ಹಸಿರು ಧ್ವಜ ತೆಗೆದು ಕೇಸರಿ ಬಾವುಟ ನೆಟ್ಟಿದ್ದ ಹಿಂದೂ ಕಾರ್ಯಕರ್ತ ಅರೆಸ್ಟ್: ಶ್ರೀರಂಗಪಟ್ಟಣದಲ್ಲಿ ಬಿಗುವಿನ ವಾತಾವರಣ

| Updated By: ವಿವೇಕ ಬಿರಾದಾರ

Updated on: Dec 10, 2022 | 11:11 PM

ಶ್ರೀರಂಗಪಟ್ಟಣ ಪೊಲೀಸ್​ ಠಾಣೆ ಎದುರು ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ.

ಹಸಿರು ಧ್ವಜ ತೆಗೆದು ಕೇಸರಿ ಬಾವುಟ ನೆಟ್ಟಿದ್ದ ಹಿಂದೂ ಕಾರ್ಯಕರ್ತ ಅರೆಸ್ಟ್:  ಶ್ರೀರಂಗಪಟ್ಟಣದಲ್ಲಿ ಬಿಗುವಿನ ವಾತಾವರಣ
ಹಿಂದೂ ಕಾರ್ಯಕರ್ತರ ಪ್ರತಿಭಟನೆ
Follow us on

ಮಂಡ್ಯ: ಶ್ರೀರಂಗಪಟ್ಟಣ ಪೊಲೀಸ್​ ಠಾಣೆ (srirangapatna police station) ಎದುರು ಹಿಂದೂ ಸಂಘಟನೆ ಕಾರ್ಯಕರ್ತರು (Hindu Activists) ಪ್ರತಿಭಟನೆ ಮಾಡುತ್ತಿದ್ದಾರೆ. ಡಿ. 4 ರಂದು ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆದಿತ್ತು. ಈ ವೇಳೆ ಹಿಂದೂ ಪರ ಕಾರ್ಯಕರ್ತ ಮನೆ ಮೇಲಿದ್ದ ಮುಸ್ಲಿಂ ಹಸಿರು ಧ್ವಜ ತೆಗೆದು ಕೇಸರಿ ಬಾವುಟ ನೆಟ್ಟಿದ್ದನು. ಈ ಹಿನ್ನಲೆ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದರು. ಹೀಗಾಗಿ ಹಿಂದೂ ಕಾರ್ಯಕರ್ತರು ಪೊಲೀಸರ ವಿರುದ್ದ ಪ್ರತಿಭಟನೆ ಮಾಡುತ್ತಿದ್ದು, ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ ಹಿಂದೂ ಕಾರ್ಯಕರ್ತರು ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ತಡೆದಿದ್ದಾರೆ. ಈ ಸಂಬಂಧ ಜಾಮಿಯಾ ಮಸೀದಿ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶ್ರೀರಂಗಪಟ್ಟಣ ಸುತ್ತಾ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಜಾಮಿಯಾ ಮಸೀದಿ ಬಳಿಯೇ ಶಾಮಿಯಾನ ಹಾಕಿ ಪ್ರತಿಭಟನೆ

ನಿನ್ನೆ (ಡಿ.9) ರಾತ್ರಿ ಹನುಮ ಭಕ್ತನನ್ನ ವಶಕ್ಕೆ ಪಡೆದ ಶ್ರೀರಂಗಪಟ್ಟಣ ಟೌನ್ ಪೊಲೀಸರು ವಶಕ್ಕೆಪಡೆದ ವೇಳೆ ಪೊಲೀಸರು 53 ಮುಸ್ಲಿಂ ರಾಷ್ಟ್ರಗಳಿದ್ದು ವಿದೇಶದಿಂದ ಫಂಡಿಂಗ್ ಬರುತ್ತೆ ಇನ್ಮೇಲೆ ಮಾಲೆ ಹಾಕ್ಬೆಡ ಎಂದು ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಜಾಮಿಯಾ ಮಸೀದಿ ಬಳಿಯೇ ಶಾಮಿಯಾನ ಹಾಕಿ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:11 pm, Sat, 10 December 22