Respect Old People: ಹಿರಿಯರು ಮನೆಯ ಲಕ್ಷಣ, ಈ ಹಿರಿಯ ಸಂಪ್ರದಾಯಗಳನ್ನು ಆಚರಿಸೋಣ ಬನ್ನೀ

ಮನೆಯ ಸಮೃದ್ದಿ ಮತ್ತು ಮನದ ಸಾತ್ವಿಕತೆಗಾಗಿ ಕೆಲವು ಸಲಹೆಗಳು ಇಲ್ಲಿವೆ. ನಿಮಗೆ ಸಂಯಮ, ಸಮಯ ಇಲ್ಲದಿದ್ದರೂ ಈ ನಿಯಮಗಳಲ್ಲಿ ಕೆಲವನ್ನಾದರೂ ಪಾಲಿಸಿ. ಅದರಿಂದ ತಾನಾಗಿಯೇ ನಿಮ್ಮ ಮನ-ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ.

Respect Old People: ಹಿರಿಯರು ಮನೆಯ ಲಕ್ಷಣ, ಈ ಹಿರಿಯ ಸಂಪ್ರದಾಯಗಳನ್ನು ಆಚರಿಸೋಣ ಬನ್ನೀ
Respect Old People: ಹಿರಿಯರು ಮನೆಯ ಲಕ್ಷಣ, ಈ ಹಿರಿಯ ಸಂಪ್ರದಾಯಗಳನ್ನು ಆಚರಿಸೋಣ ಬನ್ನೀ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 26, 2022 | 6:06 AM

ಮನೆಯ ಸಮೃದ್ದಿ ಮತ್ತು ಮನದ ಸಾತ್ವಿಕತೆಗಾಗಿ ಕೆಲವು ಸಲಹೆಗಳು ಇಲ್ಲಿವೆ. ನಿಮಗೆ ಸಂಯಮ, ಸಮಯ ಇಲ್ಲದಿದ್ದರೂ ಈ ನಿಯಮಗಳಲ್ಲಿ ಕೆಲವನ್ನಾದರೂ ಪಾಲಿಸಿ. ಅದರಿಂದ ತಾನಾಗಿಯೇ ನಿಮ್ಮ ಮನ-ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ. ಹಣದಿಂದ ನಾವು ಏನೆಲ್ಲ ಖರೀದಿಬಹುದು, ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನಲ್ಲ! ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟ ಈ ಹಿರಿಯ ಸಂಪ್ರದಾಯಗಳನ್ನು (respect) ಆಚರಿಸಿದಾಗ ಮಾತ್ರ ಸಾಧ್ಯ. ಹಿರಿಯರು (senior citizens) ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ, ಹಿರಿಯರು (elders) ಮನೆಯ ಲಕ್ಷಣ (Elderly care), ಅವರಿಲ್ಲದ ಮನೆ ಭಣ ಭಣ!

ನಮ್ಮ ಹಿರಿಯರನ್ನು ಗೌರವಿಸುವ ಸಲುವಾಗಿ ನಿಯಮ ಪಾಲಿಸಿ:

1. ಅವರ ಮುಂದೆ ಕುಳಿತಾಗ ಮೊಬೈಲ್​​ಗಳನ್ನು ದೂರವಿಡಿ

2. ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ, ಮಧ್ಯದಲ್ಲೇ ನಿಲ್ಲಿಸಬೇಡಿ

3. ಅವರ ಅಭಿಪ್ರಾಯಕ್ಕೆ ಮನ್ನಣೆ-ಮಣೆ ಹಾಕಿ

4. ಅವರ ಜೊತೆ ಮಾತಾಡುವಾಗ ಚಿತ್ತವಿಡಿ

5. ಅವರ ಜೊತೆ ಇರುವಾಗ ಗೌರವದಿಂದ ನಡೆದುಕೊಳ್ಳಿ

6. ಸಂತೋಷದ ವಿಷಯ ಹೆಚ್ಚಾಗಿ ಹಂಚಿಕೊಳ್ಳಿ

7. ದುಖ:ದ ವಿಷಯ ಆದಷ್ಟು ದೂರವಿಡಿ

8. ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿ

9. ಅವರ ಸಂತೋಷದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿ

10. ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ

11. ಅವರ ಮುಂದೆ ಕುಳಿತಾಗ ಧ್ಯಾನದಲ್ಲಿರುವಂತೆ ಇರಬೇಕು- ಏಕಾಗ್ರತೆ ಇರಲಿ, ಬೇರೆಯವರ ಜೊತೆ ಮಾತಾಡಬೇಡಿ

12. ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ, ಧನ್ಯತಾಭಾವ ಮೂಡಿರಲಿ

13. ಅವರ ಮಾತುಗಳನ್ನು ತೆಗಳಬೇಡಿ, ಹಿಯಾಳಿಸಬೇಡಿ

14. ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ

15. ಅವರ ವಯಸ್ಸಿಗೆ ಗೌರವ ಕೊಡಿ

16. ಅವರ ಮುಂದೆ ಅವರ ಮಕ್ಕಳು, ಅವರ ಆಪ್ತರನ್ನು ಹೀಗಳೆಯಬೇಡಿ

17. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ

18. ಅವರ ಮುಂದೆ ಜೋರಾಗಿ ಮಾತನಾಡಬೇಡಿ

19. ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ

20. ಅವರ ಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ

21. ಅವರ ನ್ಯೂನ್ಯತೆಯನ್ನು ಪದೇ ಪದೇ ಎತ್ತಿ ತೋರಿಸಬೇಡಿ

22. ಸಣ್ಣ ಸಣ್ಣ ಬಳಲಿಕೆಯನ್ನೂ ಅವರ ಮುಂದೆ ಹೇಳಬೇಡಿ

23. ಅವರ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ

24. ನಿಮ್ಮ ಕಷ್ಟಗಳನ್ನೇ ಪದೇ ಪದೆ ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ

25. ಅವರು ಏನಾದರೂ ತಪ್ಪು ಮಾಡಿದರೆ ನಗಾಡಬೇಡಿ, ನೋಡಿಯೂ ನೋಡದಹಾಗೆ ಇದ್ದುಬಿಡಿ (ನಿತ್ಯಸತ್ಯ ಸತ್ಸಂಗ್ -ಸಂಗ್ರಹ)

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್