ಮಂಡ್ಯ: ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶ್ರೀರಂಗಪಟ್ಟಣ ತಾಲ್ಲೂಕು ಸಬ್ಬನಕುಪ್ಪೆ ಗ್ರಾಮದ ರೈತ ಮಹಿಳೆ ಭಾರತಿ ಕಣ್ಣೀರಿಟ್ಟರು. ಭಾರತಿ ಕುಟುಂಬಕ್ಕೆ ಪುನೀತ್ ಆರ್ಥಿಕ ನೆರವು ನೀಡಿದ್ದರು. ಭಾರತಿ ಅವರ ಪತಿ, ಕುಮಾರ್ 2015ರ ಜು.22ರಂದು ಆತ್ಮಹತ್ಯೆಗೆ ಶರಣಾಗಿದ್ದರು.
2015ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಶೂಟಿಂಗ್ ನಂತರ ಪುನೀತ್ ರಾಜ್‌ಕುಮಾರ್ ಜನರ ಕಷ್ಟಸುಖ ಕೇಳುತ್ತಿದ್ದರು. ‘ದೊಡ್ಮನೆ ಹುಡುಗ’ ಶೂಟಿಂಗ್ ವೇಳೆ ಆತ್ಮಹತ್ಯೆಗೆ ಶರಣಾಗಿದ್ದ ರೈತರ ಕುಟುಂಬಗಳಿಗೆ ಪುನೀತ್ ಆರ್ಥಿಕ ನೆರವು ನೀಡಿದ್ದರು. ಈ ವೇಳೆ ಭಾರತಿ ಅವರಿಗೂ ಪುನೀತ್ ಅವರಿಂದ ನೆರವು ಸಿಕ್ಕಿತ್ತು.
‘ಅಪ್ಪು ಇದ್ದಿದ್ರೆ ನಮ್ಮಂತಹ ಬಡ ಕುಟುಂಬಗಳಿಗೆ ನೆರವು ಸಿಗ್ತಿತ್ತು. ದೇವರು ಇಷ್ಟು ಬೇಗ ಅವರನ್ನು ಕರೆಸಿಕೊಂಡ’ ಎಂದು ಆತ್ಮಹತ್ಯೆಗೆ ಶರಣಾಗಿದ್ದ ರೈತ ಕುಮಾರ್ ಅವರ ಪತ್ನಿ ಭಾರತಿ ಕಣ್ಣೀರು ಹಾಕಿದರು.
ಸಾಮಾಜಿಕ ಜವಾಬ್ದಾರಿ ಮೆರೆದಿದ್ದ ಚಂದನವನದ ಚಂದದ ನಟ ಪುನೀತ್
ನಟ ಪುನೀತ್ ರಾಜ್ ಕುಮಾರ್ ತಮ್ಮ ಅಲ್ಪ ಜೀವಿತಾವಧಿಯಲ್ಲಿ ಅನೇಕರಿಗೆ ಖುದ್ದಾಗಿ ಸಹಾಯಹಸ್ತ ಚಾಚಿಸಿದ್ದರು. ಚನ್ನಗಿರಿ ತಾಲ್ಲೂಕಿನ ಕಣಸಾಲು ಬಡಾವಣೆಗೆಯ ಬಾಲಕಿ ಪ್ರೀತಿ ಅವರಿಗೆ ಸಹಾಯ ಮಾಡಿದ್ದರು ಎಂಬ ಸಂಗತಿ ಗೊತ್ತಾಗಿದೆ.
ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಅವರು ಚನ್ನಗಿರಿ ತಾಲ್ಲೂಕಿನ ಕಣಸಾಲು ಬಡಾವಣೆಗೆಯ ಬಾಲಕಿ ಪ್ರೀತಿ ಅವರಿಗೆ ಸಹಾಯ ಮಾಡಿದ್ದರು ಎಂಬ ಸಂಗತಿ ಗೊತ್ತಾಗಿದೆ. ಕುಮಾರ್ ಹಾಗೂ ಮಂಜುಳಾ ದಂಪತಿಯ ಪುತ್ರಿಯಾದ ಪ್ರೀತಿ 2017ರಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.
ಆಗ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಈ ದಂಪತಿ ಮಾಧ್ಯಮಗಳ ಮೂಲಕ ಸಹಾಯ ಯಾಚಿಸಿದ್ದರು. ಆ ವೇಳೆ ಪುನೀತ್ ಅವರು ನೆರವು ನೀಡಿದ್ದರು. ‘ಆ ವೇಳೆ ಭೇಟಿ ನೀಡಿದ ಪುನೀತ್ ರಾಜ್‌ಕುಮಾರ್ ಆ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೇ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಪೂರ್ತಿ ಬಿಲ್ 12.50 ಲಕ್ಷವನ್ನು ಭರಿಸಿದ್ದರು’ ಪ್ರೀತಿ ಅವರ ಮಾವ ಹನುಮಂತಪ್ಪ ಗೆ ತಿಳಿಸಿದರು.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್ಕೆ ಪ್ರೊಡಕ್ಷನ್ ಏನಾಗಲಿದೆ?
ಇದನ್ನೂ ಓದಿ: ಇಬ್ಬರಿಗೆ ಪುನೀತ್ ರಾಜ್‌ಕುಮಾರ್ ಕಣ್ಣುಗಳು ಅಳವಡಿಕೆ; ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
Published On - 3:54 pm, Sun, 31 October 21