ಮಂಡ್ಯ: ಮುಂದಿನ ವಿಧಾನಸಭಾ ಚುನಾವಣೆ (Assembly Election) ಟಿಕೆಟ್ಗಾಗಿ ಜೆಡಿಎಸ್ನಲ್ಲಿ (JDS) ಈಗಲೇ ಫೈಟ್ ಶುರುವಾದಂತೆ ಕಾಣುತ್ತಿದೆ. ಮಂಡ್ಯದ ನಾಗಮಂಗಲ ಕ್ಷೇತ್ರದ ಟಿಕೆಟ್ ನಿಡುವಂತೆ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಪಟ್ಟು ಬಿದ್ದಿದ್ದಾರೆ. ಕ್ಷೇತ್ರದಲ್ಲಿ ಇರುವ ಹಾಲಿ ಜೆಡಿಎಸ್ ಶಾಸಕ ಸುರೇಶ್ ಗೌಡಗೆ ಟಕ್ಕರ್ ಕೊಡಲು ಶಿವರಾಮೇಗೌಡ ಮುಂದಾಗಿದ್ದಾರೆ. ನಾಗಮಂಗಲದಲ್ಲಿ ಮತದಾರರನ್ನು ಭೇಟಿಮಾಡುತ್ತಿರುವ ಶಿವರಾಮೇಗೌಡ, ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇನೆ, ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡುತ್ತಾರೆ ಅಂತ ತಿಳಿಸಿದರು.
ಈವರೆಗೆ ನಾನು ಎಲ್ಲರನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಮುಂದೆ ನಾನೇ ಎಂಎಲ್ಎ ಆಗಬೇಕು ಅಂದುಕೊಂಡಿದ್ದೇನೆ. ಇದಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದೇನೆ. ನಾನು ಸೋತು ಮನೆ ಸೇರಿದ್ದೇನೆ. ಮುಂದಿನ ವಾರದಲ್ಲಿ ಮೂರು ದಿನ ಹಳ್ಳಿಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತೇನೆ. ಓಟ್ ಹಾಕಿಸಿಕೊಂಡವರು ಫೋನ್ಗೆ ಸಿಗಲ್ಲ ಅಂತ ಜನ ನನಗೆ ಫೋನ್ ಮಾಡಿ ಮಾತನಾಡುತ್ತಿದ್ದಾರೆ. ಸುರೇಶ್ ಗೌಡರಿಗೆ ಪಕ್ಷ ಉಳಿಸಬೇಕು ಅನಿಸಿದರೆ ಮುಂದಿನ ಚುನಾವಣೆಯಲ್ಲಿ ನನಗೆ ಬಿಟ್ಟುಕೊಡಲಿ. ಅವರು ಬೇಕಾದರೆ ಎಂಪಿಗೆ ನಿಂತುಕೊಳ್ಳಲಿ. ಅವರು ಇಂಗ್ಲೀಷ್, ಹಿಂದಿ, ಉರ್ದು ಚೆನ್ನಾಗಿ ಮಾತನಾಡುತ್ತಾರೆ. ಅವರು ಬೇಕಾದರೆ ಹೋಗಲಿ. ನಾವೇ ಸಪೋರ್ಟ್ ಮಾಡುತ್ತೇನೆ ಅಂತ ಮಂಡ್ಯದ ಕೊಪ್ಪದಲ್ಲಿ ಹೇಳಿಕೆ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಶಿವರಾಮೇಗೌಡ, ಸಿದ್ದರಾಮಯ್ಯ ಜೆಡಿಎಸ್ ಬಗ್ಗೆ ಸಹಾನುಭೂತಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿಚಾರ ಹೆಚ್ಚು ಮಾತನಾಡಬಾರದು ಅಂತ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಸಲಹೆ ನಿಡಿದರು. ಸಿದ್ದರಾಮಯ್ಯ ಜೆಡಿಎಸ್ ಮೂಲದಿಂದ ಬೆಳೆದು ಬಂದವರು. ಸಿದ್ದರಾಮಯ್ಯರಿಗೆ ಸಿಟ್ಟು ಜಾಸ್ತಿ. ನಮ್ಮ ಕುಮಾರಸ್ವಾಮಿ ಅವರು ಸುಮ್ನಿರದೆ ಜಾಡಿಸಿ ಬಿಡುತ್ತಾರೆ. ಅಣ್ಣ ತಮ್ಮಂದಿರ ಜಗಳದಂತೆ ಇಬ್ಬರ ಜಗಳ ನಡೆಯುತ್ತಲೇ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಒಳ್ಳೆಯ ವಾಗ್ಮಿ. ಜನಪರ ಆಡಳಿತ ಕೊಡುವ ಶಕ್ತಿ ಇರುವ ಮನುಷ್ಯ. ನಮ್ಮ ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಇರಬೇಕು ಅವರಿಗೆ. ಉಂಡ ಮನೆ, ಬೆಳೆದ ಮನೆ ಇವೆಲ್ಲನ್ನೂ ನೋಡಿಕೊಳ್ಳಬೇಕು. ಹಾಗಾಗಿ ಜೆಡಿಎಸ್ ಬಗ್ಗೆ ಸಹಾನುಭೂತಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ವಿಚಾರದಲ್ಲಿ ಹೆಚ್ಚಿಗೆ ಮಾತನಾಡಬಾರದು ಅಂತ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾಜಿ ಸಂಸದ ಶಿವರಾಮೇಗೌಡ ಹೇಳಿದರು.
ಇದನ್ನೂ ಓದಿ
ಶಿವಮೊಗ್ಗ: ವೇಗವಾಗಿ ಬಂದ ಟಿಪ್ಪರ್ ಕಾರಿಗೆ ಡಿಕ್ಕಿ! ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು
ಸಂಸ್ಕಾರ ಸಂಜೀವಿನಿ: ಈ 16 ಸಂಸ್ಕಾರಗಳು ಜೀವನವನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ, ಅವು ಯಾವುವು?