ ಮಾಡುತ್ತೆ.. ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಎತ್ತಿನ ಬಂಡಿಯ ಓಟದ ಸ್ಪರ್ಧೆಗೆ ಜನ ಬರ್ತಾರೆ. ಅದೇ ರೀತಿ ಇಂದು ಕೂಡ ಬಂದಿದ್ರು.. ಸಾಗರೋಪಾದಿಯಲ್ಲಿ ಜನ ಸೇರಿದ್ರು.. ಎತ್ತಿನ ಬಂಡಿಯ ಓಟದ ಸ್ಪರ್ಧೆ ಕೂಡ ಚಾಲುವಾಗಿತ್ತು..

ಬೆದರಿದ ಎತ್ತುಗಳು ಪ್ರೇಕ್ಷಕರ ಗ್ಯಾಲರಿಯತ್ತ ನುಗ್ಗೇ ಬಿಟ್ಟಿತ್ತು..

 

ಪ್ರೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ರು.. ಎಲ್ಲರೂ ಸಡಗರ ಸಂಭ್ರಮದಿಂದ ಎತ್ತಿನ ಬಂಡಿಯ ಓಟದ ಸ್ಪರ್ಧೆಯನ್ನ ನೋಡಿ ಎಂಜಾಯ್ ಮಾಡ್ತಾಯಿದ್ರು. ಇನ್ನೇನು ಎರಡು ಎತ್ತಿನ ಬಂಡಿಗಳು ತನ್ನ ಗುರಿ ತಲುಪ ಬೇಕಿತ್ತಷ್ಟೆ. ಆದ್ರೆ ಬೆದರಿದ ಎತ್ತುಗಳು ಪ್ರೇಕ್ಷಕರ ಗ್ಯಾಲರಿಯತ್ತ ನುಗ್ಗೇ ಬಿಟ್ಟಿತ್ತು.. ಎತ್ತಿನ ಬಂಡಿಗೆ ಸಿಲುಕಿ ಕೀಲಾರ ಗ್ರಾಮದ ನಾಗರಾಜ್ ಎಂಬ ರೈತ ಸ್ಥಳದಲ್ಲೆ ಅಸುನೀಗಿದ್ರೆ. ಆತನ ಜೊತೆಯಿದ್ದ ಮೂರ್ನಾಲ್ಕು ಮಂದಿಗೆ ಗಂಭೀರ ಗಾಯವಾಗಿದೆ.

ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.. ಸೆಂಟ್ರಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಖಾಕಿ ಪಡೆ ತನಿಖೆ ನಡೆಸುತ್ತಿದೆ.

ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ

Published On - 11:31 am, Mon, 9 January 23