ಸಂಸ್ಕಾರ ಸಂಜೀವಿನಿ: ಈ 16 ಸಂಸ್ಕಾರಗಳು ಜೀವನವನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ, ಅವು ಯಾವುವು?

ಸಂಸ್ಕಾರ ಧರ್ಮ ಮಾರ್ಗದಲ್ಲಿ ನಡೆಯಲು ಅರ್ಹತೆ ಪಡೆಯಲು ಒಂದು ವ್ಯಕ್ತಿಗೆ ಮಾಡುವ ಧಾರ್ಮಿಕ ಕ್ರಿಯೆಗಳು. ಧಾರ್ಮಿಕ ಹಿಂದೂ ಧರ್ಮ (ವೈದಿಕ), ಜೈನ ಧರ್ಮ ಅನುಯಾಯಿಗಳು ಮತ್ತು ಬೌದ್ಧ ವಿಚಾರಧಾರೆಯ ಕೆಲವು ಪಂಥಗಳಲ್ಲಿ ವೈವಿಧ್ಯಮಯ ಧಾರ್ಮಿಕ ಕ್ರಿಯೆಗಳು ಇವೆ. ಸಂಸ್ಕಾರ ಪದವು ಸಾಮಾನ್ಯವಾಗಿ ಆಧುನಿಕ ವಿಚಾರದಲ್ಲಿ ಸಾಂಸ್ಕೃತಿಕ ಪರಂಪರೆ ಮತ್ತು ಅಭಿವೃದ್ಧಿಯನ್ನು ಸೂಚಿಸುತ್ತದೆ. ಉತ್ತಮ ನಡತೆ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ.

ಸಂಸ್ಕಾರ ಸಂಜೀವಿನಿ: ಈ 16 ಸಂಸ್ಕಾರಗಳು ಜೀವನವನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ, ಅವು ಯಾವುವು?
ಸಂಸ್ಕಾರ ಸಂಜೀವಿನಿ: ಈ 16 ಸಂಸ್ಕಾರಗಳು ಜೀವನವನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ, ಅವು ಯಾವುವು?
Follow us
| Updated By: ಸಾಧು ಶ್ರೀನಾಥ್​

Updated on:Jan 27, 2022 | 7:58 AM

ಸಂಸ್ಕಾರ ಸಂಜೀವಿನಿ: ಸಂಸ್ಕಾರಗಳು ಹಿಂದೂ ಧರ್ಮ (ವೈದಿಕ), ಜೈನ ಧರ್ಮ ಮತ್ತು ಬೌದ್ಧ ಧರ್ಮದಲ್ಲಿನ ಕೆಲವು ತತ್ವ, ಸಿದ್ಧಾಂತಗಳು. ಆಚರಣೆಗಳು, ಅನುಸರಣೆಗಳು. ಆಧುನಿಕ ನಡೆ ನುಡಿಗೆ ತಕ್ಕಂತೆ ಹೇಳುವದಾದರೆ ಸಂಸ್ಕಾರವು ಸಾಂಸ್ಕೃತಿಕ ಪರಂಪರೆ ಮತ್ತು ಲಾಲನೆ-ಪಾಲನೆಯನ್ನು ಸೂಚಿಸುತ್ತದೆ. ಸಂಸ್ಕಾರಗಳು ಪವಿತ್ರ ವಿಧಿಗಳು, ತ್ಯಾಗಗಳು ಮತ್ತು ಧಾರ್ಮಿಕ ಕ್ರಿಯಾವಿಧಿಗಳ ಒಂದು ಸರಣಿ ಮತ್ತು ಮಾನವ ಜೀವನದ ವಿವಿಧ ಘಟ್ಟಗಳನ್ನು ಗುರುತು ಮಾಡುತ್ತವೆ.

ಸಂಸ್ಕಾರ ಧರ್ಮ ಮಾರ್ಗದಲ್ಲಿ ನಡೆಯಲು ಅರ್ಹತೆ ಪಡೆಯಲು ಒಂದು ವ್ಯಕ್ತಿಗೆ ಮಾಡುವ ಧಾರ್ಮಿಕ ಕ್ರಿಯೆಗಳು. ಧಾರ್ಮಿಕ ಹಿಂದೂ ಧರ್ಮ (ವೈದಿಕ), ಜೈನ ಧರ್ಮ ಅನುಯಾಯಿಗಳು ಮತ್ತು ಬೌದ್ಧ ವಿಚಾರಧಾರೆಯ ಕೆಲವು ಪಂಥಗಳಲ್ಲಿ ವೈವಿಧ್ಯಮಯ ಧಾರ್ಮಿಕ ಕ್ರಿಯೆಗಳು ಇವೆ. ಸಂಸ್ಕಾರ ಪದವು ಸಾಮಾನ್ಯವಾಗಿ ಆಧುನಿಕ ವಿಚಾರದಲ್ಲಿ ಸಾಂಸ್ಕೃತಿಕ ಪರಂಪರೆ ಮತ್ತು ಅಭಿವೃದ್ಧಿಯನ್ನು ಸೂಚಿಸುತ್ತದೆ. ಉತ್ತಮ ನಡತೆ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಸಂಸ್ಕಾರ ವಂತ/ ಸಂಸ್ಕಾರ ಉಳ್ಳವನು ಎಂಬುದು ಸಾರ್ವತ್ರಿಕವಾಗಿ, ಸರಿಯಾದ ನಡತೆ ಮತ್ತು ವರ್ತನೆಯನ್ನು ಹೊಂದಿರುವ ಯಾರನ್ನಾದರೂ ಸೂಚಿಸುತ್ತದೆ. ಸಭ್ಯ -ಸರಿಯಾದ ನಡತೆಯುಳ್ಳವ- ಎನ್ನುವುದಕ್ಕೆ ಸಾಮಾನ್ಯವಾಗಿ ಈ ಪದ ಬಳಸಲಾಗುತ್ತದೆ.

ಸಂಸ್ಕಾರವು (samskara -sanskaar) ನೇಕ ಪವಿತ್ರ ವಿಧಿಗಳನ್ನು, ವೈದಿಕ ಬಲಿಗಳನ್ನು /ತ್ಯಾಗ ಮತ್ತು ಮಾನವ ಜೀವನದ ವಿವಿಧ ಹಂತಗಳಲ್ಲಿ ಗುರುತಿಸಲು ಮತ್ತು ನಿರ್ದಿಷ್ಟ ಆಶ್ರಮಕ್ಕೆ ಪ್ರವೇಶಕ್ಕೆ ಅಧಿಕಾರವನ್ನು ಪಡೆಯಲು ಅಥವಾ (ಜೀವನದ ಹಂತವನ್ನು) ಸೂಚಿಸುವುದಕ್ಕಾಗಿ ನಡೆಸುವ ಆಚರಣೆಗಳಲ್ಲಿ ಒಂದು. ಈ ಸಂಸ್ಕಾರ ಸರಣಿಯು. ಎಲ್ಲಾ ಮಾನವರು ಒಂದು / ಅನೇಕ ಧಾರ್ಮಿಕವಾದ ಸದ್ಗುಣವನ್ನು, ವೇದ ಸೂತ್ರವೊಂದರ ಅನುಗುಣವಾಗಿ, ದೇವರುಗಳ, ಪೂರ್ವಜರ ಮತ್ತು ಪಾಲಕರಿಗಾಗಿ ಅರ್ಪಿಸುವ ಕರ್ತವ್ಯದ ಜೊತೆ ಧಾರ್ಮಿಕ ಕ್ರಿಯೆಗಳನ್ನು ನಿರ್ವಹಿಸಲು ಮತ್ತು ದ್ವಿಜನಾಗಲು ಅಥವಾ ಈ ಕ್ರಿಯೆಗಳ ಆಚರಣೆಯನ್ನು ಪಾಲಿಸಲು (ದ್ವಿಜ =ಎರಡನೇ ಬಾರಿ ಹುಟ್ಟಿದಂತೆ ಆಗಲು) ಈ ಸಂಸ್ಕಾರಗಳ ಕ್ರಿಯೆ ನೆಡೆಸುವ/ಮಾಡುವ ಅಗತ್ಯವಿದೆ.

ಮೂಲತಃ ಈ ಎಲ್ಲಾ ಆಚರಣೆಗಳನ್ನು ವ್ಯಕ್ತಿಯ ಪ್ರಕೃತಿಯ (ದೇಹ, ಮನಸ್ಸು, ಇಂದ್ರಿಯಗಳು-ಅಂತರಂಗ) ಶುದ್ಧೀಕರಣದ ಮತ್ತು / ಅಥವಾ ಉತ್ತಮ ಗುಣಗಳನ್ನು ಪಡೆಯಲು /ಕೊಡಲು, ವ್ಯಕ್ತಿಗೆ ಧಾರ್ಮಿಕ-ಆಧ್ಯಾತ್ಮಿಕ ಜ್ಞಾನ ಮತ್ತು ಧಾರ್ಮಿಕ-ಆಚರಣೆಗಳನ್ನು ಅಭ್ಯಾಸ ಮಾಡುವ/ ಆಚರಣೆ ಮಾಡುವ , ಅದರ ನಡುವಿನ ಸಂಬಂಧವನ್ನು ಬೆಳೆಸುವ ಕ್ರಿಯೆ. ಇದು ಆಳವಾದ ಧಾರ್ಮಿಕ ಆಧ್ಯಾತ್ಮಿಕ ಜ್ಞಾನವನ್ನು ವ್ಯಕ್ತಿಯೊಬ್ಬನಿಂದ ಅಥವಾ ವೇದ ಪ್ರಣೀತ ಧಾರ್ಮಿಕ ಪ್ರಕ್ರಿಯೆಯು ನಡೆಯುವುದರಿಂದ ಪಡೆಯುವುದು ಇರಬಹುದು/ ಕೊಡುವುದು ಇರಬಹುದು. ಈ ಆಚರಣೆಗಳಲ್ಲಿ ನಿರತನಾಗಿರುವ ವ್ಯಕ್ತಿಯು/ಸಂಸ್ಕಾರ ಪಡೆಯುವ ವ್ಯಕ್ತಿಯು ಧಾರ್ಮಿಕ ಕ್ರಿಯಾವಿಧಿ ಜ್ಞಾನವನ್ನು ಹೊಂದಿರದೇ ಇರಬಹುದು.

ಸಂಸ್ಕಾರಗಳ ವಿಚಾರ ಅತ್ಯಂತ ಹಳೆಯದಾದ ಋಗ್ವೇದದಲ್ಲೂ ಕಂಡು ಬರುತ್ತವೆ. ಈಗ ಮದುವೆ, ಗರ್ಭಾದಾನ, ಅಂತ್ಯೇಷ್ಠಿ ಮತ್ತು ಇತರೆ ಸಂಸ್ಕಾರ ಆಚರಣೆಗಳಲ್ಲಿ ಋಗ್ವೇದದ ಮಂತ್ರಗಳನ್ನು ಬಳಸಲಾಗುತ್ತದೆ. ಈ ವೇದದ ಮಂತ್ರಗಳು ಸಾಮಾನ್ಯವಾಗಿ ಎಲ್ಲಾ ಧಾರ್ಮಿಕ ಆಚರಣೆಗಳ ಸಮಯದಲ್ಲಿ ಉಪಯೋಗಿಸುವುದನ್ನು ಕಾಣಬಹುದು. ಯಜುರ್ವೇದದಲ್ಲಿ ನಾವು ಆಚರಿಸುವ ಕ್ಷೌರಕರ್ಮ ಸಮಾರಂಭದ ಉಲ್ಲೇಖವಿದೆ. ಈ ಶ್ರೌತ ಅಥವಾ ಯಾಗದ ಆಚರಣೆಗಳಿಗೆ ಈ ವೇದ ಮಂತ್ರಗಳು. ಸಾಮಾನ್ಯವಾಗಿದೆ. ಅಥರ್ವಣವೇದವು ಮದುವೆ, ಉಪನಯನ , ಅಂತ್ಯಕ್ರಿಯೆ, ವೈದಿಕ ಶಿಕ್ಷಣ ಆರಂಭ ಇತ್ಯಾದಿ ದೀಕ್ಷಾ ರೀತಿಯ ಸಂಸ್ಕಾರಗಳಲ್ಲಿ ಉಪಯೋಗಿಸುವ ಸಂಸ್ಕಾರಗಳಿಗೆ ಸಂಬಂಧಿಸಿದ ಹಲವಾರು ಮಂತ್ರಗಳಿವೆ.

ಹಿಂದೂ ಧರ್ಮದಲ್ಲಿ 16 ಸಂಸ್ಕಾರಗಳು ಆಚರಣೆಯಲ್ಲಿವೆ: ಬಹುತೇಕ ಬ್ರಾಹ್ಮಣರ ಸಮುದಾಯಗಳು ಗರ್ಭಾವಸ್ಥೆ, ಜನನ, ಶಿಕ್ಷಣ, ಮದುವೆ ಮತ್ತು ಸಾವಿನಲ್ಲಿ – ಹೀಗೆ ತಮ್ಮ ಜೀವನದಲ್ಲಿ ಪ್ರಮುಖ ಘಟನೆಗಳಿಗೆ ಸಂಬಂಧಿಸಿದಂತೆ ಸಂಕೀರ್ಣ ಆಚರಣೆಗಳನ್ನು(ಧಾರ್ಮಿಕ ವಿಧಿಗಳನ್ನು) ಅನುಸರಿಸಲು ಸಂಸ್ಕಾರಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಷೋಡಶ ಸಂಸ್ಕಾರ ಎಂದು ಕರೆಯಲಾಗುತ್ತದೆ. ಸಂಸ್ಕಾರ ಆಚರಣೆಗಳು ದೇಹ, ಮನಸ್ಸು ಮತ್ತು ಆತ್ಮವನ್ನು ಉನ್ನತೀಕರಿಸಲು ಮಾಡುವ ಚಟುವಟಿಕೆಗಳು. ಅವು ವಸ್ತುವಿನ ಸ್ವರೂಪವನ್ನು ಬದಲಾಯಿಸುತ್ತವೆ ಮತ್ತು ಅದಕ್ಕೆ ಹೊಸ ಆಕಾರವನ್ನು ನೀಡುತ್ತವೆ. ಇದೇ ರೀತಿ ಹಿಂದೂಗಳ 16 ಸಂಸ್ಕಾರಗಳು.

1. ಪುಂಸವನ ಸಂಸ್ಕಾರ (PUMSAVAN): (ಭ್ರೂಣದ ದೈಹಿಕ ಆರೋಗ್ಯಕ್ಕಾಗಿ ಈ ಆಚರಣೆಯನ್ನು ಮಾಡಲಾಗುತ್ತದೆ) ಎಲ್ಲಾ ಪ್ರಜ್ಞಾಪೂರ್ವಕ ಪೋಷಕರು ಗರ್ಭದಲ್ಲಿರುವ ಮಗು (ಮಗ ಅಥವಾ ಮಗಳು) ಶಕ್ತಿ ಮತ್ತು ಚೈತನ್ಯದಿಂದ ತುಂಬಿರಬೇಕು ಎಂದು ಬಯಸುತ್ತಾರೆ. ಜತೆಗೆ ಆರೋಗ್ಯಕರವಾಗಿರಬೇಕು, ರೋಗ ಮುಕ್ತವಾಗಿರಬೇಕು, ದೀರ್ಘಕಾಲ ಬದುಕಬೇಕು, ಬುದ್ಧಿವಂತ ಮತ್ತು ಒಳ್ಳೆಯವರಾಗಿರಬೇಕು ಎಂದು ನೋಡಲಾಗುತ್ತದೆ.

2. ಜಾತಕರ್ಮ ಸಂಸ್ಕಾರ (JATAKARMA): ಮಗು ಹುಟ್ಟಿದ ಸಮಯದಲ್ಲಿ ಈ ಸಂಸ್ಕಾರವನ್ನು ಮಾಡಲಾಗುತ್ತದೆ. ಈ ಸಂಸ್ಕಾರವು ಶಿಶುವಿನಿಂದ ಸಾಕಷ್ಟು ಕೆಟ್ಟ ಶಕುನಗಳನ್ನು ನಾಶ ಮಾಡುತ್ತದೆ. ಮಗುವಿನ ಆರೋಗ್ಯ ಮತ್ತು ಮಗು ದೀರ್ಘಾಯುಷಿಯಾಗಿ ಜೀವಿಸಲು ಈ ವಿಧಿಯನ್ನು ಮಾಡಲಾಗುತ್ತದೆ.

3. ಅನ್ನ ಪ್ರಾಶನ (ANNAPRASHANA): (ಅಕ್ಷರಶಃ ಗಟ್ಟಿ ಲಘು ಆಹಾರ ಕೊಡುವುದು) ಮಗುವಿಗೆ ಆರು ತಿಂಗಳ ಕಳೆದ ನಂತರ ನಡೆಯುವ ಧಾರ್ಮಿಕ ಕ್ರಿಯೆ. ಭಾರತದಲ್ಲಿ ಮಗುವಿಗೆ, ಅಕ್ಕಿಯನ್ನು ಬೇಯಿಸಿ ಮಾಡಿದ ಅನ್ನವನ್ನು (ಘನ ಆಹಾರ) ಮೊದಲ ಬಾರಿಗೆ ತುಪ್ಪ ಬೆರೆಸಿ ಕೆಲವು ಅನ್ನದ ಅಗುಳುಗಳನ್ನು ಶಿಶುವಿಗೆ ತಿನ್ನಿಸುವುದು. ಇದು ಸಹ ಹಿಂದೂಗಳ ಪ್ರಮುಖ ಆಚರಣೆಯಾಗಿದೆ.

4. ಕರ್ಣವೇಧ ಸಂಸ್ಕಾರ (ಕಿವಿ ಚುಚ್ಚುವುದು) (KARNA VEDHA): ಸಾಮಾನ್ಯವಾಗಿ ಕಿವಿ ಚುಚ್ಚುವ ಶಾಸ್ತ್ರವನ್ನು ಮಗು ಜನನವಾದ 12ನೆಯ ದಿನ ಅಥವಾ ಒಂದು ವರ್ಷದ ಒಳಗೆ ಮಾಡುವುದು ರೂಢಿ. ಕೆಲವರು ಚೂಡಾಕರ್ಮದ ದಿನ ಮಾಡುತ್ತಾರೆ. ಅನುಭವವೀ ಅಕ್ಕಸಾಲಿಗನನ್ನು ಕರೆಸಿ ಕಿವಿಚುಚ್ಚುವ /ತೂತು ಮಾಡುವ ಸ್ಥಳದಲ್ಲಿ ಸುಣ್ಣದ ಬೊಟ್ಟನ್ನಿಟ್ಟು ಗುರುತು ಮಾಡಿ ಅದಕ್ಕಾಗಿ ಮಾಡಿದ ಚಿನ್ನದ ತಂತಿಯ ಕೊಂಡಿಯಿಂದ (ಚಿನ್ನದ ಮುರ) ಚುಚ್ಚಿ ತುದಿಯನ್ನು ಅದರ ಹಿಂದಿನ ಕೊಂಡಿಗೆ ಸುತ್ತಿ ಚುಚ್ಚದಂತೆ ಮಾಡುವುದು ರೂಢಿ.

5. ನಿಷ್ಕ್ರಮಣ ಸಂಸ್ಕಾರ (NISHKRAMANA): (ಶಿಶುವನ್ನು ಮೊದಲ ಬಾರಿಗೆ ಮನೆಯಿಂದ ಹೊರಗೆ ಕರೆದೊಯ್ಯುವ ಆಚರಣೆ) ಆರನೇ ಆಚರಣೆ ಅಂದರೆ ನಿಷ್ಕ್ರಮಣ ಸಂಸ್ಕಾರ. ನಿಷ್ಕ್ರಮಣ ಎಂದರೆ ಹೊರಹೋಗಲು. ಈ ಹಂತದವರೆಗೆ, ಮಗುವನ್ನು ಮನೆಯ ನಾಲ್ಕು ಗೋಡೆಗಳೊಳಗೆ ಮುಚ್ಚಿಡಲಾಗಿತ್ತು. ಆದರೆ ನಂತರ ಹೊರಗೆ ಹೋಗಬೇಕಾಗುತ್ತದೆ.

6. ನಾಮಕರಣ ಸಂಸ್ಕಾರ (NAMA KARANA): (ಮಗುವಿಗೆ ಹೆಸರನ್ನು ಇಡುವ ಆಚರಣೆ) ಜಾತಕರ್ಮ ಸಂಸ್ಕಾರದ ಬಳಿಕ ನಡೆಸುವ ಐದನೇ ಆಚರಣೆಯೇ ನಾಮಕಾರಣ. ಇದರಡಿಯಲ್ಲಿ ಗಂಡು ಮಗು ಅಥವಾ ಹುಡುಗಿಗೆ ಹೆಸರನ್ನು ಇಡಲಾಗುತ್ತದೆ.

7. ಚೌಲ/ ಚೂಡಾಕರ್ಮ ಸಂಸ್ಕಾರ (CHUDAKARANA): ಚೂಡಾಕರ್ಮ (ಅಕ್ಷರಶಃ ಕೂದಲು ಕತ್ತರಿಸಿ ಸರಿಪಡಿಸುವ ವ್ಯವಸ್ಥೆ) ಚೌಲ ಅಥವಾ ಮುಂಡನ ಎಂದು ಹೇಳುವರು. (ಅಕ್ಷರಶಃ ಕ್ಷೌರ ಕರ್ಮ) ಮೊದಲ ಬಾರಿಗೆ ಮಗುವಿನ ಕೂದಲು ಕತ್ತರಿಸುವ ಸಮಾರಂಭ. ಚೂಡಾ ಕರ್ಮದಲ್ಲಿ ಕೂದಲನ್ನು 1ನೇ ವರ್ಷ ಅಥವಾ 3 ನೇ ವರ್ಷದಲ್ಲಿ ಮೊದಲ ಬಾರಿಗೆ ಕತ್ತರಿಸುವ ಕ್ರಿಯೆ.

8. ಉಪನಯನ ಸಂಸ್ಕಾರ (UPANAYAN): ಉಪನಯನ ಸಂಸ್ಕಾರದಲ್ಲಿ ಮುಖ್ಯ ಕಾರ್ಯವೆಂದರೆ ಯಜ್ಞೋಪವೀತವನ್ನು (ಬ್ರಾಹ್ಮಣ ಪವಿತ್ರ ದಾರ) ಮಾಡುವುದು. ಗೃಹ್ಯಸೂತ್ರದ ಪ್ರಕಾರ ಬ್ರಾಹ್ಮಣರಿಗೆ (ಬೌದ್ಧ ಸಮುದಾಯವೂ) ಹುಟ್ಟಿದ ಎಂಟನೇ ವರ್ಷದಲ್ಲಿ, ಕ್ಷತ್ರಿಯರಿಗೆ (ಯೋಧ ಸಮುದಾಯ) 11ನೇ ವರ್ಷ ಮತ್ತು ವೈಶ್ಯರಿಗೆ (ವ್ಯಾಪಾರ ಸಮುದಾಯ) 12ನೇ ವರ್ಷದಲ್ಲಿ ಬ್ರಾಹ್ಮಣ ಪವಿತ್ರ ದಾರ ಧರಿಸುವ ಆಚರಣೆಯನ್ನು ಮಾಡಬೇಕು.

9. ವೇದಾರಂಭ ಸಂಸ್ಕಾರ (VEDARAMBHA): ವೇದಗಳ ಅಧ್ಯಯನವನ್ನು ಪ್ರಾರಂಭಿಸಲು ಈ ಸಂಸ್ಕಾರದ ಆಚರಣೆ ಮಾಡಲಾಗುತ್ತದೆ. ಮಗು ಮೂರು ಅಥವಾ ಐದು ವರ್ಷಗಳು ತುಂಬಿದಾಗ ಅಕ್ಷರಾರಂಭ ಮಾಡಲಾಗುತ್ತದೆ. ಮಗುವಿನ ನಾಲಿಗೆಯ ಮೇಲೆ, ಮಾತೃಭಾಷೆಯಲ್ಲಿ ಹರಿ ಶ್ರೀ, ಗಣಪತಯೇ ನಮಃ, ನಮಃ ಅವಿಘ್ನಮಸ್ತು ಎಂದು ಬರೆಯಲಾಗುವುದು; ಮತ್ತು ವರ್ಣಮಾಲೆಯ ಎಲ್ಲಾ ಅಕ್ಷರಗಳನ್ನು ಚಿನ್ನದ ಚೂರಲ್ಲಿ ಬರೆಯಲಾಗುತ್ತದೆ.

10. ಸಮಾವರ್ತನ (SAMAVARTANA): ಅಧ್ಯಯನಗಳು ಪೂರ್ಣಗೊಂಡಾಗ ಗೃಹಸ್ಥಾಶ್ರಮಕ್ಕೆ ಸಿದ್ಧತೆ. ಸಮಾವರ್ತನ (ಅಕ್ಷರಶಃ ಪದವಿ ಎಂದು ಅರ್ಥ) ಗುರುಕುಲದಲ್ಲಿ ಅಥವಾ ಪಾಠಶಾಲೆಯಲ್ಲಿ ವೇದದ ಔಪಚಾರಿಕ ಶಿಕ್ಷಣದ ಕೊನೆಯಲ್ಲಿ ನಡೆಸುವ ಸಮಾರಂಭ. ಈ ಸಮಾರಂಭದಲ್ಲಿ ವಿದ್ಯಾರ್ಥಿ ದೆಸೆ (ಬ್ರಹ್ಮಚರ್ಯ ಆಶ್ರಮ) ಅಂತ್ಯವಾಯಿತು. ಇದು ಜೀವನದ ಗೃಹಸ್ಥಾಶ್ರಮಕ್ಕೆ ಪ್ರವೇಶದ ಸಂಸ್ಕಾರ ಸಮಾರಂಭ.

11. ವಿವಾಹ ಸಂಸ್ಕಾರ (VIVAHA): ದಕ್ಷಿಣ ಏಷ್ಯಾದಲ್ಲಿ ಮದುವೆಗೆ ವಿವಾಹ ಎಂಬ ಪದವನ್ನು ವೈದಿಕ ಸಂಪ್ರದಾಯದಂತೆ ಮದುವೆಯನ್ನು ವಿವರಿಸಲು ಬಳಸಲಾಗುತ್ತದೆ. ವೈದಿಕ ಹಿಂದೂ ಸಂಪ್ರದಾಯದಲ್ಲಿ ಮದುವೆ ಅಡಿಯಲ್ಲಿ ಪತ್ನಿ ಮತ್ತು ಪತಿ ಇವರ ಆಜೀವ ಬದ್ಧತೆಯನ್ನು ವಿವಾಹ ಸಂಸ್ಕಾರವೆಂದು (ಪವಿತ್ರ ವಿಧಿಯೆಂದು), ತಿಳಿಯಲಾಗುತ್ತದೆ. ಮದುವೆ ಸ್ವರ್ಗದಲ್ಲಿ ಮಾಡಿದ್ದು ಮತ್ತು ಒಂದು ಅಗ್ನಿಸಾಕ್ಷಿಯಾದ ಪವಿತ್ರವಾದ ದೈವಿಕ ಬಂಧ ಎಂದು ಭಾರತದಲ್ಲಿ ಪರಿಗಣಿಸಲಾಗುತ್ತದೆ. ಇದು ಕುಲಾಚಾರ ಮತ್ತು ದೇಶಾಚಾರ ಪದ್ದತಿಯನ್ನು ಒಳಗೊಂಡಿದ್ದು ವಿಭಿನ್ನ ಆಚರಣೆಗಳಿವೆ. ಹಿಂದೂಗಳಲ್ಲಿ ಹೆಂಡತಿ ಗಂಡನ (ಜೊತೆ) ಮನೆಗೆ ಹೋಗುವ ಕ್ರಿಯೆ (ವಿ +ವಾಹ: ವಿಶಿಷ್ಟವಾಗಿ-ಹೋಗುವುದು).

12. ಗರ್ಭದಾನ ಸಂಸ್ಕಾರ (GARBADHAN): (ಪತ್ನಿಯನ್ನು, ದೇಹ ಸಂಬಂಧದಿಂದ ಗರ್ಭವತಿಯನ್ನಾಗಿ ಮಾಡುವುದು) ಗರ್ಭಾದಾನ ಸಂಸ್ಕಾರವು, ಅಕ್ಷರಶಃ, ದೇಹ ಸಂಪರ್ಕದಿಂದ, ಪತ್ನಿಗೆ ಗರ್ಭಧಾರಣೆ ನೀಡುವುದು. ಇದು ಪ್ರತಿ ವೈವಾಹಿಕ ಒಕ್ಕೂಟದ ನಂತರ (ತಕ್ಷಣ) ಮೊದಲ ಪವಿತ್ರ ವಿಧಿ. ಇಬ್ಬರೂ ಕೂಡುವ ಮೊದಲು ಹಲವಾರು ಧಾರ್ಮಿಕ ವಿಧಿಗಳು ಇವೆ.

13. ಸೀಮಂತೋನ್ನಯನ (SEEMANTONAYAN): ಸೀಮಂತೋನ್ನಯನವು (ಅಕ್ಷರಶಃ, ಕೂದಲು ಬಾಚಿ ಬೈತಲೆ ಮಾಡುವುದು /ವಿಭಾಗಿಸುವುದು.) ಈ ಸಂಸ್ಕಾರವು ಮಹಿಳೆಯ ಮೊದಲ ಗರ್ಭಧಾರಣೆಯ ನಾಲ್ಕನೇ ಅಥವಾ ಐದನೇ ತಿಂಗಳಲ್ಲಿ ನಡೆಸಲಾಗುತ್ತದೆ. ಸೀಮಂತೋನ್ನಯನವು ಗರ್ಭಾವಸ್ಥೆಯ ನಿರ್ಣಾಯಕ ಅವಧಿಯಲ್ಲಿ ತಾಯಿ ರಕ್ಷಣೆಗಾಗಿ ನಡೆಸಲಾಗುತ್ತದೆ.

14. ವಾನಪ್ರಸ್ಥ ಸಂಸ್ಕಾರ (VANPRASTHA): (ಕಠಿಣ ಜೀವನಕ್ಕಾಗಿ ಮನೆ ಬಿಟ್ಟು ಹೋಗುವ ಆಚರಣೆ) ಒಬ್ಬ ವ್ಯಕ್ತಿ ಮದುವೆಯಾದ ನಂತರ, ಮಕ್ಕಳನ್ನು ಹೊತ್ತುಕೊಂಡು, ಸರಿಯಾದ ರೀತಿಯಲ್ಲಿ ಮದುವೆಯಾಗಿ ಮೊಮ್ಮಕ್ಕಳನ್ನು ಹೊಂದಿದಾತ – ಕಾಡಿನಲ್ಲಿ ಹೋಗಿ ಕಠಿಣ ಜೀವನವನ್ನು ನಡೆಸಬೇಕು ಮತ್ತು ಧರ್ಮಗ್ರಂಥಗಳ ಅಧ್ಯಯನ ಮತ್ತು ಸ್ವಯಂ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಾನಪ್ರಸ್ಥ ಸಂಸ್ಕಾರ ಸೂಚಿಸುತ್ತದೆ. ತಮ್ಮ ಚರ್ಮ ಮೆತ್ತಗಾಗುವುದು, ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಮತ್ತು ಮೊಮ್ಮಕ್ಕಳನ್ನು ಪಡೆದ ನಂತರ ವ್ಯಕ್ತಿ ಕಾಡಿನಲ್ಲಿ ಆಶ್ರಯ ಪಡೆಯಬೇಕು.

15. ಸಂನ್ಯಾಸ ಸಂಸ್ಕಾರ / ಸಂನ್ಯಾಸ ಆಶ್ರಮ (SANYAS): ಸಂನ್ಯಾಸ ಎಂಬ ಪದದ ಅಕ್ಷರಶಃ ಅರ್ಥವೆಂದರೆ ಒಬ್ಬರ ಹೆಗಲಿನಿಂದ ಬಾಂಧವ್ಯದ ಹೊರೆಯನ್ನು ಬದಿಗಿಟ್ಟು, ತ್ಯಜಿಸುವುದು ಮತ್ತು ವಿದಾಯ ಹೇಳುವುದು. ಭೂಮಿಯ ಮೇಲಿನ ಉಳಿದ ಜನರ ಒಳಿತಿಗಾಗಿ ಲೌಕಿಕ ಮೋಹ ಮತ್ತು ಪಕ್ಷಪಾತದ ಎಲ್ಲ ಭ್ರಮೆಗಳನ್ನು ಇದು ಬಿಟ್ಟುಬಿಡುತ್ತದೆ.

16. ಅಂತ್ಯೇಷ್ಟಿ ಸಂಸ್ಕಾರ (Antyesthi): ಇದು ಭೂಮಿಯ ಮೇಲಿನ ಪ್ರವಾಸದ ಸಮಯದಲ್ಲಿ ಮಾಡಿದ ಕೊನೆಯ ಸಂಸ್ಕಾರವಾಗಿದೆ. ವ್ಯಕ್ತಿಯು ಸತ್ತ ನಂತರ, ವೇದಗಳಲ್ಲಿ ಉಲ್ಲೇಖಿಸಲಾದ ವಿವಿಧ ತಂತ್ರಗಳ ಪ್ರಕಾರ, ದೇಹವನ್ನು ಬೆಂಕಿಗೆ ನೀಡಲಾಗುತ್ತದೆ. ಈ ಆಚರಣೆಯ ಇತರ ಹೆಸರುಗಳು ನರಮೇಧ, ನರಯಾಗ, ಪುರುಷ್ಯಾಗ. ಸಾವಿನ ನಂತರ ಆತ್ಮವು ಯಮಲೋಕಕ್ಕೆ ಹೋಗುತ್ತದೆ ಎಂಬ ನಂಬಿಕೆ ಕೇವಲ ಭ್ರಮೆ. ಈ ಭ್ರಮೆಯ ಆಧಾರವು ಗರುಡ ಪುರಾಣವು ಇತ್ಯಾದಿಗಳಲ್ಲಿ ಕಂಡುಬರುತ್ತದೆ. (ಸತ್ಸಂಗ ಸಂಗ್ರಹ)

Published On - 6:41 am, Thu, 27 January 22